ಗುರುವಾರ , ಫೆಬ್ರವರಿ 25, 2021
17 °C

ಜವಳಿ ರಫ್ತು: ಭಾರತಕ್ಕೆ ಶುಕ್ರದೆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜವಳಿ ರಫ್ತು: ಭಾರತಕ್ಕೆ ಶುಕ್ರದೆಸೆ

ಜಾಗತಿಕ ಆರ್ಥಿಕ ರಂಗ ಸುಧಾರಣೆಯ ಹಾದಿಯಲ್ಲಿದೆ. ಸಹಜವಾಗಿಯೇ ಭಾರತದ ರಫ್ತಿಗೂ ಉತ್ತೇಜನ ಸಿಗತೊಡಗಿದೆ. ಹೆಚ್ಚಿನ ಜಾಗತಿಕ ಬೇಡಿಕೆಯಿಂದ ಪ್ರಯೋಜನ ಪಡೆದ ಉದ್ಯಮಗಳಲ್ಲಿ ಸಿದ್ಧ ಉಡುಪು ಕ್ಷೇತ್ರವೂ ಒಂದು. ಜವಳಿ ಉದ್ಯಮ ಎರಡನೇ ಅತಿ ದೊಡ್ಡ ಉದ್ಯೋಗ ನೀಡಿಕೆ ಕ್ಷೇತ್ರ. ಈ ಉದ್ಯಮ ದೇಶದಲ್ಲಿ ಸುಮಾರು 70 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ರಫ್ತು ಪ್ರಮಾಣ ಹೆಚ್ಚುತ್ತಿರುವುದು ಉದ್ಯಮದ ಪಾಲಿಗೆ ಶುಭವಾರ್ತೆಯಾಗಿದೆ.ಅಮೆರಿಕದಿಂದ ಬೇಡಿಕೆ ಹೆಚ್ಚಾಗಿದ್ದರಿಂದ 2011ರ ಫೆಬ್ರುವರಿಯಲ್ಲಿ ಕಳೆದ ವರ್ಷದ ಅದೇ ತಿಂಗಳಿಗೆ ಹೋಲಿಸಿದರೆ ಶೇ 24ರಷ್ಟು ಅಧಿಕ ಜವಳಿ ರಫ್ತು ಸಾಧಿಸಲಾಗಿದೆ. ಇದರ ಮೌಲ್ಯ ್ಙ 5,284 ಕೋಟಿ. ಜನವರಿಯಲ್ಲಿ ಶೇ 18ರಷ್ಟು ರಫ್ತು ಹೆಚ್ಚಳ ಸಾಧಿಸಲಾಗಿತ್ತು. 2010-11ರ ಆರಂಭದಲ್ಲಿ ತಿಂಗಳುವಾರು ರಫ್ತು ಈ ಮೊದಲಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯೇ ಇತ್ತು. 2010ರ ನವೆಂಬರ್‌ನಿಂದೀಚೆಗೆ ಪರಿಸ್ಥಿತಿ ಸುಧಾರಿಸತೊಡಗಿತು.ಮೊದಲ ಹತ್ತು ತಿಂಗಳಲ್ಲಿ (ಏಪ್ರಿಲ್-ಜನವರಿ) ಜವಳಿ ರಫ್ತು ವಹಿವಾಟು ಈ ಹಿಂದಿನ ್ಙ 41,771 ಕೋಟಿಗಳ ಬದಲಿಗೆ ್ಙ 39,787 ಕೋಟಿ ಮಾತ್ರವಾಗಿತ್ತು. ಕೊನೆಯ ಎರಡು ತಿಂಗಳಲ್ಲಿ ಚಿತ್ರಣವೇ ಸಂಪೂರ್ಣ ಬದಲಾಯಿತು.ರಫ್ತು ವಹಿವಾಟಿನ ಭಾರಿ ಪ್ರಗತಿಯನ್ನು ಕಂಡು ಉತ್ತೇಜಿತರಾಗಿರುವ ಕೇಂದ್ರ ಜವಳಿ ಸಚಿವಾಲಯವು ಈ ವರ್ಷದ ಜವಳಿ ರಫ್ತು ವಹಿವಾಟಿನ ಗುರಿಯನ್ನು ಕಳೆದ ವರ್ಷದ 25 ಶತಕೋಟಿ ಡಾಲರ್‌ನಿಂದ 30 ಶತಕೋಟಿ ಡಾಲರ್‌ಗೆ ಹೆಚ್ಚಿಸಿದೆ. `ಪಾಶ್ಚಿಮಾತ್ಯ          ರಾಷ್ಟ್ರಗಳಿಂದ ಬೇಡಿಕೆ ಹೆಚ್ಚಿರುವುದರಿಂದ ಸರ್ಕಾರ ರಫ್ತು ಗುರಿಯನ್ನೂ ಹೆಚ್ಚಿಸಿದೆ.ದೊಡ್ಡ ಖರೀದಿದಾರ ದೇಶಗಳು: ಅಮೆರಿಕ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಜವಳಿ ಉತ್ಪನ್ನ  ಆಮದು ಮಾಡಿಕೊಳ್ಳುತ್ತಿವೆ.