ಗುರುವಾರ , ಜನವರಿ 30, 2020
22 °C

ಜಾಲಹಳ್ಳಿ: ಉತ್ತಿನ ಎಲ್ಲಮ್ಮನ ಜಾತ್ರೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲಹಳ್ಳಿ: ಪಟ್ಟಣ ಹಾಗೂ ಸುತ್ತ­ಮತ್ತಲ್ಲಿನ ಗ್ರಾಮಗಳ ಭಕ್ತರ ಪ್ರಸಿದ್ದ ದೇವತೆ ಉತ್ತಿನ ಎಲ್ಲಮ್ಮನ ಜಾತ್ರೆ ಯನ್ನು ಡಿ.17ರಂದು ವಿಜೃಂಭ­ಣೆ­ಯಿಂದ ಜರುಗಲಿದೆ.ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿರುವ ಎಲ್ಲಮ್ಮ ದೇವತೆಯ ಮೂಲ ದೇವಸ್ಥಾನ­ದಿಂದ ಹಂಪರಗುಂದಿ ಸೀಮಾಂತ­ದಲ್ಲಿರುವ ಜಾತ್ರೆ ನಡೆಯುವ ದೇವ­ಸ್ಥಾನಕ್ಕೆ ತಲುಪಿತ ನಂತರವಷ್ಟೇ ಜಾತ್ರೆ­ಯ ಆರಂಭಗೊ­ಳ್ಳುತ್ತದೆ.

ಅಲ್ಲಿಯವರೆಗೂ ಭಕ್ತರು ಉಪವಾಸ  ಇರುತತಾರೆ. ಪಲ್ಲಕ್ಕಿ ಬರುವ­ವರೆಗೂ ದೇವತೆಗೆ ತರುವ ನೈವೇದ್ಯ ಹಾಗೂ ಕಾಣಿಕೆಗಳನ್ನು ಅರ್ಪಿಸುವುದಿಲ್ಲ.ಈ ಜಾತ್ರೆಗೆ ವಿಶೇಷವಾಗಿ ಭಕ್ತರು ಎಳ್ಳು ಹಚ್ಚಿದ ರೊಟ್ಟಿ, ಬದನೆ ಕಾಯಿ ಪಲ್ಯ, ಬುತ್ತಿ ತಂದು ದೇವತೆಗೆ ಪೂಜೆ ಸಲ್ಲಿಸಿದ ನಂತರ ಊಟ ಮಾಡಿ ಹೋಗುವ ವಾಡಿಕೆಯಿದೆ.ಇನ್ನೊಂದು ವಿಶೇಷತೆ ಎಂದರೆ ಈ ಜಾತ್ರೆ ಕೇವಲ ಒಂದು ದಿನ ನಡೆಯು­ತ್ತದೆ. ಜಾತ್ರೆ ನಡೆದ ದಿನದಂದು ಯಾರೂ ಅಲ್ಲಿ ವಾಸ ಮಾಡದೇ ರಾತ್ರಿ 10 ಗಂಟೆಯ ಒಳಗಾಗಿ ಎಲ್ಲರೂ ಪಟ್ಟಣ ಸೇರಿಕೊಳ್ಳುವ ಪ್ರತೀತಿ ಹಿಂದಿ­ನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣದ ‘ಬೀಸಲ್‌’ ವಂಶ­ಸ್ಥರು ಈ ದೇವತೆಯ ಪೂಜಾರಿಗ­ಳಾಗಿದ್ದು ಜಾತ್ರೆಗೆ ಮುಂಚೆ ಐದು ದಿನಗಳ ಕಾಲ ಕಾರ್ತಿಕ ಸೇವೆ ಮತ್ತು ಜಾತ್ರೆ ದಿನದಂದು ನಡೆಯುವ ಎಲ್ಲ ವಿಧಿವಿಧಾನಗಳನ್ನು ನೇರವೇರಿಸುತ್ತಾರೆ.ವಿಶೇಷತೆ: ಈ ಬಾರಿ ಜಾತ್ರೆಯ ಅಂಗವಾಗಿ ಪ್ರಥಮ ಬಾರಿಗೆ ರಥೋ­ತ್ಸವ ಜರುಗಲಿರುವುದು ವಿಶೇಷವಾಗಿದೆ. ಸಂಜೆ 4 ಗಂಟೆಯ ನಂತರ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)