ಜಾಲಹಳ್ಳಿ: `ಶ್ರಾವಣ ಮಾಸ~ ಹಿಂದುಗಳ ಪವಿತ್ರ ಮಾಸವಾಗಿರುವಂತೆ ರಂಜಾನ್ ಮಾಸ ಮುಸ್ಲಿಮರ ಪವಿತ್ರ ಮಾಸವಾಗಿದೆ. ಈ ಮಾಸ ಪೂರ್ತಿ ರೋಜಾ(ಉಪವಾಸ) ಮಾಡುವ ಮೂಲಕ ರಂಜಾನ್ ಮಾಸವನ್ನು ಅತ್ಯಂತ ಪಾವಿತ್ರ್ಯತೆಯಿಂದ ಅನುಸರಿಸುತ್ತಾರೆ.

ರೋಜಾ ಹಿನ್ನೆಲೆ: ಮಹ್ಮದ್ ಸಲ್ಲಲ್ಲಾಹು ಅಲೈಹುಸಲ್ಲಂ ಎನ್ನುವ ಪ್ರವಾದಿಯು (ಘರೆಗೇರಾ) ಎಂಬ ಸ್ಥಳದ ಹೆಯಲ್ಲಿ ಉಪವಾಸ ಕುಳಿತು ಅಲ್ಲಾನ ಧ್ಯಾನ ಮಾಡುತ್ತ ನಮಾಜ ಮಾಡುವುತ್ತಿರುವುದನ್ನು ಕಂಡ ಅಲ್ಲಾನು ಆತನ ಭಕ್ತಿಗೆ ಒಲಿದನೆಂದು ನಂಬಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ವರ್ಷ ರಂಜಾನ್ ಮಾಸದಲ್ಲಿ ಪ್ರತಿಯೊಬ್ಬ ಮುಸ್ಲಿಮನು ರೋಜಾ ಮಾಡಿದರೆ ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ಪ್ರತೀತಿ ನಡೆದುಕೊಂಡು ಬಂದಿದೆ. ಮುಸ್ಲಿಂ ಧರ್ಮದ ಪ್ರಕಾರ ನಮಾಜ್ ಮಾಡುವುದು, ಹಜ್ಯಾತ್ರೆ ಕೈಗೊಳ್ಳುವುದು, ದಾನ ಧರ್ಮ ಮಾಡುವುದು ಇವೆಲ್ಲಾ ಶ್ರೇಷ್ಠವಾದ ಕೆಲಸಗಳೇ ಆಗಿದ್ದರೂ ಕೂಡ ಇವು ಹೊರ ಜಗತ್ತಿಗೆ ಕಾಣುವಂತದ್ದಾಗಿವೆ. ಆದರೆ ರಂಜಾನ್ ಮಾಸದಲ್ಲಿ ಅಲ್ಲಾಹನ ಹೆಸರಿನಲ್ಲಿ ರೋಜಾ ಮಾಡುವುದು ಅಲ್ಲಾಹನಿಗೆ ಮಾತ್ರ ಕಾಣಿಸುತ್ತದೆ ಎನ್ನುವುದು ಮುಸ್ಲಿಮರ ನಂಬಿಕೆಯಾಗಿದೆ. ಜಗತ್ತಿನಲ್ಲಿ ಶ್ರೀಮಂತರಿಗೆ ಹಸುವಿನ ಬಗ್ಗೆ ತಿಳಿದಿರುವುದಿಲ್ಲ.

ಬಡವರು ಅರೆಬರೆ ಹೊಟ್ಟೆಯಿಂದ ಜೀವನ ಪೂರ್ತಿ ಕಳೆಯುತ್ತಾರೆ. ರೋಜಾ ಮಾಡುವ ಮೂಲಕ ಹಸುವಿನ ಬಗ್ಗೆ ಶ್ರೀಮಂತರಿಗೂ ಮನವರಿಕೆಯಾಗಿ ಅವರು ಬಡವರ ಬಗ್ಗೆ ಕರುಣೆ ತೋರಿ ದಾನ ಧರ್ಮದಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಈ ರೋಜಾ ಮಾಡುವ ಪದ್ದತಿಯನ್ನು ಅನುಸರಿಸುವಂತೆ ಹದೀಸ್(ಗ್ರಂಥ)ನಲ್ಲಿ ಉಲ್ಲೇಖವಿದೆ ಎಂದು ಪಟ್ಟಣದ ಶಾಹೀನ್ ಮಜೀದ್ನ ಮೌಲಾನಾ ಜುಬೇರ್ ಅಶ್ರಫಿ ಹೇಳುತ್ತಾರೆ.

ಮುಸ್ಲಿಂ ಧರ್ಮದ ಪ್ರಕಾರ ಎಲ್ಲರೂ ಸಮಾನರು ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಮೇಲು ಕೀಳು, ಬಡವ, ಬಲ್ಲಿದ ಎನ್ನುವ ಮನೋಭಾವ ಮುಸ್ಲಿಮರಲ್ಲಿ ಇರಕೂಡದು ಪ್ರತಿಯೊಬ್ಬರೂ, ನಮಾಜ್, ರೋಜಾ, ಜಕಾತ್(ದಾನ), ಹಜ್ಯಾತ್ರೆ ಇವೆಲ್ಲಾ ತತ್ವಗಳನ್ನು ಅನುಸರಿಸಬೇಕೆಂದು ಇಸ್ಲಾಂ ಧರ್ಮದ ಧರ್ಮ ಗ್ರಂಥಗಳು ಹೇಳುತ್ತವೆ ಎಂದು ಅವರು `ಪ್ರಜಾವಾಣಿ~ ಮುಂದೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.