ರಾಮನಗರ: `ಸಮಾಜಕ್ಕೆ ಅಂಟಿರುವ ಜೀತಪದ್ಧತಿ ನಿರ್ಮೂಲನೆ ಮಾಡಲು ಸಮುದಾಯದ ಸಹಭಾಗಿತ್ವವೂ ಅಗತ್ಯ' ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ರಾಮನಗರ ಜಿಲ್ಲಾ ಮಟ್ಟದ ಜೀತಪದ್ಧತಿ ನಿರ್ಮೂಲನೆಗಾಗಿ ಕ್ರಿಯಾ ಯೋಜನೆ ಹಾಗೂ ಜೀತದಾಳು ಸಮೀಕ್ಷೆಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

`ಜೀತ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವಾರು ಕಾರ್ಯಕ್ರಮ ರೂಪಿಸಿದ್ದು, ಜೀತದಾಳುಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ' ಎಂದರು.

`ಈ ಪದ್ಧತಿಯಿಂದ ಸಾಮಾಜಿಕ, ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತದೆ. ಬೃಹತ್ ಕಟ್ಟಡಗಳನ್ನು ಕಟ್ಟುವ ಸ್ಥಳಗಳಲ್ಲಿ, ಕ್ರಷರ್ಗಳಲ್ಲಿ, ಕಾರ್ಖಾನೆಗಳಲ್ಲಿ ಇಂದಿಗೂ ಜೀತಪದ್ಧತಿ ಜೀವಂತವಾಗಿರುವುದು ಕಂಡುಬರುತ್ತಿದೆ. ಜೀತಪದ್ಧತಿಗೆ ಸಂಬಂಧಿಸಿದ ಕಾರ್ಯಗಾರಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಾಗಬೇಕು' ಎಂದು ಅವರು ತಿಳಿಸಿದರು.

`ಜೀವಿಕ' ಸಂಸ್ಥೆಯ ರಾಜ್ಯ ಘಟಕದ ಸಂಚಾಲಕ ಕಿರಣ್ ಕಮಾಲ್ ಪ್ರಸಾದ್ ಮಾತನಾಡಿ, `ಸಮಾನತೆ ಮತ್ತು ಶೋಷಣೆಯ ವಿರುದ್ಧದ ಹಕ್ಕು ಉಲ್ಲಂಘನೆ ಆಗುತ್ತಿರುವುದು ಕಳವಳಕಾರಿ ಸಂಗತಿ. ಅಸ್ಪೃಶ್ಯತೆ ಆಚರಣೆ, ವ್ಯಕ್ತಿಗಳ ಮಾರಾಟ ಮತ್ತು ಸಾಗಾಣಿಕೆ, 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದೂ ಜೀತ ಪದ್ಧತಿಯಡಿ ಬರುತ್ತದೆ' ಎಂದು ಹೇಳಿದರು.

`1976ರಲ್ಲಿಯೇ ಜೀತಪದ್ಧತಿ ನಿಷೇಧಿಸಿ ಕಾನೂನು ಜಾರಿಗೆ ತರಲಾಗಿದೆ. ಅಲ್ಲಿಂದ 67,708 ಜೀತದಾಳುಗಳನ್ನು ವಿಮುಕ್ತಿಗೊಳಿಸುವ ಮೂಲಕ ಕರ್ನಾಟಕ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜೀತಪದ್ಧತಿ ನಿರ್ಮೂಲನೆಗೆ ತಾಲ್ಲೂಕು, ಗ್ರಾಮ ಪಂಚಾಯಿತಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ ನಂತರ ಯಾವುದೇ ಸಂಸ್ಥೆ ಮರು ಸಮೀಕ್ಷೆ ನಡೆಸಿದಾಗ ಜೀತಪದ್ಧತಿ ಇರುವುದು ಸಾಬೀತಾದಲ್ಲಿ ಅಂತಹ ಪಂಚಾಯಿತಿಗಳನ್ನು ಸೂಪರ್ಸೀಡ್ ಮಾಡಲು ಅವಕಾಶವಿದೆ' ಎಂದು ಅವರು ತಿಳಿಸಿದರು.

`ಜೀವಿಕ' ಸಂಸ್ಥೆಯ ಜಿಲ್ಲಾ ಘಟಕದ ಸಂಚಾಲಕ ಗಂಗಹನುಮಯ್ಯ ಮಾತನಾಡಿ, `ಜಿಲ್ಲೆಯಲ್ಲಿ ಇದುವರೆವಿಗೂ ಜೀತಪದ್ಧತಿ ನಿರ್ಮೂಲನೆ ಕುರಿತಂತೆ ಅಧಿಕಾರಿಗಳು ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ನಾಲ್ಕು ಸಾವಿರಕ್ಕೂ ಹೆಚ್ಚು ಜೀತ ಕಾರ್ಮಿಕರ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ' ಎಂದು ದೂರಿದರು.

ಅಸಮಾಧಾನ: ಜೀತಪದ್ಧತಿ ನಿರ್ಮೂಲನೆಗಾಗಿ ಕ್ರಿಯಾ ಯೋಜನೆ ಹಾಗೂ ಜೀತದಾಳು ಸಮೀಕ್ಷೆಯ ಕಾರ್ಯಾಗಾರಕ್ಕೆ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರುಗಳಿಗೆ ಆಹ್ವಾನ ನೀಡಿಲ್ಲ ಎಂದು ಜಾಗೃತಿ ಸಮಿತಿ ಸದಸ್ಯೆ ಎಂ.ಜಯಮ್ಮ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಏರಿ ತಮ್ಮ ಅಸಮಾಧಾನ ಹೊರಹಾಕಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಉಪ ವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರಪ್ರಸಾದ್, ತಹಶೀಲ್ದಾರ್ ವಿ. ಹನುಂತರಾಯಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಮ್ಮಪ್ಪ, ಜಿಲ್ಲಾ ಕಾರ್ಮಿಕಾಧಿಕಾರಿ ಎಂ.ನಾಗರಾಜು, ನಗರಸಭೆ ಆಯುಕ್ತ ಜಿ.ವಿ. ಯಶವಂತಕುಮಾರ್, ಜೀವಿಕ ಸಂಸ್ಥೆಯ ರಾಜ್ಯ ಘಟಕದ ಮಹಿಳಾ ಸಂಚಾಲಕಿ ವಿಜಯಕುಮಾರಿ, ತಾಲ್ಲೂಕು ಸಂಚಾಲಕರಾದ ಹನುಮಂತು, ಬಿ.ಕೆ. ಯಶೋದಾ, ಕೆಂಪಲಕ್ಷ್ಮಮ್ಮ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೂ ಗುಚ್ಛ ಕಂಡು ಕೆಂಪಗಾದ ಕಣ್ಣು
ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳಿಗೆ ಹೂವಿನ ಹಾರ ಮತ್ತು ಹೂಗುಚ್ಛಗಳನ್ನು ನೀಡುವ ಬದಲು ಕನ್ನಡದ ಪುಸ್ತಕಗಳನ್ನು ನೀಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಡಾ.ಎಂ.ವಿ. ವೆಂಕಟೇಶ್ ಇತ್ತೀಚೆಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸೂಚಿಸಿದ್ದರು. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ದುಬಾರಿ ಹೂವಿನ ಗುಚ್ಛಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ನೀಡಿದ್ದು ಡಾ.ಎಂ.ವಿ. ವೆಂಕಟೇಶ್ ಅವರ ಕಣ್ಣು ಕೆಂಪಾಗಲು ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.