ಜಾಗತಿಕ ಮಟ್ಟದಲ್ಲಿ ಜವಳಿ ಕ್ಷೇತ್ರದಲ್ಲಿ ಸದ್ಯ  ಭಾರತದ ಪಾಲು ಶೇ 4.5ರಷ್ಟಿದ್ದು, 2020ರ ವೇಳೆದ ಅದನ್ನು ಶೇ 8ಕ್ಕೆ ಕೊಂಡೊಯ್ದು 80 ಶತಕೋಟಿ ಡಾಲರ್‌ಗಳ ವಹಿವಾಟು ನಡೆಸುವುದು ಸಾಧ್ಯವಿದೆ ಎಂದು ಸರ್ಕಾರ ಭಾವಿಸಿದೆ. ದೇಶದಲ್ಲಿ 18 ಲಕ್ಷ (ಜಗತ್ತಿನ ಶೇ 45ರಷ್ಟು) ಮಗ್ಗಗಳಿದ್ದು, 2 ಲಕ್ಷ ಲಾಳಿ ರಹಿತ ಮಗ್ಗಗಳಿವೆ (ಜಗತ್ತಿನ ಶೇ 3ರಷ್ಟು). ನಮ್ಮಲ್ಲಿ ಜಗತ್ತಿನ ಶೇ 85ರಷ್ಟು ಅಂದರೆ 39 ಲಕ್ಷದಷ್ಟು ಕೈಮಗ್ಗಗಳಿದ್ದು, ಜಗತ್ತಿನ ಶೇ 23ರಷ್ಟು  ಚರಕದಿಂದ ನೂಲು ತೆಗೆಯುವ ವ್ಯವಸ್ಥೆ ಇದೆ.ಜವುಳಿ ರಫ್ತು ಬೇಡಿಕೆ ಹೆಚ್ಚುತ್ತಲೇ ಇದ್ದು, ಜೂನ್, ಜುಲೈ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವುದಕ್ಕೆ ಈಗಾಗಲೇ ಬೇಡಿಕೆಗಳು ಬಂದಿವೆ. `ನಮ್ಮ ಉತ್ಪನ್ನಗಳಿಗೆ ಅಮೆರಿಕದಿಂದ ಉತ್ತಮ ಬೇಡಿಕೆ ಇದೆ. ಯೂರೋಪ್ ಮಾರುಕಟ್ಟೆಯಿಂದಲೂ ಉತ್ತಮ ಬೇಡಿಕೆ ಬಂದಿದೆ~ ಎಂದು ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿಯ (ಎಇಪಿಸಿ) ಅಧ್ಯಕ್ಷ ಪ್ರೆಮಲ್ ಉದಾನಿ ಹೇಳುತ್ತಾರೆ. ಭಾರತದ ಒಟ್ಟಾರೆ ಜವಳಿ ರಫ್ತಿನಲ್ಲಿ ಅಮೆರಿಕದ ಪಾಲು ಶೇ 40ರಷ್ಟಿದೆ.ಹತ್ತಿ ಮತ್ತು ಹತ್ತಿ ನೂಲಿನ ರಫ್ತಿನ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದರಿಂದ ಕಚ್ಚಾ ಸಾಮಗ್ರಿಗಳ ದರ ಕುಸಿಯಿತು. ಇದರಿಂದಾಗಿಯೇ ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತೀಯ ಜವಳಿ ರಫ್ತು ಮಾಡುವುದು ಸಾಧ್ಯವಾಗಿದೆ ಎಂದು ಉದಾನಿ ಹೇಳುತ್ತಾರೆ.ಜವಳಿ ರಫ್ತಿನ ಬಗ್ಗೆ ಟೆಕ್ಸ್‌ಪೋರ್ಟ್ ಸಿಂಡಿಕೇಟ್ ಇಂಡಿಯಾದ ಸಿಇಒ ಮತ್ತು ನಿರ್ದೇಶಕ ಅವಿನಾಶ್ ಮಿಸಾರ್ ಕೂಡ ಬಹಳ ಆಶಾಭಾವನೆಯಲ್ಲಿದ್ದಾರೆ. ಚೀನಾದಲ್ಲಿ ಕಾರ್ಮಿಕರ ವೆಚ್ಚ ಹೆಚ್ಚಿರುವುದು ಹಾಗೂ ಭಾರತದಲ್ಲಿ ನೂಲಿನ ದರ ಸ್ವಲ್ಪ ಕಡಿಮೆಯಾಗಿರುವುದು ರಫ್ತಿಗೆ ಬಹಳ ಅನುಕೂಲಕರವಾಗಿದೆ. `ಚೀನಾದ ಶೇ 10ರಷ್ಟು ವ್ಯವಹಾರವನ್ನು ಭಾರತ ಸೆಳೆದುಕೊಂಡರೆ ದೇಶದ ಜವಳಿ ರಫ್ತು ಪ್ರಮಾಣ ಮುಂದಿನ ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.