ಬೆಂಗಳೂರು: ಕನ್ನಡದ ಹಿರಿಯ ಕವಿ ಚಂದ್ರಶೇಖರ ಕಂಬಾರರಿಗೀಗ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮ. ಹದಿಮೂರು ವರ್ಷಗಳ ಅಂತರದ ನಂತರ ಕಂಬಾರರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ದೊರೆಯುವುದರೊಂದಿಗೆ, ಕನ್ನಡದ `ಜ್ಞಾನಪೀಠ ಸಪ್ತರ್ಷಿ ಮಂಡಲ~ದ ಪುನರ್ರಚನೆಯಾಗಿದ್ದು, ಆ ಸಂಖ್ಯೆ ಎಂಟಕ್ಕೇರಿದೆ. ಕನ್ನಡದ ಜ್ಞಾನಪೀಠಿಗಳದೀಗ `ಅಷ್ಟ ದಿಕ್ಪಾಲಕ~ ಪಡೆ.

ಏಳು ಲಕ್ಷ ರೂಪಾಯಿ ನಗದು, ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹಾಗೂ ಬಿನ್ನವತ್ತಳೆ ಹೊಂದಿರುವ ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಅತ್ಯುನ್ನತ ಗೌರವ. ಈ ಮೇರುಮನ್ನಣೆಗೆ ಕಂಬಾರರು ಪಾತ್ರ. ಅನೇಕ ವರ್ಷಗಳಿಂದ ಜ್ಞಾನಪೀಠ ಕಂಬಾರರತ್ತ ಮುಖ ಮಾಡಿಯೇ ಇತ್ತಾದರೂ, ಮುಹೂರ್ತ ಕೂಡಿಬಂದಿರುವುದು ಈಗ. ಜ್ಞಾನಪೀಠದ ಪ್ರಭೆಯಲ್ಲಿ ಮಿನುಗುತ್ತಿರುವ ಕಂಬಾರರ ಬಗ್ಗೆ ಮಾತನಾಡುವಾಗ ಅವರ ದಶಮುಖಗಳು ಕಣ್ಮುಂದೆ ಸುಳಿಯುತ್ತವೆ. ನಾಟಕಕಾರ, ಕಾದಂಬರಿಕಾರ, ಕನ್ನಡ ವಿಶ್ವವಿದ್ಯಾಲಯದ ಬುನಾದಿ ಗಟ್ಟಿಗೊಳಿಸಿದ ಆಡಳಿತಗಾರ, ಸಂಶೋಧಕ- ಹೀಗೆ ಕಂಬಾರರದು ಬಹುರೂಪ. ಆದರೆ, ಇವೆಲ್ಲವುಗಳ ಮುನ್ನೆಲೆಯಲ್ಲಿ ನಿಲ್ಲುವುದು ಅವರ ಕಾವ್ಯಪ್ರೀತಿ. ಕಾವ್ಯವೆನ್ನುವುದು ಅವರ ಪಾಲಿಗೆ ಆತ್ಮದ ಕಸುಬುದಾರಿಕೆ.

`ಕವಿ ಮತ್ತು ಕವಿತೆ ಮುಖಾಮುಖಿಯಾಗಬೇಕು. ಕಾವ್ಯ ರಚನೆ ಅಂದ್ರೆ ಅದು ಏಕಾಂತದ ಸಂವಾದ, ಗುದ್ದಾಟ. ಇದರ ಅರಿವು ಕವಿಗೆ ಇರಬೇಕು. ನನ್ನ ಎಲ್ಲವನ್ನೂ ಹಿಂಡಿ ಹೊರಬಂದಿದೆ ಎನ್ನಿಸಬೇಕು ಕವಿತೆ. ಅದು, ಆತ್ಮ ಹಿಂಡಿ ಬರಬೇಕು. ನೀರು ಕಡೆದರೆ ಬೆಣ್ಣೆ ಬರುತ್ತಲ್ಲ, ಹಾಗೆ. ಅದು ಹುಡುಗಿಯೊಂದಿಗಿನ ಪ್ರೀತಿಯಂತೆ ತೀರಾ ಖಾಸಗಿಯಾದುದು. ದೇವರ ಮುಂದೆಯೂ ಹೇಳಿಕೊಳ್ಳಲಾಗದ ಪ್ರೀತಿಯಂತಹದ್ದು~. ಇದು ಕಾವ್ಯದ ಬಗ್ಗೆ ಕಂಬಾರರ ನಿಲುವು.

