ಗುರುವಾರ , ಜೂನ್ 24, 2021
28 °C

ಜಿಂಬಾಬ್ವೆ ತಂಡದ ಕನಸು ಜೀವಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲ್ಹೆಟ್‌, ಬಾಂಗ್ಲಾದೇಶ (ಪಿಟಿಐ): ಹಾಲೆಂಡ್‌ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಜಿಂಬಾಬ್ವೆ ತಂಡದವರು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ.



ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅರ್ಹತಾ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹಾಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 ರನ್‌ ಪೇರಿಸಿತು. ಜಿಂಬಾಬ್ವೆ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 146 ರನ್‌ ಗಳಿಸಿ ಜಯ ಪಡೆಯಿತು.



ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಜಿಂಬಾಬ್ವೆಗೆ ಮುಂದಿನ ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.



ಸಂಕ್ಷಿಪ್ತ ಸ್ಕೋರ್‌: ಹಾಲೆಂಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 (ಟಾಮ್‌ ಕೂಪರ್‌ ಔಟಾಗದೆ 72, ಬೆನ್‌ ಕೂಪರ್‌ 20, ಪ್ರಾಸ್ಪರ್‌ ಉತ್ಸೇಯಾ 24ಕ್ಕೆ 2 ); ಜಿಂಬಾಬ್ವೆ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 146 (ಹ್ಯಾಮಿಲ್ಟನ್‌ ಮಸಕಜ 43, ಬ್ರೆಂಡನ್‌ ಟೇಲರ್‌ 49,  ಪೀಟರ್‌ ಸೀಲಾರ್‌ 9ಕ್ಕೆ 2,)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.