ಮದುವೆಯಾಗುತ್ತಿರುವ ತಂಗಿಗೆ ಏನುಡುಗೊರೆ ಬೇಕು ಅಂತ ಕೇಳ್ದಾಗ ಹೇಳಿದ್ದು, ಅಡುಗೆ ಪುಸ್ತಕ ಕೊಡಸು ಅಂತ. ಆಗ ನೆನಪಾಗಿದ್ದು ನಾವೆಲ್ಲ ಅಡುಗೆ ಕಲಿತಿದ್ದು ಹೆಂಗ? ಅಮ್ಮ ಉದ್ಯೋಗಸ್ಥೆ. ತರಬೇತಿಗೆಂದು ಊರು ಬಿಟ್ಟರೆ ಅಪ್ಪನೊಂದಿಗೆ ನಾವೇ ಅಡುಗೆಗೆ ಸಿದ್ಧರಾಗುತ್ತಿದ್ದೆವು. ಆಗಾಗ ಅಮ್ಮನ ಅಮ್ಮ, ಇಂಡಿಯಲ್ಲಿ ಶಿಕ್ಷಕಿಯಾಗಿದ್ದರಿಂದ ಅವರನ್ನು ಇಂಡಿ ಅಮ್ಮನೆಂದೇ ಕರೆಯುತ್ತಿದ್ದೆವು.

ಅವರು ಅಡುಗೆ ಮಾಡುವ ಬಗೆ ಹೇಳಿಕೊಡುತ್ತಿದ್ದರು. ಅವರಿಗೆ ನೆರೆಮನೆಯ ಜಾಗೀರದಾರ್ ಎಂಬ ಮನೆತನದ ಹೆಣ್ಣುಮಗಳು, ಅಡುಗೆ ಮಾಡುವುದನ್ನು ಕಲಿಸಿದ್ದರಂತೆ. ಅವರಿಗೆ ಅತ್ಯಾರು ಎಂದೇ ಕರೆಯುತ್ತಿದ್ದರು. ಅಡುಗೆಯ ಯಾವುದೇ ರೆಸಿಪಿ ಇರಲಿ, ಜಾಗೀರದಾರ ಅತ್ಯಾರು ಹೇಳಿದ್ರು, ಒಂತುಸು...~ ಎಂದೇ ಆರಂಭವಾಗುತ್ತಿತ್ತು.

ಶೀತ ಹಿಡಿದು, ಮೂಗು ಕಟ್ಟಿಕೊಂಡು, ನೆಲ ನೋಡದಂತೆ ಆದಾಗ ಇಂಡಿ ಅಮ್ಮ ಹೇಳುತ್ತಿದ್ದುದು, `ಒಂದೀಟ ಸಜ್ಜಕ ಕುಡದು ಮಕ್ಕೊರವ್ವ ತಂಗಿ..~ ಅಂತ.
`ಸಜ್ಜಕಾ ಸೀ ಇರ್ತದ ವಲ್ಯಾಗೇದ...~ ಅಂದ್ರ ಸಾಕು, `ಅಯ್ಯ... ನಾ ಹೇಳ್ತೇನಿ ಮಾಡು, ಒಂದು ಹಿಡಿ ರವಾ ತೊಗೊ, ಮೂರಳತಿ ನೀರು ಹಾಕು, ಉಳ್ಳಾಗಡ್ಡಿಯಷ್ಟು ಬೆಲ್ಲ ಜಜ್ಜಿ ಹಾಕು. ಬೆಲ್ಲ ಕರಗಿದ ಮ್ಯಾಲೆ, ಪಾಕ ಸೋಸು. ಅದನ್ನು ಕುದಿಯಾಕಿಡು. ಅದಕ್ಕ ಎರಡು ಬಟ್ಟನಾಗ ಬರೂವಷ್ಟು, ಮೆಣಸಿನ ಕಾಳು, ಒಂದು ಲವಂಗ, ಕಿರಿಬಟ್ಟಿನುದ್ದ ಶುಂಠಿ, ಜಜ್ಜ...ಜಜ್ಜಿ... ಬೆಲ್ಲದ ಪಾಕಕ್ಕೆ ಹಾಕು. ಆತ... ಒಂದೆರಡು ಕುದಿ ಬರ್ಲಿ.

