ಹಾವೇರಿ: ದಮ್ ಮಾರೋ ದಮ್.. ಮಿಟ್ ಜಾಯೆ ಗಮ್ ಹರೇ ಕೃಷ್ಣ ಹರೇ ರಾಮ್ ಎನ್ನುವ ಹಾಡು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವುದು ಕೈಯಲ್ಲಿ ಚಿಲುಮೆ ಹಿಡಿದು ಗಾಂಜಾ ಎಳೆಯುವ ದೃಶ್ಯ. ಇಂತಹ ದೃಶ್ಯ ಜಿಲ್ಲೆಯ ಭಾವೈಕ್ಯತೆ ಕೇಂದ್ರ ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಶರೀಫ್ರ ಜಾತ್ರೆಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಜಾತ್ರೆಗೆ ಬರುವ ಸಾದು ಸಂತರು ಅಷ್ಟೇ ಅಲ್ಲದೇ ಕೆಲವು ಭಕ್ತರು ಶರೀಫಗಿರಿಯ ಪ್ರದೇಶದಲ್ಲಿ ಕುಳಿತು ಗಾಂಜಾದ ದಮ್ ಎಳೆದು ದಟ್ಟವಾದ ಹೊಗೆ ಬೀಡುತ್ತಾ ತಮ್ಮದೇ ಆದ ಲೋಕದಲ್ಲಿ ಕಾಲ ಕಳೆಯುತ್ತಾರೆ.

ಪ್ರತಿ ವರ್ಷ ಮೂರುದಿನಗಳ ಕಾಲ ನಡೆಯುವ ಶರೀಫ್ರ ಹಾಗೂ ಗುರು ಗೋವಿಂದ ಭಟ್ಟರ ಜಾತ್ರೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹಿಂದೂ ಮುಸಿಂ್ಲ ಬೇಧ ಭಾವವಿಲ್ಲದೇ ಆಗಮಿಸುವ ಸಾಧು ಸಂತರು, ಭಕ್ತರು ಅವರವರ ಭಾವಕ್ಕೆ ತಕ್ಕಂತೆ ಶರೀಫ್ರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಸಂಜೆ ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ಶರೀಫ್ ಹಾಗೂ ಗುರುಗೋವಿಂದ ಭಟ್ಟರ ಸಂಭ್ರಮದ ರಥೋತ್ಸವ ನಡೆ ಯುತ್ತದೆ. ಅತ್ತ ಭಕ್ತರು ಶ್ರದ್ಧಾಭಕ್ತಿ ಯಿಂದ ರಥ ಎಳೆಯುತ್ತಿದ್ದಂತೆ, ಬೇರೆ ಬೇರೆ ಕಡೆಗಳಿಂದ ಆಗಮಿಸಿರುವ ಸಾದು ಸಂತರು ಇತ್ತ ಗಿಡದ ಬುಡದಲ್ಲಿಯೋ ಅಥವಾ ಕೆರೆಯ ದಂಡೆಯಲ್ಲಿ ಕುಳಿತು ದಮ್ ಎಳೆಯಲು ಆರಂಭಿಸುತ್ತಾರೆ.

ಹಿಂದಿನ ದಿನಗಳಲ್ಲಿ ಬಹಿರಂಗ ವಾಯೇ ನಡೆಯುತ್ತಿದ್ದ ಗಾಂಜಾ ಸೇವೆನೆಗೆ ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಅಡ್ಡಿಯಾದ್ದರಿಂದ ಗಾಂಜಾ ವ್ಯಸನಿಗಳು ಗಿಡ ಮರಗಳ ಮರೆಯಲ್ಲಿ ಕುಳಿತು ಗಾಂಜಾ ಸೇವನೆ ನಡೆಯುತ್ತದೆ. ಆದರೆ, ಜಾತ್ರೆ ಯಲ್ಲಿ ಇಂದಿಗೂ ಗಾಂಜಾ ಸೇದುವ ಸಾಧನವಾದ ಚಿಲುಮೆ ಮಾತ್ರ ಎಲ್ಲೆಂದರಲ್ಲಿ ಮಾರಾಟಕ್ಕೆ ದೊರೆ ಯುತ್ತದೆ.

