ಗುರುವಾರ , ಮೇ 13, 2021
24 °C

ಜಾತಿ ಪಿಡುಗು ನಿರ್ಮೂಲನೆ ಅಗತ್ಯ: ಶಾಸಕ ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: `ಕಲ್ಯಾಣ ಕ್ರಾಂತಿಯ ಪುರುಷ ಬಸವೇಶ್ವರಜಾತಿ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದರು. 800  ವರ್ಷಗಳು ಕಳೆದರೂ ಇಂದಿಗೂ ಜಾತಿ ಪಿಡುಗು ಹೋಗಿಲ್ಲ. ಇದರ ನಿರ್ಮೂಲನೆ ಅಗತ್ಯ~ ಎಂದು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಇಲ್ಲಿ ಅಭಿಪ್ರಾಯಪಟ್ಟರು.ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ನೌಕರರ ಸಂಘ, ಪುರಸಭೆ, ಬಸವೇಶ್ವರ ವೃತ್ತದ ವರ್ತಕರು ಮತ್ತು ಭಕ್ತಾದಿಗಳು ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನೇಕ ಧರ್ಮಗ್ರಂಥಗಳು ಸ್ತ್ರೀಯರಿಗೆ ಗೌರವ ಸ್ಥಾನ ನೀಡಿವೆ. ಆದರೆ ಬಸವೇಶ್ವರರು ಸ್ತ್ರೀ ಸ್ವಾತಂತ್ರ್ಯ ನೀಡಿದ್ದರು. ಅವರು ಸಮಾನತೆ ನೀಡಿದ ಮೊದಲ ಮಾನವತಾವಾದಿ.  ಆಡು ಭಾಷೆಯಲ್ಲಿ ವಚನ ಸಾಹಿತ್ಯವನ್ನು ನೀಡಿದ ದಾರ್ಶನಿಕ ಎಂದರು.ಸಾನ್ನಿಧ್ಯ ವಹಿಸಿದ್ದ ಯಳನಾಡು ಮಠದ ಜ್ಞಾನಪ್ರಭು ಸಿದ್ದಾರಾಮದೇಶಿಕೇಂದ್ರ ಸ್ವಾಮೀಜಿ ಬಸವೇಶ್ವರರ ಕುರಿತು ಪ್ರವಚನ ನೀಡಿದರು.ಎಪಿಎಂಸಿ ಸದಸ್ಯ ಸತೀಶ್ ಅವರು ಮಾತನಾಡಿದರು. ಶಾಸಕ ಡಾ.ವೈ.ಸಿ.ವಿಶ್ವನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು.ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರಾಜಕುಮಾರ ಕೆಂಗ್ಲಾಪುರ, ಪುರಸಭೆ ಸದಸ್ಯ ಬಷೀರ್‌ಸಾಬ್, ಕುರುಬ ಸಮಾಜದ ಮುಖಂಡ ಹೂವಿನ ಗೋವಿಂದಪ್ಪ, ಮಂಡಿ ವರ್ತಕರಾದ ಮರುಳಸಿದ್ದಪ್ಪ, ಎಪಿಎಂಸಿ ಅಧ್ಯಕ್ಷ ಉಮಾಪತಿ, ಅಖಿಲ ಭಾರತ ವೀರಶೈವ ಸಮಾಜ ಅಧ್ಯಕ್ಷ ಬಿಸಲೆರೆ ದೇವರಾಜು, ಪಟ್ಟಣಗೆರೆ ಪಿ.ಕೆ.ರೇವಣ್ಣಯ್ಯ, ಬಡಗನಾಡು ಸಮಾಜ ಅಧ್ಯಕ್ಷ ಶಿಕ್ಷಕ ರೇವಣಸಿದ್ದಪ್ಪ, ಪುರಸಭೆ ಸದಸ್ಯ ಕೆ.ಜಿ.ಲೋಕೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ನಂದಕುಮಾರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.