ಮಡಿಕೇರಿ: ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನಿಗದಿಪಡಿಸಿದ್ದ ರೂ 50 ಕೋಟಿ ಹಣದಲ್ಲಿ ಚಿಕ್ಕಾಸನ್ನೂ ಜಿಲ್ಲಾ ಪಂಚಾಯಿತಿ ರಸ್ತೆಗಳಿಗೆ ನೀಡದೇ ಎಲ್ಲ ಹಣವನ್ನು ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಮೀಸಲು ಇಟ್ಟಿರುವ ಸರ್ಕಾರದ ನಿರ್ಧಾರವನ್ನು ಬುಧವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರವಾಗಿ ಖಂಡಿಸಿದರು.

ಜಿಲ್ಲೆಯಲ್ಲಿ ಕೇವಲ 1,500 ಕಿ.ಮೀ ಮಾತ್ರ ಲೋಕೋಪಯೋಗಿ ಇಲಾಖೆಯ ರಸ್ತೆಗಳಿವೆ. ಇದಕ್ಕಿಂತ ಹೆಚ್ಚು ಜಿಲ್ಲಾ ಪಂಚಾಯಿತಿ ರಸ್ತೆಗಳಿದ್ದು (4,600 ಕಿ.ಮೀ ಉದ್ದ) ಇವುಗಳ ಅಭಿವೃದ್ಧಿಗೆ ಚಿಕ್ಕಾಸೂ ನೀಡಿಲ್ಲವೆಂದು ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಧಾರಾಕಾರ ಮಳೆಯಿಂದಾಗಿ ಜಿ.ಪಂ.ವ್ಯಾಪ್ತಿಯಲ್ಲಿ 4600ಕ್ಕೂ ಹೆಚ್ಚು ಕಿ.ಮೀ. ರಸ್ತೆ ಒಳಗೊಂಡಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ 1,600, ಸೋಮವಾರಪೇಟೆ ತಾಲ್ಲೂಕಿನಲ್ಲಿ 1,601, ಮಡಿಕೇರಿ ತಾಲ್ಲೂಕು 1,442 ಕಿ.ಮೀ. ಉದ್ದದ ರಸ್ತೆ ಇದ್ದು, ಈ ರಸ್ತೆಗಳು ಈ ಬಾರಿಯ ಮಳೆಯಿಂದಾಗಿ ಹಾನಿಯಾಗಿದ್ದು, ಇನ್ನೂ ಸರಿಪಡಿಸಿಲ್ಲ ಎಂದರು.

‘ಈ ರಸ್ತೆಗಳ ದುರಸ್ತಿಗೆ ಅನುದಾನ ಹಂಚಿಕೆ ಮಾಡದೆ 50 ಕೋಟಿ ರೂಪಾಯಿಯನ್ನು ಸಂಪೂರ್ಣವಾಗಿ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿರುವುದು ಸರಿಯೇ?’ ಎಂದು ಖಾರವಾಗಿ ಪ್ರಶ್ನಿಸಿದರು.ಜಿಲ್ಲಾ ಪಂಚಾಯಿತಿ ರಸ್ತೆಗಳಿಗೆ ರೂ 30 ಕೋಟಿ ಹಾಗೂ ಪಿಡಬ್ಲುಡಿ ರಸ್ತೆಗಳಿಗೆ ರೂ 20 ಕೋಟಿ ಹಂಚಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ತಿಳಿಸಿದರು.

ಸಚಿವರ ವಿರುದ್ಧ ಆರೋಪ
ಜಿಲ್ಲೆಯಾದ್ಯಂತ ಹರಡಿಕೊಂಡಿರುವ ಜಿ.ಪಂ. ರಸ್ತೆಗಳನ್ನು ಕೊಡಗು ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಲೋಕೋಪಯೋಗಿ ಸಚಿವರು ನಿರ್ಲಕ್ಷಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉಷಾ ದೇವಮ್ಮ ಆರೋಪಿಸಿದರು.ಪಿಡಬ್ಲುಡಿ ರಸ್ತೆಗಳ ಅಭಿವೃದ್ಧಿಗೆ ಕೆಆರ್ಡಿಸಿಎಲ್ ಹಾಗೂ ಇತರ ಯೋಜನೆಯಡಿ ಅನುದಾನ ದೊರೆಯುತ್ತದೆ.

ಈ ರಸ್ತೆಗಳಿಗೆ ಯಾವುದೇ ಅನುದಾನದ ಕೊರತೆ ಇರುವುದಿಲ್ಲ. ಆದರೆ, ಜಿಲ್ಲಾ ಪಂಚಾಯಿತಿಗಳ ರಸ್ತೆಗಳಿಗೆ ಈ ಅನುದಾನ ದೊರೆಯುವುದಿಲ್ಲ. ಹೀಗಾಗಿ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೈಗೊಂಡ ನಿರ್ಣಯದಂತೆ ರೂ 30 ಕೋಟಿ ಜಿಲ್ಲಾ ಪಂಚಾಯಿತಿ ರಸ್ತೆಗಳಿಗೆ ಹಾಗೂ ರೂ 20 ಕೋಟಿ ಪಿಡಬ್ಲುಡಿ ರಸ್ತೆಗಳಿಗೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರೆ, ಮತ್ತೊಂದೆಡೆ ಕಾಂಗ್ರೆಸ್ ಸದಸ್ಯರಾದ ಪ್ರತ್ಯು, ವೆಂಕಟೇಶ್, ಸರಿತಾ ಪೂಣಚ್ಚ ಕೂಡ ಬಿಜೆಪಿ ಸದಸ್ಯರ ನಡವಳಿಕೆಯನ್ನು ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶಿಸಿದರು.