ಆದರೆ ಇದು ಕೇವಲ ಚಟಕ್ಕಾಗಿ ಸೇದುವು ದಲ್ಲ. ಹಿಂದೆ ಶರೀಫ್ರು ಗುರು ಗೋವಿಂದ ಭಟ್ಟರು ಹಾಕಿಕೊಟ್ಟ ಪಾಠ ವನ್ನ ಇಂದಿಗೂ ಮುಂದುವರೆಸಿ ಕೊಂಡು ಹೋಗುವುದಾಗಿದೆ ಎಂದು ಹೇಳುತ್ತಾರೆ ಸಾಧು ಬಸವಾನಂದ ಅವರು. ಜಾತ್ರೆಗೆ ಬಂದವರು ಗಾಂಜಾ ಸೇದಿದ್ರೆ ಸಿದ್ದಿ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಹಿಂದಿ ನಿಂದಲೂ ಇದೆ. ಅದೇ ಕಾರಣ ಕ್ಕಾಗಿ ಜಾತ್ರೆಗೆ ಬಂದವರಲ್ಲಿ ಬಹಳಷ್ಟು ಜನರು ಗಾಂಜಾದ ದಮ್ ಎಳೆಯುತ್ತಾರೆ.

ಸಂತ ಶಿಶುನಾಳ ಶರೀಪರ ಗುರು ಗೋವಿಂದ ಭಟ್ಟರು ಗಾಂಜಾ ಸೇದುತ್ತಿ ದ್ದರಂತೆ. ಅವರಿಗೆ ಗೌರವ ಸೂಚಿಸಲು ತಾವು ಈ ರೀತಿ ಗಾಂಜಾ ಸೇದುವ ಮೂಲಕ ಭಕ್ತಿ ಮೆರೆಯುತ್ತಿದ್ದೆೀವೆ. ಗಾಂಜಾ ಸೇದುವುದರಿಂದ ಸಿದ್ದಿ ಪ್ರಾಪ್ತಿಯಾಗುತ್ತದೆ ಎಂದು ಇಲ್ಲಿಗೆ ಆಗಮಿಸಿದ್ದ ಶರೀಫ್ರ ಅನುಯಾಯಿ ಸಿದ್ಧಾನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಡುತ್ತಾರೆ.

ತಡೆಯುವಲ್ಲಿ ವಿಫಲ: ಗಾಂಜಾ ಮಾರಾಟ ಮತ್ತು ಸೇವನೆ ನಿಷಿದ್ಧ ವಿದ್ದರೂ ಜಿಲ್ಲಾಡಳಿತ ಮಾತ್ರ ಅದನ್ನು ತಡೆಯುವಲ್ಲಿ ವಿಫಲವಾಗಿದೆ. ಶಿಗ್ಗಾವಿ ಠಾಣೆಯ ಸಿಪಿಐ ನೀಲಗಾರ ಮಾತ ನಾಡಿ, ಗಾಂಜಾ ಸೇವನೆ ಹಾಗೂ ಮಾರಾಟ ಮಾಡುವಂತಹ ಯಾವುದೇ ಪ್ರಕರಣ ಗಳು ಪತ್ತೆಯಾಗಿಲ್ಲ. ಪ್ರಕ ರಣ ದಾಖಲಿಸಿಲ್ಲ ಎಂದು ತಿಳಿಸುತ್ತಾರೆ.

ಜಾತ್ರೆ ಮಾತ್ರ ದಮ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಅದು ಯುವ ಜನಾಂಗಕ್ಕೆ ಮುಂದುವರಿಯುವ ಮುನ್ನವೇ ಸಂಪೂರ್ಣ ನಿಷೇಧ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.