ಕೊರಟಗೆರೆ: `ಹಿಂದೆಲ್ಲಾ ಪೂರ್ವ ಮುಂಗಾರಿಗೆ ಕೆರೆ-ಕಟ್ಟೆ ತುಂಬುತ್ತಿದ್ದವು. ಇದೀಗ ಆಷಾಢ ಕಳೆದು ಶ್ರಾವಣದ ಹೊಸ್ತಿಲಲ್ಲಿ ನಿಂತಿದ್ದರೂ; ಯಾವೂರ ಕೆರೆಯಲ್ಲೂ ಹನಿ ನೀರಿಲ್ಲ. ನಾವು ಚಿಕ್ಕವರಿದ್ದಾಗ ಮುಂಗಾರು ಮಳೆ ಆರ್ಭಟ ಹೇಳತೀರದು. ಮಲೆನಾಡನ್ನು ನೆನಪಿಸುತ್ತಿತ್ತು. ಕೆರೆ, ಕುಂಟೆ, ಹಳ್ಳ, ಕೊಳ್ಳ ಮೈದುಂಬಿ ಹರಿದು ಎಲ್ಲೆಡೆ ನೀರು. ನೆಲ ತೋಡುದ್ರೆ ನೀರು ಸಿಗುತ್ತಿತ್ತು'.

`ಈಗ ಆ ಮಳೆನೂ ಇಲ್ಲ. ಮಳೆಗಾಲದಲ್ಲಿ ಮೈದುಂಬುತ್ತಿದ್ದ ಕೆರೆಗಳು ಮಂಗಮಾಯ. ಕೆರೆ ಒತ್ಲಿಸಿ ಹೊಲ, ಸೈಟು ಮಾಡಿ ಮನೆ ಕಟ್ಟವ್ರೆ. ಯಾವಾಗಾದ್ರೂ ಒಂದ್ಸಲ ಮಳೆ ಬಡೀತು ಅಂದ್ರೆ ಇರೋಬರೋದ್ ಎಲ್ಲ ನೀರ ಪಾಲು ಆಗತೈತೆ. ಕೆರೆನಾ ಹಾಳ್ಮಾಡುದ್ರೆ ಪ್ರಕೃತಿಯೇ ಬುದ್ಧಿ ಕಲಿಸಿದೆ' ಎನ್ನುತ್ತಾರೆ ಎಪ್ಪತ್ತೈದರ ಹರೆಯದ ಕೃಷಿಕ ಸಿದ್ದಣ್ಣ.

ಕೃಷಿಕರ ಜೀವನಾಡಿಯಾಗಿದ್ದ ಕೆರೆಗಳು ತಾಲ್ಲೂಕಿನಲ್ಲಿ ಮಾಯವಾಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಕೆರೆಗಳು ಇಲ್ಲದಿರುವುದರಿಂದ ನೀರು ಭೂಮಿಯೊಳಗೆ ಸಂಗ್ರಹವಾಗುತ್ತಿಲ್ಲ. ಮಳೆ ಸಕಾಲಕ್ಕೆ ಆಗದಿರುವುದಕ್ಕೆ ಇದು ಒಂದು ಕಾರಣ ಇರಬಹುದು. ಪ್ರಕೃತಿ ಒಂದಕ್ಕೊಂದು ಕೊಂಡಿ ಬೆಸೆದುಕೊಂಡಿದೆ.

ತಾಲ್ಲೂಕಿನಲ್ಲಿ ಒಟ್ಟು 117 ಕೆರೆಗಳಿವೆ. 23 ಸಣ್ಣ ನೀರಾವರಿ ಇಲಾಖೆಗೆ, 72 ಜಿಲ್ಲಾ ಪಂಚಾಯಿತಿ, 22 ಜಲ ಸಂವರ್ಧನಾ ಯೋಜನೆಗೆ ಒಳಪಟ್ಟಿವೆ. ಈ ಹಿಂದೆ ಮೈದುಂಬಿ ಹರಿಯುತ್ತಿದ್ದ ಜಯಮಂಗಲಿ, ಗರುಡಾಚಲ ನದಿಗೆ ಹೊಂದಿಕೊಂಡಂತೆ 1988-89ರಲ್ಲಿ ಸಾಕಷ್ಟು ಕೆರೆ ನಿರ್ಮಾಣಗೊಂಡವು. ಆದರೆ ಅವೆಲ್ಲವೂ ಈಗ ಜೀವ ಕಳೆದುಕೊಂಡಿವೆ.

