ಹುಬ್ಬಳ್ಳಿ: ಜಿಲ್ಲಾ ಸಾಲ ಯೋಜನೆಯಡಿ ಕಳೆದ ಜೂನ್ ತ್ರೈಮಾಸಿಕ ಅಂತ್ಯದವರೆಗೆ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳು 430.70 ಕೋಟಿ ರೂ. ಸಾಲ ವಿತರಿಸುವ ಗುರಿ ಅನ್ವಯ 400.65 ಕೋಟಿ ರೂಪಾಯಿ ಸಾಲ ವಿತರಿಸುವ ಮೂಲಕ ಶೇ. 93ರಷ್ಟು ಸಾಧನೆ ಮಾಡಿವೆ ಎಂದು ಬುಧವಾರ ನಡೆದ ಧಾರವಾಡ ಜಿಲ್ಲಾ ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಲಾಯಿತು.

ಲೀಡ್ ಬ್ಯಾಂಕ್ ಆದ ವಿಜಯಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಎ ಟಾಟಾ ಈ ವಿಷಯವನ್ನು ತಿಳಿಸಿದರು. ಸಾಲ ನೀಡಿಕೆಯಲ್ಲಿ ಹಾಗೂ ಆದ್ಯತಾ ಕ್ಷೇತ್ರಗಳಿಗೆ ಒಟ್ಟು 264.38 ಕೋಟಿ ರೂ. ಸಾಲ ವಿತರಿಸಲಾಗಿದ್ದು ಶೇ. 72 ರಷ್ಟು ಸಾಧನೆಯಾಗಿದೆ.

ಆದ್ಯತಾರಹಿತ ಕ್ಷೇತ್ರ ಗಳಿಗೆ 136.27 ಕೋಟಿ ರೂ. ಸಾಲ ವಿಸ್ತರಿಸುವ ಮೂಲಕ ಶೇ.100 ಕ್ಕೆ ಹೆಚ್ಚು ಸಾಧನೆ ಮಾಡಲಾಗಿದೆ, ಸಣ್ಣ ಉದ್ದಿಮೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವು ದರೊಂದಿಗೆ ಸುವರ್ಣಭೂಮಿ ಯೋಜನೆ ಮತ್ತು ಶಾಖಾ ರಹಿತ ಹಳ್ಳಿಗಳಲ್ಲಿ ಬ್ಯಾಂಕ್ ಸೌಲಭ್ಯ ವಿಸ್ತರಿ ಸಲು ಹೆಚ್ಚಿನ ಗಮನ ಹರಿಸಲು ಕರೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿನಿಧಿ ಆರ್. ರಾಮಚಂದ್ರನ್ ಮಾತನಾಡಿ, ಜಿಲ್ಲೆಯಲ್ಲಿಯ 77 ಬ್ಯಾಂಕ್ ಶಾಖಾ ರಹಿತ ಗ್ರಾಮ ಗಳ ಪೈಕಿ 26 ಗ್ರಾಮಗಳಲ್ಲಿ ಬ್ಯಾಂಕ್ ಸೌಲಭ್ಯ ಕಲ್ಪಿ ಸಲಾಗಿದೆ. ಆದರೆ ಇನ್ನೂ 51 ಗ್ರಾಮಗಳಲ್ಲಿ ಈ ಸೌಲಭ್ಯವಿರುವದಿಲ್ಲ.

ಸಂಬಂಧಪಟ್ಟ ಬ್ಯಾಂಕುಗಳು ಬರುವ ಮಾರ್ಚ್ ಅಂತ್ಯದೊಳಗಾಗಿ ತಮ್ಮ ವ್ಯಾಪ್ತಿ ಯಲ್ಲಿ ಬರುವ ಈ ಹಳ್ಳಿಗಳಲ್ಲಿ ಬ್ಯಾಂಕ್ ವ್ಯವಹಾರ ಪ್ರತಿನಿಧಿಗಳನ್ನು ಒದಗಿಸುವ ಮೂಲಕ ಅಲ್ಲಿ ಬ್ಯಾಂಕ್ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

ಬ್ಯಾಂಕ್ ಸೌಲಭ್ಯದ ಮಾಹಿತಿ ಹಾಗೂ ಸಲಹೆ ನೀಡುವುದಕ್ಕಾಗಿ ವಿಜಯಾ ಬ್ಯಾಂಕ್ ಇದೇ 30ರಂದು ಧಾರವಾಡ ಜಿಲ್ಲಾ ಕೇಂದ್ರದಲ್ಲಿ ಮಾಹಿತಿ ಹಾಗೂ ಸಲಹಾ ಕೇಂದ್ರ ಪ್ರಾರಂಭಸಲಿದೆ ಎಂದು ಅವರು ಪ್ರಕಟಿ ಸಿದರು.