‘ಪರಿಶಿಷ್ಟರಿಗೆ ಮಂಜೂರಾದ ಜಾಗ ಅತಿಕ್ರಮಣ’
ವಿರಾಜಪೇಟೆ ತಾಲ್ಲೂಕಿನ ಬಿಳುಗುಂದ ಪಂಚಾಯಿತಿಯ ಹೊಸಕೋಟೆ ಗ್ರಾಮದ ಪಿಲಿಬೆಟ್ಟ ಪೈಸಾರಿ ಜಾಗವನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ನಿವೇಶನ ನೀಡಲು ಮಂಜೂರಾಗಿದ್ದರೂ ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆಂದು ಸದಸ್ಯೆ ಎಚ್.ಎಂ. ಕಾವೇರಿ ವಿಷಯ ಪ್ರಸ್ತಾಪಿಸಿದರು.

ದಲಿತರಿಗೆ ನಿವೇಶನ ಕೊಡಿಸಲು ಹೋರಾಟ ಮಾಡಿದ ನನ್ನ ವಿರುದ್ಧ ಈ ವ್ಯಕ್ತಿಗಳು ಮೊಕದ್ದಮೆ ದಾಖಲಿಸಿದ್ದಾರೆ ಎಂದೂ ಅವರು ಹೇಳಿದರು.ಈ ಪ್ರಕರಣದ ವಕಾಲತ್ತು ವಹಿಸಿಕೊಂಡಿರುವ ವಕೀಲರೂ ಆಗಿರುವ ವೆಂಕಟೇಶ್ ಮಾತನಾಡಿ, ಪರಿಶಿಷ್ಟರಿಗೆ ನಿವೇಶನ ನೀಡಲು ಈ ಜಾಗವನ್ನು ಮಂಜೂರು ಮಾಡಿರುವ ಸರ್ಕಾರ ಖುದ್ದಾಗಿ ತನ್ನನ್ನು ಪ್ರತಿವಾದಿಯಾಗಿ ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಮೊರೆಹೋಗಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಐಟಿಡಿಪಿ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಅವರು ಕೋರಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ ಮಾತನಾಡಿ, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಮೇಜು ಕುಟ್ಟುವ ಸ್ಪರ್ಧೆ

ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ‘ಮೇಜು ಕುಟ್ಟುವ ಸ್ಪರ್ಧೆ’ಯೊಂದು ನಡೆಯಿತು. ಮಾತುಮಾತಿಗೆ ಮೇಜು ಕುಟ್ಟಿ ಮಾತನಾಡುತ್ತ ಒಬ್ಬರ ಮೇಲೊಬ್ಬರು ಹರಿಹಾಯುತ್ತಿದ್ದುದು ಕಂಡುಬಂದಿತು.
ಬಿಜೆಪಿಯ ಎಸ್.ಎನ್. ರಾಜಾರಾವ್ ಯಾವುದೇ ವಿಷಯ ಮಂಡಿಸಿ ದಾಗಲೂ ಮೇಜು ಕುಟ್ಟಿ ಅದಕ್ಕೊಂದು ಷರಾ ಬರೆಯುತ್ತಿದ್ದರು.

ಜಿಲ್ಲೆಯ ಗಿರಿಜನರು ಹಲವು ವರ್ಷಗಳಿಂದ ಮೂಲಸೌಕರ್ಯವಿಲ್ಲದೇ ಕಷ್ಟಪಡು ತ್ತಿದ್ದಾರೆ. ಇವರಿಗೆ ಅನುಕೂಲ ಕಲ್ಪಿಸಲು ಕಾಮಗಾರಿ ಕೈಗೊಳ್ಳಲು ಹೊರಟರೆ ಅದಕ್ಕೆ ಅರಣ್ಯ ಇಲಾಖೆಯವರು ಅಡ್ಡಿ ಮಾಡುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಮಧ್ಯೆಪ್ರವೇಶ ಮಾಡಬೇಕಾದ ಸಂಸದರು ಎಲ್ಲಿದ್ದಾರೆ? ಲೋಕಸಭೆ ಯಲ್ಲಿ ಏಕೆ ಚಕಾರವೆತ್ತುತ್ತಿಲ್ಲ? ಎಂದು ರಾಜಾರಾವ್ ಮೇಜುಕುಟ್ಟಿ ಪ್ರಶ್ನಿಸಿದರು.

ಇವರಷ್ಟೇ ವೇಗದಲ್ಲಿ ಮೇಜುಕುಟ್ಟುತ್ತ ಮಾತಿಗೆ ನಿಂತ ಕಾಂಗ್ರೆಸ್ಸಿನ ಪ್ರತ್ಯು ಅವರು, ಸಂಸದರ ಬಗ್ಗೆ ಹೇಳಿದ ಮಾತುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಒಬ್ಬರಿಗೊಬ್ಬರು ಸ್ಪರ್ಧೆಗೆ ಇಳಿದಂತೆ ಮೇಜು ಕುಟ್ಟಿ ಜೋರು ಧ್ವನಿಯಲ್ಲಿ ಮಾತನಾಡಿದರು. ಇವರಿಬ್ಬರ ಗದ್ದಲವನ್ನು ನಿಯಂತ್ರಿಸಲು ಅಧ್ಯಕ್ಷ ಬಿ.ಶಿವಪ್ಪ ಕೂಡ ಮೇಜು ಕುಟ್ಟಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.