ಭಾನುವಾರ, ಮೇ 16, 2021
22 °C

ಜಮಾತೆ ಇಸ್ಲಾಮೀ ಹಿಂದ್‌ನಿಂದ ಸೌಹಾರ್ದ ಭವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ಜನಸೇವೆ ಮಾಡುವವರು ನೈಜ ಫಲಾನುಭಾವಿಗಳನ್ನು ಗುರ್ತಿಸಿ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಉಳ್ಳವರಿಗೂ ಇಲ್ಲದವರಿಗೂ ಮಧ್ಯೆ ಅಂತರ ಹೆಚ್ಚಾಗುತ್ತದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಗೋಣಿಕೊಪ್ಪ ಸಮೀಪದ ಮಾಯಮುಡಿ ಗ್ರಾಮ ಪಂಚಾಯಿತಿಯ ಚನ್ನಂಕೋಲ್ಲಿ ಪೈಸಾರಿಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ~ವಸತಿ ಹೀನರಿಗೆ ಗೃಹ ಯೋಜನೆ~ಯಡಿಯಲ್ಲಿ ನಿರ್ಮಿಸಲಾಗಿರುವ ಸೌಹಾರ್ದ ಭವನದ ಕೀಲಿ ಕೈ ಹಸ್ತಾಂತರಿಸಿ ಅವರು ಮಾತನಾಡಿದರು.ದೇಶದಲ್ಲಿ ಶೇಕಡಾ 35ರಷ್ಟು ಜನರು ಸ್ವಂತ ಮನೆಯಿಲ್ಲದವರು ಮಾತ್ರವಲ್ಲ ಆಕಾಶವೇ ಮೇಲ್ಛಾವಣಿ ಭೂಮಿಯೇ ಹಾಸು ಎಂಬ ಅರ್ಥದಲ್ಲಿ ಬದುಕುತ್ತ್ದ್ದಿದ್ದಾರೆ. ಇಂಥವರಿಗೆ ಸಮಾಜಸೇವಾ ಸಂಸ್ಥೆಗಳು ಮೂಲ ಸೌಕರ್ಯ ಒದಗಿಸಿ ಸಮಾಜಮುಖೀ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಜಮಾತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲಾ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹ್ಮಾನ್ ಮಾತನಾಡಿ, ಜಮಾತ್ ತನ್ನ ಆರು ದಶಕಗಳ ಇತಿಹಾಸದಲ್ಲಿ ~ಜನಸೇವೆಯೇ ದೇವಾರಾಧನೆ~ ಎಂಬ ಧ್ಯೇಯದಡಿಯಲ್ಲಿ ದೇಶದ ಉದ್ದಗಲಕ್ಕೂ ಜಾತಿ, ವರ್ಗ ಭೇದವಿಲ್ಲದೆ ಜನಸೇವೆ ಮಾಡುತ್ತ ಬಂದಿದೆ ಎಂದರು.ಸಿ.ವಿ.ಸೋಮಯ್ಯ, ವಿನ್ಸೆಂಟ್ ಬಾಬು, ಅಲ್ಪಸಂಖ್ಯಾತ ಮುಖಂಡ ಪಿ.ಕೆ.ಮುಹಮ್ಮದ್ ಚೆರುದು ಮೊದಲಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.