ಜಾವಗಲ್‌ನಲ್ಲಿ ಬರಗಾಲ: ಕಂಗಾಲಾದ ರೈತರು

ಭಾನುವಾರ, ಮೇ 26, 2019
33 °C

ಜಾವಗಲ್‌ನಲ್ಲಿ ಬರಗಾಲ: ಕಂಗಾಲಾದ ರೈತರು

Published:
Updated:

ಜಾವಗಲ್: ಶಾಶ್ವತ ಬರಗಾಲ ಹಣೆಪಟ್ಟಿ ಕಟ್ಟಿಕೊಂಡಿರುವ ಹಾಗೂ ಮುಗಿಲ ಮಳೆಯನ್ನಷ್ಟೇ ಆಶ್ರಯಿಸಿಕೊಂಡಿರುವ ಜಾವಗಲ್ ಹೋಬಳಿಗೆ ಈ ಬಾರಿಯೂ ಮತ್ತೆ ಬರಗಾಲ ಒಕ್ಕರಿಸಿಕೊಂಡಿದೆ.ಗ್ರಾಮೀಣ ಭಾಗದಲ್ಲಿ ನಾಟಿ ಮಾಡಿರುವ ರಾಗಿ ಒಣಗುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. 

ಪ್ರಸಕ್ತ ವರ್ಷ ವರುಣನ ಅವಕೃಪೆಗೆ ಒಳಗಾಗಿ ಬರದ ಛಾಯೆ ಕಾಣಿಸಿಕೊಂಡಿದೆ. ಈ ಹೋಬಳಿಯ ಜನ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಮುಂಗಾರು ವೈಫಲ್ಯ ಹೋಬಳಿ ರೈತ ಸಮುದಾಯದ ಪಾಲಿಗೆ ಅಕ್ಷರಶಃ ಶಾಪವಾಗಿ ಪರಿಣಮಿಸಿದೆ.ಜುಲೈ ಅಂತ್ಯಕ್ಕೆ 300ಮಿ.ಮಿ. ವಾಡಿಕೆ ಮಳೆ ಆಗ ಬೇಕಾಗಿತ್ತು. ಆದರೆ ಈ ಬಾರಿ ಮಳೆ ಬಾರಿ ಕಡಿಮೆಯಾಗಿದೆ. ಈಗಾಗಲೆ 9 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಬೇಕಾಗಿತ್ತು. ಹೋಬಳಿಯಲ್ಲಿ ಮಳೆಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಕಾರಣ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಈಗ 6 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ರೈತರು ಪ್ರತಿ ದಿನ ಮುಗಿಲು ನೋಡುವಂತಾಗಿದ್ದು, ಈ ಬಾರಿ ರೈತರ ಕನಸೆಲ್ಲ ನುಚ್ಚು ನೂರಾಗಿದೆ.ಜಾವಗಲ್ ಹೋಬಳಿಯ ಪ್ರಮುಖ ಬೆಳೆ ರಾಗಿ ಬಿತ್ತನೆಗೆ ಕಾಲಾವಕಾಶ ಮುಗಿದಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬಯಲು ಸೀಮೆಯ ಹಣೆಪಟ್ಟಿ ಹೊಂದಿರುವ ಈ ಹೋಬಳಿಗೆ ನೀರಾವರಿ ಮರೀಚಿಕೆಯಾಗಿದೆ. ಅಗತ್ಯ ಸಂದರ್ಭದಲ್ಲಿ ವರುಣನು ರೈತರಿಗೆ ಕೈಕೊಟ್ಟಿರುವುದರಿಂದ ಅನ್ನದಾತ ಮುಗಿಲಿನತ್ತ ಮುಖ ಮಾಡುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿ ಪರಿಹಾರನೀಡ ಬೇಕೆಂಬುದು ರೈತರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry