ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೇ 31ರವರೆಗೆ 11561 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಆರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 358500 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಚಳ್ಳಕೆರೆ 99200 ಹೆಕ್ಟೇರ್ ಗುರಿಯಲ್ಲಿ 491, ಚಿತ್ರದುರ್ಗ 66500 ಹೆಕ್ಟೇರ್ಗೆ 2255, ಹಿರಿಯೂರು 49200 ಹೆಕ್ಟೇರ್ಗೆ 1337, ಹೊಳಲ್ಕೆರೆ 54900 ಹೆಕ್ಟೇರ್ಗೆ 4609 ಬಿತ್ತನೆ, ಹೊಸದುರ್ಗ 60500 ಹೆಕ್ಟೇರ್ಗೆ 2494 ಹಾಗೂ ಮೊಳಕಾಲ್ಮುರು 28200 ಹೆಕ್ಟೇರ್ಗೆ ಬಿತ್ತನೆ ಗುರಿಯಲ್ಲಿ 375 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಿತ್ತನೆಯಾದ ಬೆಳೆಗಳಲ್ಲಿ ಹತ್ತಿ 5830, ಶೇಂಗಾ 990, ಮೆಕ್ಕೆಜೋಳ 1336, ಬೇಳೆಕಾಳು 1736, ಹೆಸರುಕಾಳು 1374 ಹಾಗೂ ಹತ್ತಿಯನ್ನು 5830 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಳೆ ವಿವರ
ಜಿಲ್ಲೆಯಲ್ಲಿ ಜೂನ್ 1ರವರೆಗಿನ 140.4 ಮಿ.ಮೀ ವಾಡಿಕೆಗೆ 167 ಮಿ.ಮೀ ಸರಾಸರಿ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 114.4 ಮಿ.ಮೀ ವಾಡಿಕೆಗೆ 169.6 ಮಿ.ಮೀ, ಚಿತ್ರದುರ್ಗ 170.9 ವಾಡಿಕೆಗೆ 284.6, ಹಿರಿಯೂರು 135 ಮಿ.ಮೀ ವಾಡಿಕೆಗೆ 129.5, ಹೊಳಲ್ಕೆರೆ 176 ಮಿ.ಮೀ ವಾಡಿಕೆಗೆ 220.5, ಹೊಸದುರ್ಗ 130.8 ವಾಡಿಕೆಗೆ 102.4 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 115.1 ಮಿ.ಮೀ ವಾಡಿಕೆಗೆ 95.5 ಮಿ.ಮೀ ಮಳೆಯಾಗಿದೆ. ಹಿರಿಯೂರು, ಹೊಸದುರ್ಗ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.