ಜೋಕುಮಾರ: ಜನರ ಬವಣೆಯ ವರದಿಗಾರ

ಸೋಮವಾರ, ಮೇ 20, 2019
32 °C

ಜೋಕುಮಾರ: ಜನರ ಬವಣೆಯ ವರದಿಗಾರ

Published:
Updated:

ಅಳ್ನಾವರ: ಈ ಭಾಗದಲ್ಲಿ ಮಳೆ ಬೆಳೆ ಸಂಮೃದ್ಧಿಗಾಗಿ, ಜನರ ಬದುಕು ಸುಧಾರಿಸಲಿ ಎಂಬ ಉದ್ದೇಶದಿಂದ ಮಹಿಳೆಯರು ಜೋಕುಮಾರನನ್ನು ಹೊತ್ತು ಮನೆ ಮನೆಗೆ ತೆರಳಿ ಪೂಜೆ ನಡೆಸಿದರು.ಮಣ್ಣಿನಿಂದ ತಯಾರಿಸಿದ ಸುಂದರವಾದ ಮೂರ್ತಿಯನ್ನು ಬುಟ್ಟಿಯಲ್ಲಿ ಕೂಡಿಸಿ, ಸುತ್ತಲೂ ಬೇವಿನ ಸೊಪ್ಪು ಹಾಕಿ ಮನೆ ಮನೆಗೆ ಹೋಗುವ ಮಹಿಳೆಯರು, `ಜೋಕುಮಾರ ಬಂದಾನ ಜೋಕುಮಾರ... ನನ್ನ ಕುವರ~ ಎಂಬ ಹಾಡನ್ನು ಹಾಡುತ್ತಾ ಪೂಜೆ ಸಲ್ಲಿಸಿ, ಮನೆಮನೆಗಳಲ್ಲಿ ದವಸ ಧಾನ್ಯ ಪಡೆಯಲಾಯಿತು. ಬೆಣ್ಣೆ ಪ್ರಿಯನಾದ ಜೋಕುಮಾರ ಬಾಯಿಗೆ ಬೆಣ್ಣೆ ಸವರಿ ಹರಕೆ ಸಲ್ಲಿಸಲಾಯಿತು.ಜೋಕುಮಾರನ ಕೈಯಲ್ಲಿ ಇರುವ ಖಡ್ಗ, ಆತನು ಶೂರನು ಮತ್ತು ಪರಾಕ್ರಮಿಯೂ ಎಂದು ಸೂಚಿಸುತ್ತದೆ. ಜೋಕುಮಾರನ ಪೂಜೆ ಮಾಡಿದರೆ ಬಂಜೆತನ ದೂರಾಗುತ್ತದೆ ಎಂಬ ಪ್ರತೀತಿಯೂ ಇದೆ.ಪೂಜೆ ಮಾಡಿದ ನಂತರ ಚರಗಾ ಎಂಬ ಪ್ರಸಾದವನ್ನು ವಿತರಿಸಲಾಯಿತು. ಈ ಚರಗವನ್ನು ರೈತರು ತಮ್ಮ ಹೊಲದಲ್ಲಿ ಚೆಲ್ಲಿದರೆ ಬೆಳೆ ಹುಲಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ರೈತಾಪಿ ವರ್ಗದ್ದಾಗಿದೆ. ರೈತನ ಬಾಳು ಉಜ್ವಲವಾಗಲು ನಮ್ಮ ಸಂಸ್ಕೃತಿಯಲ್ಲಿ ನಡೆದು ಬಂದ ಪೂಜೆ ಸಂಪ್ರದಾಯಗಳಲ್ಲಿ ಜೋಕುಮಾರನ ಪೂಜೆಯೂ ಒಂದಾಗಿದ್ದು, ವಿಶಿಷ್ಟ ಆಚರಣೆಯಾಗಿದೆ.ಪ್ರತಿ ವರ್ಷ ಗಣೇಶ ಹಬ್ಬದ ನಡುವೆ ಜೋಕುಮಾರನ ಪೂಜೆ ನಡೆಯುವುದು ವಾಡಿಕೆ. ಭೂಲೋಕದಲ್ಲಿ ಹನ್ನೂಂದು ದಿನ ಮನೆಯಲ್ಲಿ ಪೂಜೆ ಮಾಡಿಸಿಕೊಂಡು, ಕಡುಬು-ಮೋದಕ ಉಂಡ ಗಣೇಶ, ವಿಸರ್ಜನೆ ನಂತರ ಕೈಲಾಸಕ್ಕೆ  ತೆರಳಿ, ಭೂಲೋಕದಲ್ಲಿ ಜನರು ಚೆನ್ನಾಗಿದ್ದಾರೆ ಎಂದು ಶಿವನಲ್ಲಿ ವರದಿ ಒಪ್ಪಿಸುತ್ತಾನೆ; ಆದರೆ ಬುಟ್ಟಿಯಲ್ಲಿದ್ದುಕೊಂಡು ಬಿಸಿಲಿನಲ್ಲಿ ಮನೆಮನೆಗೆ ಹೋಗಿ ಪೂಜೆಗೊಂಡ ಜೋಕುಮಾರ ವಿಸರ್ಜನೆ ನಂತರ, ಶಿವನಿಗೆ ಜನರ ಬವಣೆಯನ್ನು ತಿಳಿಸಿ ಮಳೆ ನೀಡಲು ಕೋರುತ್ತಾನೆ. ಜನರ ಕಷ್ಟ ಸುಖವನ್ನು ಶಿವನ ಬಳಿ ಹೇಳುತ್ತಾನೆ; ಜನರ ಕಷ್ಟ ನೀಗುತ್ತಾನೆ ಎಂಬ ನಂಬಿಕೆಯಿಂದ ಜೋಕುಮಾರನಿಗೆ ಈ  ವಿಶೇಷ ಪೂಜೆ ನಡೆಯುತ್ತದೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry