`ಯಾವುದೋ ಒಂದು ಕ್ಷಣದಲ್ಲಿ ಸಿಟ್ಟು ತಲೆಗೆ ಅಡರಿ ಅನಾಹುತ ನಡೆದು ಹೋಗಿರುತ್ತದೆ. ಹಾಗೆಂದ ಮಾತ್ರಕ್ಕೆ ಆತನನ್ನು ಎಲ್ಲಾ ಸೌಲಭ್ಯಗಳಿಂದ ವಂಚಿತನನ್ನಾಗಿಸಿ ಕತ್ತಲ ಕೋಣೆಯಲ್ಲಿ ಕೂರಿಸುವುದು ಎಷ್ಟು ಸರಿ? ಅವರಿಗೂ ಪ್ರತಿನಿತ್ಯದ ಆಗುಹೋಗುಗಳನ್ನು ತಿಳಿಸುವುದರಲ್ಲಿ ತಪ್ಪಿಲ್ಲವಲ್ಲ.

ಸಾಹಿತ್ಯ, ತತ್ವಶಾಸ್ತ್ರಗಳನ್ನು ಓದಿಕೊಂಡರೆ ಬಿಡುಗಡೆಯಾದ ಬಳಿಕ ಸುಂದರ ಜೀವನ ನಡೆಸಲು ನೆರವಾಗುವುದಲ್ಲ...~ ಎಂಬುದು ಗ್ರಂಥಾಲಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಿ.ಎನ್.ಸಿದ್ದಪ್ಪ ಅವರ ಮಾತು.

`ಇಲ್ಲಿ ಎಲ್ಲಾ ಭಾಷೆಯ ಕೈದಿಗಳೂ ಇರುವುದರಿಂದ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಲೆಯಾಳ, ತಮಿಳು ಮೊದಲಾದ ದಿನಪತ್ರಿಕೆ ಹಾಗೂ ನಿಯತಕಾಲಿಕ ತರಿಸುತ್ತೇವೆ. ಸಂಜೆ ವೇಳೆಗೆ 80 ಪತ್ರಿಕೆಗಳನ್ನು ಪ್ರತಿ ಕೊಠಡಿಗಳಿಗೆ ವಿತರಿಸುತ್ತೇವೆ. ಉನ್ನತ ಶಿಕ್ಷಣ ಶಾಖೆಯೂ ಇಲ್ಲಿ ಆರಂಭವಾದ ಬಳಿಕ ಶೈಕ್ಷಣಿಕ ಪುಸ್ತಕಗಳಿಗೂ ಬೇಡಿಕೆ ಹೆಚ್ಚಿದೆ. ಪರೀಕ್ಷೆ ಸಮಯದ್ಲ್ಲಲಿ ಆಯಾ ವಿಷಯಗಳ ಪುಸ್ತಕಗಳನ್ನೇ ಕೇಳುತ್ತಾರೆ.~

ಪುಸ್ತಕಗಳ ಸಂಖ್ಯೆ ಕಡಿಮೆಯಾದಲ್ಲಿ ಇಲ್ಲವೇ ಬಹಳಷ್ಟು ಮಂದಿ ಒಂದೇ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದಾಗೆಲ್ಲ ಅವುಗಳ ಪಟ್ಟಿ ತಯಾರಿಸಿ ಉಪನಿರ್ದೇಶಕರಿಗೆ ಸಲ್ಲಿಸುತ್ತೇವೆ.

ಗ್ರಂಥಾಲಯ ಇಲಾಖೆ ನಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದು, ತಿಂಗಳೊಳಗೆ ಆ ಪುಸ್ತಕಗಳನ್ನು ಒದಗಿಸುತ್ತಿದೆ.

