ಭಾನುವಾರ, ಜನವರಿ 19, 2020
27 °C

ಜಯದೇವ ಆಸ್ಪತ್ರೆಗೆ ಶ್ರೀಲಂಕಾ ಸಚಿವ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಗೆ ಸೋಮವಾರ ಶ್ರೀಲಂಕಾದ ಆರೋಗ್ಯ ಸಚಿವ ಮೈತ್ರಿ ಬಾಲಸಿರಿಸೇನ ಅವರು ಭೇಟಿ ನೀಡಿ, ಆಸ್ಪತ್ರೆಯ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದರು.ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ, ಶುಚಿತ್ವ, ಸಾಮಾನ್ಯ ರೋಗಿಗೆ ದೊರ­ಕುತ್ತಿರುವ ಚಿಕಿತ್ಸೆಯ ಬಗೆಗೆ ಪ್ರಶಂಸೆ ವ್ಯಕ್ತಪಡಿಸಿದರು.‘ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ಆಡಳಿತಾತ್ಮಕ ಮತ್ತು ರೋಗಿಗಳ ಚಿಕಿತ್ಸಾ ವ್ಯವಸ್ಥೆ­ಯನ್ನು ಶ್ರೀಲಂಕಾದ ಆಸ್ಪತ್ರೆಗಳಲ್ಲಿ ಅಳ­ವಡಿಸಿ­ಕೊಳ್ಳಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)