ತಾಲ್ಲೂಕು ಬಯಲು ಸೀಮೆ. ರೈತರು ಬೇಸಾಯಕ್ಕೆ ಮಳೆ ನೀರನ್ನೇ ಅವಲಂಬಿಸಿದ್ದಾರೆ. ಇದಕ್ಕಾಗಿಯೇ ಕೆರೆಗಳು ನಿರ್ಮಾಣವಾಗಿದ್ದವು. ಕಾಲ ಕಾಲಕ್ಕೆ ನೀರನ್ನು ಒಡಲಲ್ಲಿ ಹಿಡಿದಿಟ್ಟುಕೊಂಡು ರೈತರಿಗೆ ಬೆಳೆ ಬೆಳೆಯಲು ಜೀವ ಜಲ ಒದಗಿಸುತ್ತಿದ್ದವು. ಮಾವತ್ತೂರು, ತೀತಾ, ತುಂಬಾಡಿ ಗ್ರಾಮದ ಕೆರೆಗಳು ತಾಲ್ಲೂಕಿನ ದೊಡ್ಡ ಕೆರೆಗಳು. ಸಾಕಷ್ಟು ಜನ ಕೃಷಿಗಾಗಿ ಇವನ್ನು ಅವಲಂಬಿಸಿದ್ದಾರೆ. ಮರಳು ಗಣಿಗಾರಿಕೆಗೆ ಈ ಕೆರೆಗಳ ಬಹುತೇಕ ಪ್ರದೇಶವೂ ಬಲಿಯಾಗಿದೆ. ಇದರಿಂದ ನೀರಿನ ಸಂಗ್ರಹವೂ ಇಲ್ಲವಾಗಿದೆ. ತೀತಾ ಕೆರೆ ಹೊರತುಪಡಿಸಿದರೆ ಇನ್ನುಳಿದ ಯಾವುದೇ ಕೆರಗಳಲ್ಲೂ ದನ-ಕರು ಕುಡಿಯಲು ಕೂಡ ನೀರಿಲ್ಲ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಕೆರೆಗಳ ರಕ್ಷಣೆ ದೃಷ್ಟಿಯಿಂದ ಕೆರೆ ಸಂಘಗಳನ್ನು ಸ್ಥಾಪಿಸಲಾಯಿತು. ಆದರೆ ಅವುಗಳು ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲ. ಎಷ್ಟು ಬೇಗ ಸಂಘ ಎದ್ದವೋ ಅಷ್ಟೇ ಬೇಗ ಮುಳುಗಿದವು. ಪ್ರತಿ ಹಳ್ಳಿಗೆ ಒಂದೆರಡು ಕೆರೆಗಳು ಇದ್ದೇ ಇವೆ. ಆದರೆ ಅವುಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವಿಲ್ಲ. ಆ ಬಗ್ಗೆ ಆಸಕ್ತಿಯೂ ಇಂದಿನ ಜನರಲ್ಲಿ ಇಲ್ಲವಾಗಿದೆ. ಅದರಿಂದಲೇ ಕೆರೆಗಳು ಅಳಿವಿನ ಅಂಚಿನಲ್ಲಿವೆ.

