ಬಾಗಲಕೋಟೆ: ಜಿಲ್ಲಾ ಅಗ್ರಣಿ ಬ್ಯಾಂಕ್ ಆಗಿರುವ ಸಿಂಡಿಕೇಟ್ ಬ್ಯಾಂಕು ಜಿಲ್ಲೆಗಾಗಿ ಪ್ರಸಕ್ತ 2011-12ನೇ ಸಾಲಿಗಾಗಿ ಒಟ್ಟು 2241 ಕೋಟಿ ರೂಪಾಯಿ ಸಾಲ ಯೋಜನೆ ತಯಾರಿಸಿದೆ. ಜಿಲ್ಲೆಯ 16 ವಾಣಿಜ್ಯ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಭೂ ಅಭಿವೃದ್ಧಿ ಬ್ಯಾಂಕ್, ಕೆಎಸ್ಎಫ್ಸಿ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳ ಸಾಲ ಯೋಜನೆಯ ಕ್ರೋಡೀಕೃತ ಜಿಲ್ಲಾ ಸಾಲ ಯೋಜನೆ ಇದಾಗಿದೆ.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದರು.ನಂತರಮಾತನಾಡಿದ ಅವರು, ‘ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿರುವ ಸಾಲ ಯೋಜನೆಯಲ್ಲಿ ತೋಟಗಾರಿಕೆ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಇದು ಸಹಕಾರಿಯಾಗಲಿದೆ’ ಎಂದರು.

ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಸಿ. ಪ್ರಕಾಶ್, ಸಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬ್ಯಾಂಕು ಹಾಗೂ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಆದ್ಯತಾರಂಗಕ್ಕೆ 1949 ಕೋಟಿ
ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ತಯಾರಿಸಲಾಗಿರುವ ಜಿಲ್ಲಾ ಸಾಲ ಯೋಜನೆಯಲ್ಲಿ ಆದ್ಯತಾರಂಗಕ್ಕೆ 1949.81 ಕೋಟಿ ರೂಪಾಯಿ ಹಾಗೂ ಆದ್ಯತೇತರ ರಂಗಕ್ಕೆ 298 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂಧಕ ಎ.ಕೆ.ಜಯಚಂದ್ರನ್ ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಸಾಲ ಯೋಜನೆಯಲ್ಲಿ ಶೇ.22.28ರಷ್ಟು ಹೆಚ್ಚಳ ಕಾಣಬಹುದು ಎಂದರು. ಆದ್ಯತಾರಂಗಕ್ಕೆ ಕಳೆದ ಬಾರಿಗಿಂತ 284.70 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ ಎಂದು ಜಯಚಂದ್ರನ್ ವಿವರಿಸಿದರು. ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ. ದೇಸಾಯಿ, ಒಟ್ಟು ಸಾಲಯೋಜನೆಯಲ್ಲಿ ತಾಲ್ಲೂಕುವಾರು ಮೀಸಲಿರಿಸಿದ ಸಾಲದ ವಿವರ ನೀಡಿದರು.

“ಕೃಷಿಗಾಗಿ ಒಟ್ಟು 1949.81 ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳು ಪ್ರಾಮುಖ್ಯತೆ ಪಡೆಯುತ್ತಿರುವುದರಿಂದ ಇವುಗಳಿಗೆ ಕ್ರಮವಾಗಿ 87 ಮತ್ತು 225 ಕೋಟಿ ರೂಪಾಯಿ ಮೀಸಲಿಡಲಾಗಿದೆ” ಎಂದು ತಿಳಿಸಿದರು. ವಾಣಿಜ್ಯ, ಸಹಕಾರಿ, ಗ್ರಾಮೀಣ ಬ್ಯಾಂಕುಗಳು ಮತ್ತು ಕರ್ನಾಟಕ ಹಣಕಾಸು ನಿಗಮದ ಮೂಲಕ ಸಾಲವನ್ನು ವಿತರಿಸಲಾಗುವುದು ಎಂದು ದೇಸಾಯಿ ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ ಅತಿಥಿಯಾಗಿ ಆಗಮಿಸಿದ್ದರು. ಜಿಪಂ ಸಿಇಓ ಡಾ.ಜಿ.ಸಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

ರಿಜರ್ವ್ ಬ್ಯಾಂಕಿನ ಜಿಲ್ಲಾ ಉಸ್ತುವಾರಿ ಅಧಿಕಾರಿ ಮುತ್ತುಶೆಲ್ವನ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಎನ್.ರವಿಕುಮಾರ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.