ಎರಡು ವರ್ಷಗಳ ಹಿಂದಿನ ಮಾತು. ಕಾವ್ಯದ ಬಗ್ಗೆ, ಹೊಸಪೀಳಿಗೆಯ ಕವಿಗಳ ಬಗ್ಗೆ ಮಾತನಾಡುತ್ತಿದ್ದ ಚಂದ್ರಶೇಖರ ಕಂಬಾರರು ಒಮ್ಮೆಗೇ ಭಾವುಕರಾದರು. `ಹೇಳತೇನ ಕೇಳಾ~ ಎಂದು ಮಾತು ಶುರುವಿಟ್ಟುಕೊಂಡರು. `ಕವಿತೆ ಒಳಗಿನಿಂದ ಬರಬೇಕು, ನಾಭಿಯಿಂದ ಬರಬೇಕು. ಈಗ ಶಬ್ದಗಳಿಂದ ಬರ್ತಿದೆ. ಪೂರ್ಣವಿರಾಮ ಕೊಡಲಿಕ್ಕೂ ನಿಮಗ (ಯುವಕವಿಗಳಿಗೆ) ವ್ಯವಧಾನವಿಲ್ಲ. ಹೃದಯವನ್ನು ನಲುಗಿಸುವಂತಹ, ಸ್ಪರ್ಶಿಸುವಂತಹ, ಕನಸು-ನನಸು-ಎಚ್ಚರಗಳ ಕುರಿತು ಸಮಗ್ರವಾಗಿ ಮಾತನಾಡುವಂಥ ಕಾವ್ಯ ಬರಬೇಕು. ಪಂಚೇಂದ್ರಿಯಗಳಿಗೆ ಕಾವ್ಯದ ಸ್ಪಂದನ ಸಾಧ್ಯವಾಗಬೇಕು~ ಎಂದರು. `ಕಾವ್ಯ ಅನ್ನೋದು ಒಂದು ಕಸುಬು. ಅದು, ಆತ್ಮವನ್ನು ತೊಡಗಿಸುವ ಕಸುಬು. ಅದಕ್ಕೆ ದ್ರೋಹ ಬಗೆಯಬಾರದು~ ಎಂದರು.

ಅವ್ವನಿಂದ ಕಾವ್ಯದ ಗುಂಗು

ಬೆಳಗಾವಿ ಜಿಲ್ಲೆಯ ಘೋಡಗೇರಿ ಕಂಬಾರರ ಹುಟ್ಟೂರು (ಜ: ಜನವರಿ 2, 1937). ಕಂಬಾರರ ಮೊದಲ ಕಾವ್ಯದ ಗುರು ಅವರ ತಾಯಿ. ಆಕೆ ಸೊಗಸಾಗಿ ತ್ರಿಪದಿ ಹೇಳುತ್ತಿದ್ದರು. ದೊಡ್ಡಮ್ಮನಲ್ಲಿ ಎಲ್ಲ ಪ್ರಸಂಗಕ್ಕೂ ಒಂದು ಕಥೆ ಇರುತ್ತಿತ್ತು. ಜನಪದ ಸಾಹಿತ್ಯ, ಬಯಲಾಟ ಕಂಬಾರರ ಬಾಲ್ಯದ ಒಂದು ಭಾಗವೇ ಆಗಿತ್ತು. ಇಷ್ಟು ಮಾತ್ರವಲ್ಲ, ಅವರ ಊರು ಕೊಲೆಗಳಂಥ ಪ್ರಸಂಗಗಳಿಗೆ ಆಗಾಗ ಸಾಕ್ಷಿಯಾಗುತ್ತಿತ್ತು. ಹೆಣಗಳು ನದಿಯಲ್ಲಿ ತೇಲುತ್ತಿದ್ದವು.
ಎಲ್ಲಿಂದಲೋ ಬಂದ ಹೆಣ ನದಿಯಲ್ಲಿ ತೇಲುತ್ತಾ ಬಂದು, ಕಂಬಾರರ ಊರಿನಲ್ಲಿ ನಿಂತುಬಿಡುತ್ತಿತ್ತು. ಆ ಹೊತ್ತಿನಲ್ಲಿ ಹೆಣದ ಬಗ್ಗೆ ಕಥೆಗಳು ಹಬ್ಬುತ್ತಿದ್ದವು. ಇಂಥ ಪರಿಸರ ಕಂಬಾರರ ಬಾಲ್ಯದಲ್ಲಿ ಸಾಕಷ್ಟು ಕಥೆಗಳನ್ನು ಬಿತ್ತಿರಬೇಕು.