ಸುಸ್ಥಿರ ಪ್ರಗತಿ ಸಾಧ್ಯವೇ?: ಭಾರತ ಈ ಪ್ರಗತಿಯನ್ನು ಸುಸ್ಥಿರವಾಗಿ ಉಳಿಸಿಕೊಳ್ಳುವುದು ಸಾಧ್ಯವೇ? ಚೀನಾದಲ್ಲಿ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ಮಧ್ಯಮ ಮತ್ತು ದೀರ್ಘ ಅವಧಿಯ ವ್ಯವಹಾರಗಳು ಚೀನಾದಿಂದ ಕಡಿಮೆ ವೆಚ್ಚದ ಬೇರೆ ದೇಶಗಳಿಗೆ ತೆರಳುವುದು ನಿಶ್ಚಿತ. ಆಮದು ಮಾಡಿಕೊಳ್ಳುವ ದೇಶಗಳು ದುಬಾರಿ ಚೀನಾ ಮಾಲುಗಳ ಬದಲಿಗೆ ಬೇರೆ ದೇಶಗಳನ್ನು ಆಶ್ರಯಿಸುವುದು ಸಹ ನಿಶ್ಚಿತ. ಇಂತಹ ಸ್ಥಿತಿಯಲ್ಲಿ ಭಾರತಕ್ಕೆ ಈ ಅವಕಾಶ ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ.ಜವಳಿ ಕ್ಷೇತ್ರದ ಭಾರಿ ಪ್ರಮಾಣದ ಬೇಡಿಕೆಗಳನ್ನು ಭಾರತ ಈಡೇರಿಸಬಲ್ಲುದೇ ಎಂಬುದು ಸದ್ಯಕ್ಕೆ ಕಾಡುವ ಪ್ರಮುಖ ಪ್ರಶ್ನೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಗೆ ಮೂಲಸೌಕರ್ಯವನ್ನೂ      ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದನ್ನು ಮಾಡಿದ್ದೇ ಆದರೆ, ಭಾರತವು ನೆಚ್ಚಿನ ಜವಳಿ ಆಮದು ರಾಷ್ಟ್ರವಾಗಿ ಮಾರ್ಪಡುವುದು ಕಷ್ಟವೇನಲ್ಲ. ಮೇಲಾಗಿ ಅಧಿಕ ಬೇಡಿಕೆ ಬಂದಂತೆ ಜವಳಿ ಉದ್ಯಮ ಇನ್ನಷ್ಟು ಸಂಘಟಿತವಾಗುತ್ತದೆ.ಸವಾಲುಗಳು: ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಬೇಕಿದ್ದರೆ ಜವಳಿ ಉದ್ಯಮ ತನ್ನ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಹತ್ತಿ ನಿಗಮ, ಭಾರತೀಯ ಜವಳಿ ಮತ್ತು ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿಗಳು ವಿರುದ್ಧ ದಿಕ್ಕಿನಲ್ಲಿ ಸಾಗದೆ ಒಂದೆಡೆ ಕುಳಿತು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಜವಳಿ ಎಂಬುದು ಸಂಕೀರ್ಣವಾದ ಪೂರೈಕೆ ಸರಪಣಿ ಉದ್ಯಮವಾಗಿರುವುದರಿಂದ ಸರ್ಕಾರವು ಸಹ ಒಂದು ರಚನಾತ್ಮಕ ಧೋರಣೆ ತಳೆಯಬೇಕು.ಜವಳಿ ತಯಾರಿಕಾ ಉದ್ಯಮ ನೌಕರರ ಮೇಲೆಯೇ ಅವಲಂಬಿತವಾಗಿರುವ ಉದ್ಯಮ. ಇಲ್ಲಿ ಏಕೈಕ ಜವಳಿ ಗಿರಣಿಯೂ 50 ಸಾವಿರದಷ್ಟು ನೌಕರರನ್ನು ಇಟ್ಟುಕೊಳ್ಳುವುದು ಸಾಧ್ಯವಿದೆ. ಹಣದುಬ್ಬರ ಪ್ರಮಾಣ ಹೆಚ್ಚಿದಂತೆ ವೇತನ ಹೆಚ್ಚಳದ ಬೇಡಿಕೆಯೂ ದೊಡ್ಡದಾಗಿ ಕೇಳಿಸುತ್ತಿದೆ.ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಇರಬೇಕಾದರೆ ಜವಳಿಗಿರಣಿ ಅತಿ ಹೆಚ್ಚಿನ ವೇತನ ಕೊಡುವುದು ಕಷ್ಟ. ಕುಶಲಕರ್ಮಿಗಳ ಕೊರತೆ ಈ ಉದ್ಯಮದ ಮತ್ತೊಂದು ಸವಾಲು. `ಜಗತ್ತಿನಾದ್ಯಂತ ಅಷ್ಟೇ ಏಕೆ ವಿಯೆಟ್ನಾಂ, ಶ್ರೀಲಂಕಾ, ಚೀನಾ, ಥಾಯ್ಲೆಂಡ್‌ನಂತಹ ಏಷ್ಯಾದ ದೇಶಗಳಲ್ಲಿ ಸಹ ಅಗ್ಗದ ದರದಲ್ಲಿ ಕಾರ್ಮಿಕರು ಸಿಗುವ ಹಳ್ಳಿಗಳಲ್ಲೇ ಜವಳಿ ತಯಾರಿಕಾ ಘಟಕಗಳು ಇರುತ್ತವೆ. ಆದರೆ, ಭಾರತದಲ್ಲಿ ಮಾತ್ರ ಜವಳಿಗಿರಣಿಗಳು ಮುಂಬೈ, ಬೆಂಗಳೂರು, ಲೂಧಿಯಾನಾದಂತಹ ದೊಡ್ಡ ನಗರಗಳಲ್ಲಿ ಕೇಂದ್ರೀಕೃತವಾಗಿವೆ. ಹೀಗಾಗಿ ಅಗ್ಗದ ದರದಲ್ಲಿ ನೌಕರರು ಸಿಗಬೇಕೆಂದರೆ ಜವಳಿ ಗಿರಣಿಗಳು ಹಳ್ಳಿಗಳತ್ತ ತೆರಳುವುದೊಂದೇ ಮಾರ್ಗ~ ಎಂದು ಶಾಹಿ ಎಕ್ಸ್    ಪೋಟ್ಸ್‌ನ ನಿರ್ದೇಶಕ ಸುಭಾಶ್ ತಿವಾರಿ ಹೇಳುತ್ತಾರೆ.ಅಂತರರಾಷ್ಟ್ರೀಯ ಸ್ಪರ್ಧೆ: ಜವಳಿ ವಿಚಾರದಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಮತ್ತು ಸಂಸ್ಥೆಗಳು ಕೈಕಟ್ಟಿ ಕುಳಿತಿಲ್ಲ. ವಾಲ್‌ಮಾರ್ಟ್, ವಿಎಫ್ ಕಾರ್ಪೊರೇಷನ್, ಜಿಎಪಿ, `ಎಚ್‌ಆ್ಯಂಡ್‌ಎಂ~ನಂತಹ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯಲ್ಲಿರುವ ಸಂಸ್ಥೆಗಳು ಭಾರತದಿಂದ ಹತ್ತಿ ಬಟ್ಟೆಗಳನ್ನು ತರಿಸಿಕೊಳ್ಳಲು ಮುಂದಾಗಿವೆ.ಚೀನಾದಲ್ಲಿ ಹತ್ತಿಗೆ ಅಭಾವ ಎದುರಾಗಿರುವುದರಿಂದ ಅಲ್ಲಿ ಡೆನಿಮ್ ಹತ್ತಿ ಬಟ್ಟೆಯ ಉತ್ಪಾದನೆ ಕಡಿಮೆಯಾಗಿದೆ. ಚೀನಾದಲ್ಲಿನ ಉದ್ಭವಿಸಿರುವ ಪರಿಸ್ಥಿತಿಯಿಂದ ಭಾರತದ ಸಿದ್ಧ ಉಡುಪುಗಳು ದೊಡ್ಡ ಪ್ರಮಾಣದಲ್ಲಿ ರಫ್ತಾಗುವುದಕ್ಕೆ ಉತ್ತಮ ಅವಕಾಶ ಸಿಕ್ಕಿದೆ.ಅಬಕಾರಿ ಸುಂಕದಿಂದ ಈ ಕ್ಷೇತ್ರಕ್ಕೆ ವಿನಾಯ್ತಿ ನೀಡಬೇಕಾಗಿದೆ.  ಜವಳಿಗಿರಣಿಗಳು ಉದ್ಧಾರವಾದರೆ ಲಕ್ಷಾಂತರ ಉದ್ಯೋಗಿಗಳು ಸಹ ನೆಮ್ಮದಿಯ ಜೀವನ ಸಾಗಿಸುವುದು ಸಾಧ್ಯ.

  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.