ಅವಾಗ ಅದರ ವಾಸ್ನಿ ನೋಡು... ಪಾಕ ಮಂದ ಆದ್ಹಂಗ ಇನ್ನಷ್ಟು ನೀರು ಹಾಕಿ, ರವಿ ಹಾಕಿ ಕುದಸು. ಬೆಲ್ಲ ಉಂಡ ಮ್ಯಾಲೆ ರವಾ ತನ್ನ ಹೊಂಬಣ್ಣ ಕಳ್ಕೊಂತದ. ಆಗ ಅದನ್ನು ತಾಟಿಗೆ ಹಾಕ್ಕೊಂಡು ಸುರಕ್ಕ ಸುರಕ್ಕ ಅಂತ ಕುಡದು ಬಿಡು. ಮ್ಯಾಗೊಂದಿಷ್ಟು ಬಿಸಿನೀರು ಕುಡದು ಮುಸುಕು ಹಾಕ್ಕೊಂಡು ಮಕ್ಕೊ. ನಿನ್ನ ಕಫಾ ಕರಗಲಿಕ್ಕರ ಹೇಳು~ ಅಂತ ಸವಾಲು ಹಾಕುತ್ತಿದ್ದರು.

`ಹೋಗಬೆ, ನಿದ್ದೀನ ಬರೂದಿಲ್ಲ~ ಅಂತ ರಾಗವೆಳೆದರೆ ಸಾಕು. ಅದೇ ರೆಸಿಪಿ ಮುಂದುವರೀತಿತ್ತು.ಇಕಾ, ನಿದ್ದಿ ಬರ್ಲಿಕ್ರ, ಚಿಂತಿ ಮಾಡಬ್ಯಾಡ, ಅದ ಸಜ್ಜಕಕ್ಕ, ಒಂದೀಟ, ರವಾಕ್ಕಿಂತ ಕಡಿಮಿ, ಕಸಕಸಿ ತೊಗೊ. ಒಂದೀಟ ತುಪ್ಪ ಹಾಕಿ, ಘಮ್ ಅನ್ನೂ ಹಂಗ ಹುರಿ. ಆದ್ರ ಕರೀ ಆಗ್ಬಾರ್ದು. ತುಪ್ಪ ಬಿಸಿಯಾದಾಗ ಹಂಚ ಬೆಂಕಿಯಿಂದ ಕೆಳಗಿಳಿಸಿ, ಕಸಕಸಿ ಹಾಕಬೇಕು.

ಅದರ ತಾಪಕ್ಕ ಬಂಗಾರ ಬಣ್ಣ ಬರ್ತೈತಿ. ಅದಾದ ಮ್ಯಾಲೆ ಆ ಕಸಕಸಿನ್ನ ಸಜ್ಜಕಕ್ಕ ಹಾಕಿದ್ರ ಆತು. ಬಿಸಿದು ಕುಡದು ಮೊಕ್ಕೊ. ಮಗ್ಗಲು ಬದಲಾಗದ್ಹಂಗ ನಿದ್ದಿ ಬರ್ತೈತಿ~ ಅಂತ ಹೇಳ್ತಿದ್ರು.
ಬಾಣಂತಿಯರು ಬಂದು ಹಾಲು ಬರುತ್ತಿಲ್ಲ ಎಂದರೂ ಸಾಕು. ಇದೇ ಸಜ್ಜಕದ ರೆಸಿಪಿ ರಿವೈಂಡ್ ಆಗುತ್ತಿತ್ತು. `ಸಜ್ಜಕದ ಜೊತಿಗೆ ಖಮ್ಮಗ ಕೊಬ್ಬರಿ ಹಾಕು. ಛೊಲೊ ಒಣಗಿದ ಗಿಟ್ಕಾ ಕೊಬ್ಬರಿ ಹಾಕು. ಇಲ್ಲಾಂದ್ರ ಕೂಸು ಖೆಮ್ಮತೈತಿ. ಜೊತಿಗೆ ಶುಂಠಿ ಹಾಕಿದ್ರ ಕೂಸಿಗೆ, ನಿನಗ.. ಕಫ ಆಗೂದಿಲ್ಲ, ಒಂದೀಟ, ಹೌದೊ ಅಲ್ಲೊ ಅನ್ನೂವಾಟು ಬಡೇ ಸೋಪು ಹಾಕು. ಕರಗತೈತಿ. ಇಲ್ಲಾಂದ್ರ ಗೋಧಿ ರವಿ ಲಗು ಅರಗೂದಿಲ್ಲ~ ಎಂಬ ಟಿಪ್ಸ್ ಕೂಡ ಹೇಳುತ್ತಿದ್ದರು.