ಕಂಬಾರರು ಎಂಟನೇ ತರಗತಿಯಲ್ಲಿದ್ದಾಗ ಕೃಷ್ಣಮೂರ್ತಿ ಪುರಾಣಿಕ ಎನ್ನುವ ಮಾಸ್ತರರ ಸಂಪರ್ಕಕ್ಕೆ ಬಂದರು. ಆ ಮಾಸ್ತರರು ಮಕ್ಕಳಿಂದ ಪದ್ಯ ಬರೆಸಿ ಓದಿಸುತ್ತಿದ್ದರು. ಪುರಾಣಿಕರಿಗೆ ಬಾಲಕ ಕಂಬಾರರ ಮೇಲೆ ವಿಪರೀತ ಅಕ್ಕರೆ. ತನ್ನ ನೆಚ್ಚಿನ ವಿದ್ಯಾರ್ಥಿ ಶಾಲೆ ಬಿಡಬೇಕಾದ ಸಂದರ್ಭ ಬಂದಾಗ, ಅವರು ಮಧ್ಯ ಪ್ರವೇಶಿಸಿದರು. ವಿದ್ಯಾರ್ಥಿ ವೇತನ ಕೊಡಿಸಿ, ಸಾವಳಗಿ ಮಠದಲ್ಲಿ ಓದಿಸಿದರು.

ಕಂಬಾರರಿಗೆ ಸಾಹಿತ್ಯ ಎನ್ನುವುದು ಯಾವತ್ತೂ ಖಾಸಗಿ ವ್ಯಸನವಾಗಿಯಷ್ಟೇ ಉಳಿಯಲಿಲ್ಲ. ಅವರ ಪಾಲಿಗೆ ಬರವಣಿಗೆ ಎನ್ನುವುದು ತಮ್ಮ ವಿಚಾರಗಳನ್ನು, ಅನುಭವ - ನೆನಪುಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಶಿವಾಪುರ ಎನ್ನುವ ರೂಪಕವನ್ನು ಕಟ್ಟಿಕೊಂಡ ಅವರು, ಕನಸುಗಳನ್ನು, ನೆನಪುಗಳನ್ನು ಎಡೆಬಿಡದೆ ಬರೆದರು. `ಹುಣ್ಣಿಮೆ ಬೆಳದಿಂಗಳ ಇರುಳು. ಮುಗಿಲಿನಲ್ಲಿ ಪೂರ್ಣಚಂದ್ರ. ತರುಣನೊಬ್ಬ ಚಂದ್ರನಿಗೆ ಬಾಣ ಹೂಡಿದ್ದಾನೆ. ಇತ್ತ ಅವನ ಕಾಲಬುಡದಲ್ಲಿ ಮಿಡಿನಾಗರವೊಂದು ಹೆಡೆಯೆತ್ತಿದೆ. ಭವಿಷ್ಯದ ಒಂದೇ ಕ್ಷಣ- ಬಾಣಕ್ಕೆ ಚಂದ್ರ ಮಿಕವೋ ಅಥವಾ ಹಾವಿಗೆ ತರುಣನ ಬಲಿಯೋ?~- ಇಂಥ ರೂಪಕಗಳ ಮೂಲಕ ಓದುಗರನ್ನು ