ಮಂಗಳೂರು: ಮಕ್ಕಳ ಪಲ್ಸ್ ಪೋಲಿಯೊ ಮಾದರಿ ಅಭಿಯಾನವನ್ನೇ ಇನ್ನು ಜಾನುವಾರಗಳ ಕ್ಷೇಮಕ್ಕಾಗಿಯೂ ಕೈಗೊಳ್ಳಲು ಯೋಜನೆ ಸಿದ್ಧವಾಗಿದೆ. ಜಾನುವಾರುಗಳನ್ನು ಆಗ್ಗಾಗ್ಗೆ ಕಾಡುವ ಕಾಲು-ಬಾಯಿ ಜ್ವರವನ್ನೇ ಇಲ್ಲದಂತೆ ಮಾಡುವ ಲಸಿಕೆಯನ್ನು ಪಲ್ಸ್ ಪೋಲಿಯೊ ಮಾದರಿಯಲ್ಲಿಯೇ ನೀಡಲು ಪಶುವೈದ್ಯಕೀಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ದೊಡ್ಡ ರೋಗ (ದನದ ಪ್ಲೇಗ್) ಈಗ ದೇಶದಲ್ಲಿ ಎಲ್ಲೂ ಕಾಣುತ್ತಿಲ್ಲ. ಆದರೆ ಬೇಸಿಗೆಯಲ್ಲಿ ದನಗಳನ್ನು ಕಾಡುವ ಕಾಲು-ಬಾಯಿ ಜ್ವರದಿಂದ ಪ್ರತಿವರ್ಷ ಸಾವಿರಾರು ಕರುಗಳು ಹುಟ್ಟುವ ಮೊದಲೇ ಸಾವನ್ನಪ್ಪುತ್ತಿದ್ದು ಪಶುಸಂಗೋಪನೆ ಕ್ಷೇತ್ರಕ್ಕೇ ದೊಡ್ಡ ಪೆಟ್ಟು ಬೀಳುತ್ತಿದೆ.

ದೊಡ್ಡ ರೋಗದ ತರುವಾಯ ಜಾನುವಾರುಗಳ ಪ್ರಾಣ ಹಿಂಡುವ ಕಾಯಿಲೆ ಇದಾಗಿದ್ದು, ಬೇಸಿಗೆಯಲ್ಲಿ ವೈರಸ್ನಿಂದ ರೋಗ ಉಲ್ಬಣಗೊಳ್ಳುತ್ತದೆ. ಬಾಯಲ್ಲಿ ಹುಣ್ಣು, ಜೊಲ್ಲು ಸುರಿಯುವಿಕೆ ಲಕ್ಷಣ ಕಂಡುಬರುವ ರೋಗಪೀಡಿತ ಜಾನುವಾರು ವಿಪರೀತ ಜ್ವರದಿಂದ ಬಳಲುತ್ತದೆ. ಜ್ವರ ಜಾಸ್ತಿಯಾದಾಗ ತೇಕುವುದು ಹೆಚ್ಚಾಗುತ್ತದೆ. ಇದರಿಂದ ಹಸುವಿನ ಗರ್ಭದಲ್ಲಿರುವ ಕರು ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗುತ್ತದೆ.

ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಪಶುಗಳ ಸಂಖ್ಯೆ ಹೆಚ್ಚಾಗಿರುವ ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ಕೆ.ವಿ.ಹಲಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಲಸಿಕೆ ಸಿದ್ಧಪಡಿಸಿ ವಿತರಿಸಲು ಕೋಲಾರ ಜಿಲ್ಲೆ ಮಾಲೂರಿನ ಬಯೋವ್ಯಾಟ್ ಸಂಸ್ಥೆಗೆ ತಿಳಿಸಲಾಗಿದ್ದು ಬೆಂಗಳೂರಿನ ಹೆಬ್ಬಾಳದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ(ಐವಿಆರ್ಐ) ನೆರವಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.