ಭಾನುವಾರ, ಜೂನ್ 13, 2021
21 °C

ಜಾಸ್ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕಾದ ಖ್ಯಾತ ಜಾಸ್ ಸಂಗೀತಗಾರ ಮಿಲೆ ಡೇವಿಸ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನ `ನೇಷನ್ ಸ್ಟೇಷನ್~ ಸಂಗೀತ ತಂಡ  ಶುಕ್ರವಾರ ಜಾಸ್ ಸಂಗೀತಧಾರೆ ಹರಿಸಲಿದೆ.



ಮಿಲೆ ಜಾಸ್ ಸಂಗೀತದ ಮೇರು ಪ್ರತಿಭೆ. ಈತ ಜಾಸ್ ಜತೆಜತೆಗೆ ತುತ್ತೂರಿ, ಬ್ಯಾಂಡ್‌ಲೀಡರ್ ಹಾಗೂ ಕಂಪೋಸರ್ ಆಗಿ ಹೆಸರು ಮಾಡಿದವ. ಈತ 20ನೇ ಶತಮಾನದ ಪ್ರಮುಖ ಪ್ರಭಾವಿ ಸಂಗೀತಗಾರ ಎಂಬ ಅಗ್ಗಳಿಕೆಗೆ ಕೂಡ ಪಾತ್ರನಾಗಿದ್ದ.



ಜಾಸ್ ಸಂಗೀತದ ಪರಿವರ್ತನೆ ಹಾಗೂ ಖ್ಯಾತಿಗೆ ಈತನ ಕೊಡುಗೆ ಅಪಾರವಾದುದು.

ನೇಷನ್ ಸ್ಟೇಷನ್ ಬೆಂಗಳೂರಿನ ಪ್ರಸಿದ್ಧ ಸಂಗೀತ ತಂಡ ಎಂಬ ಅಗ್ಗಳಿಕೆ ಕೂಡ ಇದಕ್ಕಿದೆ.



ಭರತ್ ಕುಮಾರ್ (ಕೀಬೋರ್ಡಿಸ್ಟ್/ಕಂಪೋಸರ್), ದೀಪಕ್ ರಘು (ಡ್ರಮ್ಮರ್), ವಿಲ್ಸನ್ ಕೆನೆಥ್, ರಾಮಾ ಹಾಗೂ ವಿಲ್ಬರ್ ತಂಡದ ಸದಸ್ಯರು.



ಸ್ಥಳ:
ಹೈ 5 ಬಾರ್, ಅಲಿಲಾ ಹೋಟೆಲ್, ವರ್ತೂರು ಮುಖ್ಯರಸ್ತೆ, ರಾತ್ರಿ 8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.