ಸೋಮವಾರ, ಜೂಲೈ 6, 2020
22 °C

ಜಪಾನ್ ಪರಮಾಣು ಸ್ಥಾವರ ಸ್ಪೋಟ: ವಿಕರಣ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್ ಪರಮಾಣು ಸ್ಥಾವರ ಸ್ಪೋಟ: ವಿಕರಣ ಭೀತಿ

ಟೋಕಿಯೊ:  ಜಪಾನಿನ  ಟೋಕಿಯೋದ ಈಶಾನ್ಯ ದಿಕ್ಕಿನಲ್ಲಿ 250 ಕಿ.ಮೀ ದೂರದಲ್ಲಿರುವ ~ಫುಕುಷಿಮಾ ನಂ.1~ ಎಂಬ ಪರಮಾಣು ಸ್ಥಾವರದಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ, ರಾಷ್ಟ್ರಾದ್ಯಂತ ಪರಮಾಣು ಭೀತಿ ಉಂಟು ಮಾಡಿದೆ ಈ ಮಧ್ಯೆ ಶುಕ್ರವಾರ  ಸಂಭವಿಸಿದ ಪ್ರಬಲ ಭೂಕಂಪ ಹಾಗೂ ಸುನಾಮಿಗೆ ಬಲಿಯಾದವರು ಅಥವಾ ಕಣ್ಮರೆಯಾದವರ ಸಂಖ್ಯೆ 1600ಕ್ಕೆ ಏರಿದೆ.

ಪರಮಾಣು ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವಾಗಿ ವಿಕರಣ ಸೋರಿಕೆಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ, ಮುನ್ನೆಚ್ಚರಿಕೆ ಕ್ರಮವಾಗಿ ಫುಕುಷಿಮಾ ಸ್ಥಾವರದ ಸುತ್ತಮುತ್ತಲ 10 ಕಿ.ಮೀ ವ್ಯಾಪ್ತಿಯಲ್ಲಿರುವ 45 ಸಾವಿರ ನಾಗರಿಕರನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಫುಕುಷಿಮಾ ನಂ.2ನೇ ಸ್ಥಾವರದ ಶೈಥ್ಯಾಗಾರದಲ್ಲೂ ಸಮಸ್ಯೆ ಕಂಡುಬಂದಿರುವುದರಿಂದ ಅದರ ಸುತ್ತಮುತ್ತಲ ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಾವರದಲ್ಲಿ ಪರಮಾಣು ಕರಗಿರುವುದು ಪತ್ತೆಯಾಗಿದೆ. ಪ್ರಭಲ ಭೂಕಂಪದಿಂದ ಶೈಥ್ಯಾಗಾರ ವ್ಯವಸ್ಥೆಗೆ ಹಾನಿಯಾದ ಕಾರಣ ಸೀಸಿಯಮ್ ಎಂಬ ಪರಮಾಣು ಫುಕುಷಿಮಾ ಸ್ಥಾವರದ ಬಳಿ ಪತ್ತೆಯಾಗಿದೆ ಎಂದು ಪರಿಮಾಣು ಸುರಕ್ಷತಾ ಸಮಿತಿಯ ತಿಳಿಸಿದೆ.

ಭೂಕಂಪದಿಂದಾಗಿ ಶನಿವಾರ ಬೆಳಿಗ್ಗೆ ಪರಮಾಣು ಕಂಬಿಗಳು ವಾತಾವರಣಕ್ಕೆ ತೆರೆದುಕೊಂಡಿವೆ. ಜತೆಗೆ ಸ್ಥಾವರದಲ್ಲಿದ್ದ ನೀರು ಸಹ ಆವಿಯಾದ ಕಾರಣ ಪರಮಾಣು ಕರಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸ್ಥಾವರದೊಳಗಿದ್ದ ಯುರೇನಿಯಂ ಇಂಧನ ಕರಗಿದೆ.

ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸ್ಥಾವರವನ್ನು ಸ್ಥಗಿತಗೊಳಿಸಲಾಯಿತು. ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕ ಪಡುವ ಅಗತ್ಯವಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದೆವು. ಈಗ ಸಧ್ಯದ ಪರಿಸ್ಥಿತಿಯಲ್ಲಿ ಯುರೇನಿಯಂ ಕಂಬಿಗಳನ್ನು ತಕ್ಷಣವೇ ತಣ್ಣಗಾಗಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ವಿಕರಣ ಸೂಸುವಿಕೆ ಹೆಚ್ಚಾಗಲಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಟೋಕಿಯೊ ವಿಶ್ವವಿದ್ಯಾಲಯದ ಪ್ರೊಫೆಸರ್ ನಾಟೊ ಸಿಕಿಮೂರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಪಾನ್ ಸರ್ಕಾರ, ಭೂಕಂಪ ಸಂಭವಿಸಿದ ಪ್ರದೇಶದಲ್ಲಿರುವ ಐದು ಸ್ಥಾವರಗಳಲ್ಲಿ ಪರಮಾಣು ಆವಿ ಪತ್ತೆಹಚ್ಚಲಾಗುತ್ತಿದೆ. ಹಾನಿಗೊಂಡ ಪರಮಾಣ ಸ್ಥಾವರಗಳಿಗೆ ಜಪಾನಿನಲ್ಲಿರುವ ಅಮೆರಿಕದ ವಾಯುಸೇನೆಯು ಕೂಲೆಂಟ್ ಸರಬರಾಜು ಮಾಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲೇರಿ ಕ್ಲಿಂಟನ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.