ಮಂಗಳವಾರ, ಜೂನ್ 15, 2021
20 °C

ಜಪಾನ್ ಸುರಕ್ಷಿತ; ಪುನಃ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): `ಅಣು ಸೋರಿಕೆ, ಸುನಾಮಿ ಮತ್ತು ಭೂಕಂಪದಿಂದ ತತ್ತರಿಸಿದ್ದ ತಮ್ಮ ದೇಶ ಈಗ ಮತ್ತಷ್ಟು ಸುರಕ್ಷಿತ ಮತ್ತು ಚೇತರಿಸಿಕೊಂಡಿದೆ~ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಅಕಿಟಾಕ್ ಸೇಕಿ ಹೇಳಿದ್ದಾರೆ.ಜಪಾನ್‌ನಲ್ಲಿ ಸಂಭವಿಸಿದ್ದ ಸುನಾಮಿ ಮತ್ತು ಭೂಕಂಪಕ್ಕೆ ಒಂದು ವರ್ಷ ಸಂದ ಬಳಿಕ ಭಾನುವಾರ ಇಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, `ಈ ದುರಂತದಲ್ಲಿ ಸುಮಾರು 15 ಸಾವಿರ ಜನರು ಮೃತರಾಗಿದ್ದಾರೆ. ಘಟನೆ ಬಳಿಕ ಪುನ ರುಜ್ಜೀವನಗೊಂಡಿರುವ ದೇಶವನ್ನು ಕಣ್ಣಾರೆ ನೋಡಲು ಜಪಾನ್‌ಗೆ ಹೋಗಿ~ ಎಂದರು.`ದುರಂತದ ಬಳಿಕ 71,124 ಜನರನ್ನು ಸ್ಥಳಾಂತರಿಸಲಾಗಿದ್ದು, ತಮ್ಮ ದೇಶ ಅತೀ ಬೇಗ ಸುಧಾರಿಸಿದೆ~ ಎಂದು ಹೇಳಿದರು. `ಜಪಾನ್‌ನಲ್ಲಿ ದುರಂತ ಸಂಭವಿಸಿದಾಗ ಭಾರತ ಸಹಾಯ ಹಸ್ತ ಚಾಚಿದ್ದು, ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದೆ~ ಎಂದು ಶ್ಲಾಘಿಸಿದರು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ ರೆಡ್ಡಿ ಮಾತನಾಡಿ, ಜಪಾನ್ ಜನರಿಗೆ ಭಾರತೀಯರ ಬೆಂಬಲ ಇದೆ ಎಂದರು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.