ಜಾನುವಾರು ಅಕ್ರಮ ಸಾಗಣೆ ಬೆಳಕಿಗೆ

ಶನಿವಾರ, ಮೇ 25, 2019
28 °C

ಜಾನುವಾರು ಅಕ್ರಮ ಸಾಗಣೆ ಬೆಳಕಿಗೆ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಕೊತ್ತಲವಾಡಿ ಕಡೆಯಿಂದ ತಮಿಳುನಾಡಿನ ಕುನ್ನೂರಿನ ಮೂಲಕ ಕೇರಳಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾನುವಾರುಗಳನ್ನು ತೆರಕಣಾಂಬಿ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.ಎರಡು ಹಸು, ಎರಡು ಎತ್ತು ಹಾಗೂ ಒಂಭತ್ತು ಕರುಗಳನ್ನು ವಶಕ್ಕೆ ತೆಗೆದುಕೊಂಡು ನಂತರ ಮೈಸೂರಿನ ಪಿಂಜರಾಪೋಲ್‌ಗೆ ಕಳುಹಿಸಿ ಕೊಡಲಾಗಿದೆ.ಭೀಮನಬೀಡು ಗ್ರಾಮದ ಜಗ್ಗು, ಮುದ್ದಶೆಟ್ಟಿ, ಅಣ್ಣೂರು ಗ್ರಾಮದ ಶಿವ, ಕಗ್ಗಳ ಗ್ರಾಮದ ಚನ್ನಬಸಪ್ಪ ಎಂಬುವರು ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಿಸಲು ಯತ್ನಿಸುತ್ತಿದ್ದರು. ಈ ವೇಳೇ ತೆರಕಣಾಂಬಿ ಠಾಣೆ ಸಬ್ ಇನ್‌ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ ತೆರಕಣಾಂಬಿ ಸಮೀಪ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡರು. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry