ಮಂಗಳವಾರ, ಮೇ 17, 2022
27 °C

ಜೀವವೈವಿಧ್ಯದ ಬೊರ್ ಧಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವವೈವಿಧ್ಯದ ಬೊರ್ ಧಾಮ

ದಟ್ಟಕಾಡಿನ ನಡುವೆ ತೊರೆಗಳ ನಿನಾದ. ಹೆಜ್ಜೆಹೆಜ್ಜೆಗೂ ಕಾಣಸಿಗುವ ವಿವಿಧ ಪ್ರಾಣಿಗಳು. ಧುತ್ತನೆ ಎದುರಾಗುವ ಕ್ರೂರ ಮೃಗಗಳು. ಇದು  ಮಹಾರಾಷ್ಟ್ರದ ಬೊರ್ ಧಾಮ. ವಾರ್ಧಾ ಜಿಲ್ಲೆಯ ಸೆಲು ತಾಲ್ಲೂಕಿಗೆ ಸೇರಿದ ಬೊರ್ ಧಾಮದಲ್ಲಿ ವನ್ಯಜೀವಿ ಸಂರಕ್ಷಣಾ ವಲಯ ಇದೆ.1970ರಲ್ಲಿ ಈ ಕಾಡನ್ನು ರಕ್ಷಿತ ಅರಣ್ಯ ಎಂದು ಗುರುತಿಸಿ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳಲಾಯಿತು. ಇಲ್ಲಿ ಹರಿಯುವ ಬೊರ್ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿದೆ.

 

ಅದರ ಎದುರು ಸುಂದರ ಉದ್ಯಾನವನ ಇದೆ. ಅದನ್ನು ಪ್ರವಾಸಿಸ್ನೇಹಿಯಾಗಿ ರೂಪಿಸಲಾಗಿದ್ದು, ಸುತ್ತಮುತ್ತ ಇರುವ ರಕ್ಷಿತ ಅರಣ್ಯ ಪ್ರದೇಶಕ್ಕೂ ಪ್ರವಾಸಿಗರು ಭೇಟಿ ನೀಡಲು ಅನುವು ಮಾಡಿಕೊಡಲಾಗಿದೆ.ಜಲಾಶಯ ನೋಡಿಕೊಂಡು, ಉದ್ಯಾನವನದಲ್ಲಿ ಸುತ್ತಿ, ಕಾಡಿನ ಸೌಂದರ್ಯವನ್ನು ನೋಡಲು ಹೋದವರಿಗೆ ಬೊಗಳುವ ಜಿಂಕೆಯ ದರ್ಶನವಾಗುತ್ತದೆ. ಈ ಕಾಡಿನಲ್ಲಿ ವಿಶೇಷವಾಗಿ ಕಾಣಸಿಗುವ ವಿಶೇಷ ಪ್ರಾಣಿ, ಈ ಬೊಗಳುವ ಜಿಂಕೆ. ಇದರೊಂದಿಗೆ ಚುಕ್ಕೆ ಜಿಂಕೆ, ನೀಲಗಾಯ್‌ಗಳು ಕೂಡ ಅಲ್ಲಿವೆ. ಚಿರತೆ, ಹುಲಿ, ಲೆಪಾರ್ಡ್, ಕಾಡು ನಾಯಿ, ಕಾಡು ಹಂದಿ, ಕಾಡು ಬೆಕ್ಕುಗಳಷ್ಟೇ ಅಲ್ಲದೇ ನವಿಲುಗಳ ಹಿಂಡೂ ಕಾಣಸಿಗುತ್ತದೆ.ಮಳೆಗಾಲ ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸರ್ಕಾರಿ ವಸತಿ ಗೃಹಗಳೊಂದಿಗೆ ಖಾಸಗಿ ರೆಸಾರ್ಟ್‌ಗಳು  ಸಾಕಷ್ಟಿವೆ. ಇಲ್ಲಿಗೆ ನಾಗ್ಪುರ ಹತ್ತಿರದ ವಿಮಾನ ನಿಲ್ದಾಣ (80 ಕಿ.ಮೀ.). ವಾರ್ಧಾ ಹತ್ತಿರದ ರೈಲ್ವೆ ನಿಲ್ದಾಣ (35 ಕಿ.ಮೀ.).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.