ಗುರುವಾರ , ಮೇ 13, 2021
16 °C

ಜಿಲ್ಲಾಧಿಕಾರಿ ಅಪಹರಣ: ಮಹತ್ವದ ಸುಳಿವು ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯ್‌ಪುರ (ಪಿಟಿಐ): ನಕ್ಸಲೀಯರಿಂದ ಶನಿವಾರ ಅಪಹರಣಕ್ಕೆ ಒಳಗಾಗಿರುವ ಛತ್ತೀಸ್‌ಗಡದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಭಾನುವಾರ ಪೊಲೀಸರು ಹೇಳಿದ್ದಾರೆ.ಮೆನನ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಮಹತ್ವದ ಸುಳಿವುಗಳು ದೊರೆತಿವೆ ಎಂದು ಹೇಳಿರುವ ಹೆಚ್ಚುವರಿ ಪೊಲೀಸ್ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ರಾಮ್ ನಿವಾಸ್ ಅವರು ಭದ್ರತಾ ವೈಫಲ್ಯದಿಂದ ಅಪಹರಣ ನಡೆದಿರುವ ವರದಿಯನ್ನು ತಳ್ಳಿಹಾಕಿದ್ದಾರೆ.ಮಜಿಪುರ ಗ್ರಾಮದಲ್ಲಿ ಮೆನನ್ ಅವರು ಹಮ್ಮಿಕೊಂಡಿದ್ದ `ಗ್ರಾಮ್ ಸೂರಜ್~ ಕಾರ್ಯಕ್ರಮಕ್ಕೆ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ರಾಮ್ ನಿವಾಸ್ ಹೇಳಿದರು.2006ರ ತಂಡದ ಐಎಎಸ್ ಅಧಿಕಾರಿ ಮೆನನ್, ಶನಿವಾರ ಮಜಿಪುರ ಗ್ರಾಮದಲ್ಲಿ `ಗ್ರಾಮ್ ಸೂರಜ್~ ಕಾರ್ಯಕ್ರಮ ನಡೆಸುತ್ತಿದ್ದ  ವೇಳೆ ಅಲ್ಲಿಗೆ ಮೋಟಾರ್‌ಬೈಕ್‌ಗಳಲ್ಲಿ ಬಂದ ಸುಮಾರು 20 ನಕ್ಸಲೀಯರು ಮೊದಲು ಜಿಲ್ಲಾಧಿಕಾರಿಯ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿ, ನಂತರದಲ್ಲಿ ಮೆನನ್ ಅವರನ್ನು ಅಪಹರಿಸಿದ್ದಾರೆ.ಬಿಡುಗಡೆಗಾಗಿ ಪತ್ನಿ ಮನವಿ: ಅಪಹರಣದ ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಅಲೆಕ್ಸ್ ಅವರ ಪತ್ನಿ ಆಶಾ ಅವರು ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಔಷಧೋಪಚಾರದ ಅಗತ್ಯವಿದೆ ಆದ್ದರಿಂದ ಅವರನ್ನು ಮಾನವಿಯತೆಯ ದೃಷ್ಟಿಯಿಂದ ಬಿಡುಗಡೆಗೊಳಿಸುವಂತೆ ನಕ್ಸಲೀಯರಿಗೆ ಮನವಿ ಮಾಡಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.