ಒಂದಿನ `ಊಟ ಬ್ಯಾಡ, ಏನೂ ರುಚಿ ಹತ್ತವಲ್ದು,~ ಅಂದಾಗ ಮಾವಿನಕಾಯಿ ಚಟ್ನಿ ಮಾಡುವ ಬಗೆ ಹೇಳಿದ್ದರು.ಮಾವಿನ ಕಾಯಿ ಸಿಪ್ಪಿ ತಗಿ, ಛಂದಗೆ ಹೆರಿಬೇಕು. ಅದಕ್ಕ ಸಾಕಾಗುವಷ್ಟು ಉಪ್ಪು, ಮೂರು ಬಟ್ನಾಗ ಜೀರಗಿ ಹಿಡಿದು ಹಾಕು. ಹೆಬ್ಬೆಟ್ಟು ತೋರು ಬೆರಳು ಕೂಡಿಸಿದ್ರ ಆಗುವಷ್ಟು ಬೆಲ್ಲ ಹಾಕು. ಒಂದೆಳಿ ಕೊತ್ತಂಬರಿ ಇವಿಷ್ಟು ಒಮ್ಮೆ ಮಿಕ್ಸರ್ನಾಗ ಹಾಕಿ ಒಂದ ಸಲ ಗರ್ ಅನಸು. ಸ್ವಲ್ಪ ಸಣ್ಣ ಆಗಿರ್ತದ.

ಅವಾಗ ಒಂದು ಉಳ್ಳಾಗಡ್ಡಿಯ ಅರ್ಧ ಭಾಗ ಹೆಚ್ಚಿ ಹಾಕಿ, ಸಣ್ಣ ಮಾಡು. ನುಣ್ಣಗ ಆದಾಗ ಅದಕ್ಕ, ಒಂದೀಟ ಸೇಂಗಾ ಹಾಕಿ ಮತ್ತ ಗಿರ್ರಕ್ ಅನಸು. ಅಷ್ಟ... ನೋಡ ತಂಗಿ. ಮಾವಿನ ಹುಳಿಯೊಗರು ನಾಲಗೆಲ್ಲ ಚುರ್ ಅನ್ನುಹಂಗ ಆದ್ರ ಸೇಂಗಾ ಬೆಲ್ಲದ ಸವಿ, ನಿನ್ನ ನಾಲಗಿ ಸ್ವಚ್ಛ ಮಾಡ್ತದ. ಸೇಂಗಾ ಬ್ಯಾಡ ಅನಿಸಿದ್ರ ಒಣ ಕೊಬ್ರಿ ಕಲಸಬಹುದು. ಒಣ ಕೊಬ್ಬರಿ ಇಲ್ಲಾಂದ್ರ ತುಸು ಎಳ್ಳು ಸೈತ ಹಾಕಬೌದು. ಆಮೇಲೆ ಇದಕ್ಕ ಸಣ್ಣ ಉಳ್ಳಾಗಡ್ಡಿ ಹೆಚ್ಚಿ ಹಾಕು. ಮ್ಯಾಲೆ ಒಂದೀಟ ಇಂಗಿನ ಒಗ್ಗರಣಿ ಕೊಡು. ಸಾಸಿವಿ, ಜೀರಗಿ ಕರಿಯಾಗಲಾರದ್ಹಂಗ ಒಗ್ಗರಣಿ ಆಗಬೇಕು.