ಇದೇ ರೀತಿ ಗ್ರಾಹಕರ ಅನುಕೂಲಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ ಇಂತಹ ಕೇಂದ್ರಗಳನ್ನು ಪ್ರಾರಂಭಿಸ ಬೇಕಾಗಿದೆ ಎಂದ ಅವರು, ನವಲಗುಂದದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕುಂದಗೋಳದಲ್ಲಿ ಸಿಂಡಿ ಕೇಟ್ ಬ್ಯಾಂಕ್, ಕಲಘಟಗಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್ಗಳು ಇಂತಹ ಮಾಹಿತಿ ಹಾಗೂ ಸಲಹಾ ಕೇಂದ್ರ ಪ್ರಾರಂಭಿಸುವ ಕುರಿತು ಸಭೆಯಲ್ಲಿ ತಾತ್ವಿಕವಾಗಿ ನಿರ್ಧರಿಸಲಾಯಿತು.

ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ನಿರ್ದೇಶ ನದಂತೆ ಜಿಲ್ಲೆಯಲ್ಲಿ ಸಾಲ ತಲುಪದ ಹಾಗೂ ಸಾಲ ಬಯಸುವ ಎಲ್ಲಾ ಅರ್ಹ ರೈತರಿಗೆ ಸಾಲ ಸೌಲಭ್ಯ ವನ್ನು ಬ್ಯಾಂಕುಗಳು ವಿತರಿಸಬೇಕು. ಈ ಉದ್ದೇಶಕ್ಕಾಗಿ ಕ್ಷಿಪ್ರ ಕ್ರಿಯಾ ಯೋಜನೆಯನ್ನು ಬ್ಯಾಂಕ್ ಸಲಹಾ ಸಮಿತಿ ಸಭೆಯಲ್ಲಿ ತಯಾರಿಸಿ ಇದೇ 30ರ ಅಂತ್ಯದೊಳಗಾಗಿ ಎಲ್ಲ ಅರ್ಹ ರೈತರಿಗೆ ಸಾಲ ವಿತರಿಸಲು ಬ್ಯಾಂಕುಗಳಿಗೆ ತಿಳಿಸಲಾಗಿದೆ ಎಂದು ನಬಾರ್ಡ್ ಅಧಿಕಾರಿ ವೈ.ಎನ್.ಮಹದೇವಯ್ಯ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಈ ಯೋಜನೆಯನ್ವಯ ಸಾಲ ಸೌಲಭ್ಯ ತಲುಪದ 1.26 ಲಕ್ಷ ರೈತರನ್ನು ಗುರುತಿಸಿದ್ದು, ಆ ಪೈಕಿ ಈವರೆಗೆ 83 ಸಾವಿರ ರೈತರನ್ನು ಬ್ಯಾಂಕ್ ಸೌಲಭ್ಯದ ವ್ಯಾಪ್ತಿಗೆ ತರಲಾಗಿದೆ ಎಂದರು, ಬ್ಯಾಂಕ್ ಸೌಲಭ್ಯ ತಲುಪದ ರೈತರನ್ನು ಕೂಡಲೇ ಗುರುತಿಸಿ ಇದೇ ಸೆಪ್ಟೆಂಬರ್ ಅಂತ್ಯದೊಳಗಾಗಿ ಅವರನ್ನು ಬ್ಯಾಂಕ್ ಸಾಲ ಸೌಲಭ್ಯದ ವ್ಯಾಪ್ತಿಗೆ ತರುವಂತೆ ಮಹದೇವಯ್ಯ ಸಲಹೆ ಮಾಡಿದರು.

ತಹಸೀಲ್ದಾರ ಎಸ್. ಎಸ್. ಬಿರಾದಾರ ಅವರು ಭೂಮಿ ಬ್ಯಾಂಕ್ ಸಂಯೋಜನೆ ಕಾರ್ಯಕ್ರಮ ಈಗಾಗಲೇ ಜಿಲ್ಲೆಯಲ್ಲಿ ಅನುಷ್ಠಾನಗೊಡಿದೆ ಎಂದರು. ಜಿಲ್ಲಾ ಪಂಚಾಯಿತಿ ಡಿಅರ್ಡಿಎ ಯೋಜನಾ ನಿರ್ದೇಶಕ ಎಸ್.ವಿ.ದಿಂಡಲಕೊಪ್ಪ ಅಧ್ಯ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜಿ. ಎಸ್. ಬಸವರಾಜಪ್ಪ ಸಾಲ ಯೋಜನೆಯ ಪ್ರಗತಿ ವಿವರಗಳನ್ನು ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.