ಏಕಾಂತವಾಗಿ ಕಾಲಕಳೆಯಲು ಬಯಸುವ ನೂರಾರು ಕೈದಿಗಳಿಗೆ ಇದು ಕಂಪೆನಿ ನೀಡುತ್ತಿದೆ ಎನ್ನುತ್ತಾರೆ ಗ್ರಂಥಾಲಯದ ನೋಂದಣಿ ಜವಾಬ್ದಾರಿ ಹೊತ್ತ ಕೈದಿ ನರಸಿಂಹ ರೆಡ್ಡಿ. ಅವರು ಇತ್ತೀಚೆಗಷ್ಟೇ ಪತ್ರಿಕೋದ್ಯಮದಲ್ಲಿ ಎಂ.ಎ. ಮುಗಿಸಿ ಇದೀಗ ಅರ್ಥಶಾಸ್ತ್ರದ ಸ್ನಾತಕೋತ್ತರ ತರಗತಿಯ ಮೊದಲ ವರ್ಷದ ಪರೀಕ್ಷೆ ತಯಾರಿಯಲ್ಲಿದ್ದಾರೆ.

ಸಾಹಿತ್ಯ, ತತ್ವಶಾಸ್ತ್ರ, ಗಾಂಧಿ, ನೆಹರು ಪರಮಹಂಸ ಮೊದಲಾದವರ ಜೀವನಚರಿತ್ರೆಯ ಪುಸ್ತಕಗಳನ್ನೇ ಕೇಳಿ ಬರುತ್ತಾರೆ. ಮನ ಪರಿವರ್ತನೆಗೊಳ್ಳುವಂತಹ ಪುಸ್ತಕಗಳನ್ನೇ ನಾವು ಹೆಚ್ಚಾಗಿ ತರಿಸುವುದುಂಟು. ಪ್ರತಿ ಎರಡು ತಿಂಗಳಿಗೊಮ್ಮೆ ಕೈದಿಗಳು ಬೇಡಿಕೆ ಪುಸ್ತಕದ ಪಟ್ಟಿ ಸಲ್ಲಿಸುತ್ತಾರೆ.

ಲಭ್ಯತೆ ಆಧಾರದ ಮೇಲೆ ನಾವು ಪುಸ್ತಕ ಒದಗಿಸುತ್ತಿದ್ದೇವೆ. ಕಳೆದ ಆಗಸ್ಟ್ನಲ್ಲಿ ಗ್ರಂಥಾಲಯ ಹೊಸ ಕೊಠಡಿಗೆ ವರ್ಗಾವಣೆಗೊಂಡ ಬಳಿಕವಂತೂ ಪುಸ್ತಕಗಳ ನಿರ್ವಹಣೆ ಮತ್ತಷ್ಟು ಸುಲಭವಾಗಿದೆ ಎನ್ನುತ್ತಾರೆ ದಕ್ಷಿಣ ವಲಯದ ಉಪನಿರ್ದೇಶಕಿ ಪುಷ್ಪಲತಾ.

ಪರಪ್ಪನ ಅಗ್ರಹಾರದಲ್ಲಿರುವ ಗ್ರಂಥಾಲಯದಲ್ಲಿ ಒಟ್ಟು 38,000 ಪುಸ್ತಕಗಳಿವೆ. 125 ದಿನಪತ್ರಿಕೆಗಳು, 80 ನಿಯತಕಾಲಿಕಗಳಿವೆ. ಪ್ರತಿನಿತ್ಯ ಸಂಜೆ 5 ಗಂಟೆವರೆಗೆ ಗ್ರಂಥಾಲಯ ಕೈದಿಗಳಿಂದ ತುಂಬಿರುತ್ತದೆ.

`ಅವರು ಬೇಡಿಕೆ ಸಲ್ಲಿಸುವ ಪಟ್ಟಿಯನ್ನೊಮ್ಮೆ ಗಮನಿಸಿದರೆ ನಿಮಗೆ ಆಚ್ಚರಿಯಾಗಬಹುದು. ಹಾಳು ಹರಟೆ, ಪೋಲಿ ಕತೆ, ಕಾದಂಬರಿಗಳ ಹೆಸರುಗಳು ಅಲ್ಲಿ ಇರುವುದಿಲ್ಲ. ಯಾವುದೇ ಪತ್ರಿಕೆಯಲ್ಲಿ ಬಂದ ವಿಮರ್ಶೆಯನ್ನು ನೆನಪಿನಲ್ಲಿಟ್ಟುಕೊಂಡು ಇಲ್ಲವೇ ಅಧ್ಯಯನಕ್ಕೆ ನೆರವಾಗುವ ಪುಸ್ತಕಗಳನ್ನೇ ಕೇಳಿರುತ್ತಾರೆ.

ಅದರಲ್ಲೂ ಹೆಚ್ಚಿನವು ತತ್ವಶಾಸ್ತ್ರ, ಮನಶ್ಶಾಸ್ತ್ರ ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದವು. ಮತ್ತೆ ಕೆಲವರು ಭಜನೆ ಇಲ್ಲವೇ ಹಾಡುಗಳ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದ್ದೂ ಉಂಟು ಎನ್ನುತ್ತಾರೆ ಮೇಲ್ವಿಚಾರಕ ಸಿದ್ದಪ್ಪ.

ವೈಶಿಷ್ಟ್ಯವೆಂದರೆ ಈ ಗ್ರಂಥಾಲಯಕ್ಕೆ ಸರ್ಕಾರ ನೇಮಿಸಿದ ಏಕೈಕ ಸಿಬ್ಬಂದಿ ಅವರು. ಇನ್ನುಳಿದಂತೆ ದಾಸ್ತಾನು ನಿರ್ವಹಣೆ, ಸ್ವಚ್ಛತೆ, ದಿನಪತ್ರಿಕೆಗಳ ಸಂಗ್ರಹಣೆ, ಭೇಟಿ ನೀಡುವವರ ನೋಂದಣಿ, ಪುಸ್ತಕ ಕೊಂಡವರ ಹೆಸರುಗಳ ದಾಖಲು ಎಲ್ಲವೂ ಕೈದಿಗಳಿಂದಲೇ ನಡೆಯುತ್ತದೆ! ಇದಕ್ಕಾಗಿ ಅವರು ಪ್ರತಿನಿತ್ಯ 40 ರೂಪಾಯಿ ಸಂಬಳವನ್ನೂ ಪಡೆಯುತ್ತಾರೆ.

ಪುಸ್ತಕದಿ ದೊರೆತರಿವು...
ನಮ್ಮ ಗ್ರಂಥಾಲಯಗಳಲ್ಲಿ ಕುವೆಂಪು, ವಿವೇಕಾನಂದ, ಪರಮಹಂಸರು ಜೀವಂತವಾಗಿದ್ದಾರೆ, ಪ್ರತಿನಿತ್ಯ ಬುದ್ಧಿಮಾತು ಹೇಳುವ ಮೂಲಕ ಕೈದಿಗಳ ಮನಃ ಪರಿವರ್ತನೆಯಾಗಲು ಇಂದಿಗೂ ಶ್ರಮಿಸುತ್ತಿದ್ದಾರೆ.

ಅದರ ಪರಿಣಾಮವೇ ಇಂದು ಕೈದಿಗಳ ನಡವಳಿಕೆಯಲ್ಲೂ ಕಾಣುತ್ತಿದೆ. ಗ್ರಂಥಾಲಯಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯೂ ಅತ್ಯುತ್ತಮವಾಗಿದೆ. ನಾನೂ ಇಲ್ಲಿಂದ ಪುಸ್ತಕಗಳನ್ನು ಓದಿ ಸಾಕಷ್ಟು ಅಂಶಗಳನ್ನು ಕಲಿತುಕೊಂಡಿದ್ದೇನೆ ಎನ್ನುತ್ತಾರೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ.

`ಸರ್ಕಾರ ಹಾಗೂ ರಾಜ್ಯಪಾಲರ ತಿಕ್ಕಾಟದಿಂದ ಕಳೆದ ಆರು ವರ್ಷಗಳಿಂದ ನಮಗೆ ಬಿಡುಗಡೆಯ ಭಾಗ್ಯ ಲಭಿಸಿಲ್ಲ. ಇಲ್ಲಿ ಸಿಗುವ ಬಿಡುವಿನ ಸಮಯವನ್ನು ಕಳೆಯಲು ಗ್ರಂಥಾಲಯ ಉತ್ತಮ ಸಾಥ್ ನೀಡುತ್ತದೆ. ಉನ್ನತ ಶಿಕ್ಷಣದ ಕೇಂದ್ರ ಆರಂಭವಾದ ಬಳಿಕವಂತೂ ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವಾಗುತ್ತಿದೆ~ ಅಂತಾರೆ ಕೈದಿ ಶಿವಶಂಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.