ಕೆಮ್ಮಾಗ್ತದ ಅಂತ ಅಂಜಬ್ಯಾಡ. ಒಗ್ಗರಣಿಗೆ ಒಂದೆರಡು ಎಸಳು ಬಳ್ಳೊಳ್ಳಿ ಹಾಕಿ ಬೇಯಿಸು. ಬಿಸಿ ಚಪಾತಿಗೆ ತುಪ್ಪ ಚಟ್ನಿ ಸವರಿ ತಿನ್ನು. ಇನ್ನೊಂದು ಚಪಾತಿ ಹೆಚ್ಚಿಗೆ ತಿನ್ಲಿಕ್ಕರ ಹೇಳುವಂತಿ. ನಮ್ಮ ಜಾಗೀರದಾರ ಅತ್ಯಾರು ಹಿಂಗ ಮಾಡ್ತಿದ್ರು ಬೆ... ಏನ್ ರುಚಿ... ಅದು...~

ಅವರು ಹೇಳುವಾಗಲೇ ಲಾಲಾರಸ ಹೆಚ್ಚಿ, ಬಾಯ್ತುಂಬುತ್ತಿತ್ತು. ಅವರು ಹೇಳಿದ ಅಳತೆ ಯಾವತ್ತಿಗೂ ತಪ್ಪುತ್ತಿರಲಿಲ್ಲ. ಪರಿಪೂರ್ಣ ಶೆಫ್ನಂತೆ ಯಾವತ್ತಿಗೂ ಅಳತೆಯಲ್ಲಿ ತಪ್ಪಿರದಂತೆ ಹೇಳುತ್ತಿದ್ದರು. ಅದು ನಮ್ಮ ನೆನಪಿನಾಳಕ್ಕೂ ಇಳೀತಿತ್ತು.
ಈಗ ಪುಸ್ತಕ ಓದಿ, ಒಂದು ಔನ್ಸ್ ಎಣ್ಣೆ, 25 ಗ್ರಾಂ ಶುಂಠಿ ಪೇಸ್ಟ್ ಇಂಥ ಅಳತೆಗಾಗಿ, ಅಡುಗೆ ಪುಸ್ತಕದೊಂದಿಗೆ ತೂಕದ ಯಂತ್ರವನ್ನೂ ಕೇಳಬೇಕಾಗಿದೆ. ಮನೆಯಲ್ಲಿ ಹಿರಿಯರೊಂದಿಗೆ ಮಾತು ಕಡಿಮೆಯಾದಂತೆ ನಮ್ಮ ಸಾಂಪ್ರದಾಯಿಕ ಅಡುಗೆ ಪದ್ಧತಿ, ಅದನ್ನು ಹೇಳುವ ವಿಧಾನವೂ ನೇಪಥ್ಯಕ್ಕೆ ಸರಿಯುತ್ತದೆ.

ನಾಲ್ಕು ತಲೆಮಾರು ಆಳಿದ ಜಾಗೀರದಾರ್ ಅತ್ಯಾರ ರೆಸಿಪಿಗಳು, ಐದನೆ ತಲೆಮಾರಿಗೆ ಕಣ್ಮರೆಯಾಗುತ್ತವೆಯೇ? ಅವರೊಂದಿಗೆ ಆಹಾರ ಪದ್ಧತಿಯೂ? ಉತ್ತರಿಸಲು ಇಂಡಿ ಅಮ್ಮನೂ ಇಲ್ಲ. ಅತ್ಯಾರೂ ಇಲ್ಲ. ಅವರ ಅಳತೆಯಲ್ಲಿಯೇ ಕಲಿತು ಅಡುಗೆ ಮಾಡುವ ಅಮ್ಮ ಮತ್ತು ನಾನು, ಮಗಳಿಗೆ ಅದನ್ನೇ ಹೇಳುತ್ತಿದ್ದೇವೆ. ಕೊಂಡಿ ಕಳಚದಿರಲಿ ಎಂದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.