ಅವಿಭಕ್ತ ಕುಟುಂಬಗಳು ಬೇರ್ಪಟ್ಟು ವ್ಯವಸಾಯಕ್ಕೆ ಜಮೀನುಗಳಿಲ್ಲದೆ ಕೆಲವೆಡೆ ಕೆರೆಗಳು ಬೇಸಾಯದ ಜಮೀನಾಗಿ ಮಾರ್ಪಟ್ಟಿರುವುದು ಕೂಡ ಕೆರೆಗಳ ವಿನಾಶಕ್ಕೆ ಕಾರಣವಾಗಿದೆ. ಕೆಲ ದೊಡ್ಡ ಕೆರೆಗಳನ್ನು ಒತ್ತುವರಿ ಮಾಡದಂತೆ ಸುತ್ತಲೂ ಕಂದಕ ತೆರೆದಿದ್ದರೂ ಲೆಕ್ಕಿಸದೆ ಒತ್ತುವರಿಯಾಗಿದೆ.

ತಾಲ್ಲೂಕಿನ ಬಿ.ಡಿ.ಪುರದ ಕೆರೆ ಸಂಪೂರ್ಣ ಬೇಸಾಯದ ಜಮೀನಾಗಿ ಮಾರ್ಪಟ್ಟು ಕೆರೆ ಇತ್ತು ಎಂಬುದಕ್ಕೆ ಏರಿ ಮಾತ್ರ ಸಾಕ್ಷಿಯಾಗಿ ನಿಂತಿದೆ. ಕೆಲ ದಿನಗಳಲ್ಲಿ ಅದೂ ಕೂಡ ಹಾಳಾಗಬಹುದು. ತೊಗರಿಘಟ್ಟ ಸೇರಿದಂತೆ ಇನ್ನಿತರೆ ಗ್ರಾಮದ ಕೆರೆಗಳು ಇದಕ್ಕೇನು ಹೊರತಾಗಿಲ್ಲ.

ಪಟ್ಟಣಕ್ಕೆ ನೀರು ಒದಗಿಸುವ ಅಗ್ರಹಾರ, ಜಂಪೇನಹಳ್ಳಿ ಕೆರೆಗಳು ಮರಳು ಗಣಿಗಾರಿಕೆಗೆ ನಲುಗಿವೆ. ಇದರೊಂದಿಗೆ ಕೆರೆಗೆ ಮಳೆ ನೀರು ಹರಿದು ಬರುವ ಕಾಲುವೆಗಳು ಮುಚ್ಚಿರುವುದು ನೀರಿನ ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ. ಪಟ್ಟಣದ ಗೋಕುಲ ಕೆರೆ ದಿನೆದಿನೇ ಮಾಯವಾಗುತ್ತಿದೆ. ಕೆರೆ ಸುತ್ತಲಿನ ಜಮೀನು ಒತ್ತುವರಿಯಾಗಿ ಮನೆಗಳು ಒಂದೊಂದಾಗಿ ತಲೆ ಎತ್ತುತ್ತಿವೆ. ಉಳಿದ ಪ್ರದೇಶ ಪಟ್ಟಣದ ಚರಂಡಿ ನೀರು, ತ್ಯಾಜ್ಯ ಸಂಗ್ರಹದ ಗುಂಡಿಗಳಂತಾಗಿವೆ. ಅಕ್ಕಿರಾಂಪುರದ ಕೆರೆ ಪ್ರದೇಶ ಇದ್ದೂ ಕಾಣದಂತಾಗಿದೆ. ಸೀಮೆಜಾಲಿ ಕೆರೆ ಆಕ್ರಮಿಸಿದೆ.

ಒತ್ತುವರಿ ತಡೆದು ರಕ್ಷಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಇತ್ತ ಗ್ರಾಮೀಣ ಭಾಗದ ಜನರಿಗೆ ಕೆರೆಗಳ ಮಹತ್ವ ಗೊತ್ತಿಲ್ಲದ ಕಾರಣ ಕೆರೆಗಳನ್ನು ನಶಿಸು ಹೋಗುವುದರ ಜತೆಗೆ ಗ್ರಾಮ ಸಂಸ್ಕೃತಿ ಬತ್ತಲಿದೆ ಎಂಬ ಅರಿವು ಇಲ್ಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.