ಮಂಗಳವಾರ, ಮೇ 11, 2021
20 °C
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

ಜಿಂದಾಲ್ - ದಾಸರಿ ವಿರುದ್ಧ ಖಟ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮಂಗಳವಾರ, ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಮತ್ತು ಕಲ್ಲಿದ್ದಲು ಖಾತೆ ಮಾಜಿ ರಾಜ್ಯ ಸಚಿವ ದಾಸರಿ ನಾರಾಯಣ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ.ಅಕ್ರಮ ಹಣ ಸಂಪಾದನೆ ಮತ್ತು ವಂಚನೆ ಆರೋಪದಡಿ ಜಿಂದಾಲ್ ಮತ್ತು ರಾವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಇದರೊಂದಿಗೆ, ಈ ಹಗರಣದ ಸಂಬಂಧ ಸಿಬಿಐ ಒಟ್ಟು 12 ಪ್ರಕರಣಗಳನ್ನು ದಾಖಲಿಸಿಕೊಂಡಂತಾಗಿದೆ. ಸಿಬಿಐನ ಈ ಕ್ರಮದಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೊಳಗಾಗಿದೆ.2008ರಲ್ಲಿ ಜಾರ್ಖಂಡ್‌ನ ಬೀರ್‌ಭುಮ್ ಅಮರ್‌ಕೊಂಡಾ ಮೃಗದಂಗಲ್‌ನಲ್ಲಿ ಕಲ್ಲಿದ್ದಲು ನಿಕ್ಷೇಪ ಪಡೆದಿದ್ದ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಹಾಗೂ ಗಗನ್ ಸ್ಪಾಂಜ್ ಹೆಸರನ್ನು ಕೂಡ ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಿದೆ. ಇದಲ್ಲದೇ ಜಿಂದಾಲ್ ರಿಯಾಲ್ಟಿ, ಎನ್.ಡಿ ಎಕ್ಸಿಮ್ ಮತ್ತು ರಾವ್‌ಗೆ ಸೇರಿದ ಸೌಭಾಗ್ಯ ಮೀಡಿಯಾ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದೆ.ನವದೆಹಲಿ ಮತ್ತು ಹೈದರಾಬಾದ್‌ನಲ್ಲಿ ಕ್ರಮವಾಗಿ ಜಿಂದಾಲ್ ಮತ್ತು ರಾವ್ ಅವರಿಗೆ ಸೇರಿದ ಕಚೇರಿ, ಮನೆ ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.ನವದೆಹಲಿಯ ಪೃಥ್ವಿರಾಜ್ ರಸ್ತೆಯಲ್ಲಿರುವ ಜಿಂದಾಲ್ ಮನೆ ಮತ್ತು ಬಿಕಾಜಿ ಕಾಮಾ ಪ್ಯಾಲೆಸ್‌ನಲ್ಲಿರುವ ಕಂಪೆನಿಯಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.ದಾಸರಿ ನಾರಾಯಣ ರಾವ್ 2004-06 ಮತ್ತು 2006 ಮತ್ತು 2008ರಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.