ಭಾನುವಾರ, ಏಪ್ರಿಲ್ 18, 2021
24 °C

ಜೈಲಲ್ಲಿರುವ ಸಚಿವರಿಂದ ಮೊಬೈಲ್ ಬಳಕೆ: ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ(ಪಿಟಿಐ):  ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ  ಮಾಜಿ ಸಚಿವ ಹಾಗೂ ಕೇರಳ  ಕಾಂಗ್ರೆಸ್(ಬಿ) ಮುಖಂಡ ಆರ್.ಬಾಲಕೃಷ್ಣನ್ ಪಿಳ್ಳೆ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂದು ಆರೋಪಿಸಿ  ವಿರೋಧ ಪಕ್ಷವಾದ ಎಲ್‌ಡಿಎಫ್ ಶಾಸಕರು  ಕೇರಳ ವಿಧಾನ ಸಭೆಯಿಂದ ಹೊರನಡೆದ ಘಟನೆ ಸೋಮವಾರ ನಡೆಯಿತು.ಪಿಳ್ಳೆ ಒಡೆತನದಲ್ಲಿರುವ ಶಾಲೆಯೊಂದರ ಶಿಕ್ಷಕರ ಮೇಲೆ ನಡೆದ  ಹಲ್ಲೆ ಕುರಿತಂತೆ ನಡೆಯುತ್ತಿರುವ  ತನಿಖೆಯು ಮಂದಗತಿಯಲ್ಲಿ ನಡೆಯುತ್ತಿದೆ ಹಾಗೂ ಹಲ್ಲೆ ನಡೆದು ಆರು ದಿನಗಳು ಕಳೆದರೂ ಒಬ್ಬರನ್ನು ಬಂಧಿಸಿಲ್ಲ ಎಂದು ಆರೋಪಿಸಿ ವಿ.ಎಸ್. ಅಚ್ಯುತಾನಂದನ್  ಅವರ ನೇತೃತ್ವದಲ್ಲಿ  ಎಲ್‌ಡಿಎಫ್ ಶಾಸಕರು ಸದನ ಕಲಾಪವನ್ನು ಬಹಿಷ್ಕರಿಸಿದರು. ಶಿಕ್ಷಕರ ಮೇಲಿನ ಹಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿಸಂಸ್ಥೆಯೊಂದರ ಜತೆ ಪಿಳ್ಳೆ ಅವರು ಮೊಬೈಲ್ ಮೂಲಕ ಮಾತನಾಡಿದರು.ಈ ಬಗ್ಗೆ ವಿವರಣೆ ನೀಡಿರುವ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಜೈಲಿನ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದು, ಮೊಬೈಲ್ ಬಳಸಿದ್ದು ನಿಜವಾದರೇ ಅದು ನಿಯಮದ ಉಲ್ಲಂಘನೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.