ಮೈಸೂರು: ಸಮುದಾಯ ಆರೋಗ್ಯ ಕ್ಷೇತ್ರ ಬಲಪಡಿಸುವ ಸಂಬಂಧ ಸಂಶೋಧನೆ ಹಾಗೂ ಆಡಳಿತಾತ್ಮಕ ಸಹಕಾರಕ್ಕೆ ಜೆಎಸ್ಎಸ್ ವಿಶ್ವವಿದ್ಯಾನಿಲಯ ಮತ್ತು ಪಿಲಿಫ್ಸ್ ಕಂಪೆನಿ ನಡುವೆ ಗುರುವಾರ ಒಡಂಬಡಿಕೆ ಏರ್ಪಟ್ಟಿತು.

ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಪರವಾಗಿ ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೆನೂರು ಮತ್ತು ಪಿಲಿಫ್ಸ್ ಸಂಸ್ಥೆಯ ಪರವಾಗಿ ಡಾ.ವಿಶ್ವನಾಥನ್ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.

ಕೈಗಾರಿಕಾ ವಲಯಗಳಲ್ಲಿ ತಾಂತ್ರಿಕ ಅವಿಷ್ಕಾರಗಳು ನಡೆಯುತ್ತಿದ್ದು, ಇದನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗೆ ಈ ಒಪ್ಪಂದ ಸಹಕಾರಿಯಾಗಲಿದೆ. ಸಾಮಾನ್ಯ ಮನುಷ್ಯನಿಗೂ ಉನ್ನತ ದರ್ಜೆಯ ಆರೋಗ್ಯ ವ್ಯವಸ್ಥೆ ದೊರಕಿಸಿಕೊಡುವುದು ಸೇರಿದಂತೆ ಪ್ರಾಥಮಿಕ ಹಂತದಲ್ಲಿಯೇ ಕಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕಾರ್ಯಕ್ಕೆ ಈ ಒಪ್ಪಂದ ಅನುವಾಗಲಿದೆ.

ಕುಲಪತಿ ಸುರೇಶ್ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆಗಾಗಿ ನಗರ ಪ್ರದೇಶಕ್ಕೆ ಬರಲು ಆಗುವುದಿಲ್ಲ. ಕಡಿಮೆ ಖರ್ಚಿನ ಉಪಕರಣಗಳನ್ನು ಕಂಡು ಹಿಡಿದು ಆರಂಭಿಕ ಹಂತದಲ್ಲಿಯೇ ರೋಗಗಳನ್ನು ಪತ್ತೆ ಮಾಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಲವು ಕ್ಲಿನಿಕಲ್ ಸಂಶೋಧನೆ ಕೈಗೊಳ್ಳಲು ಮಾತುಕತೆ ನಡೆಸಲಾಗಿದೆ. ಇದರಿಂದ ಅನಗತ್ಯವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.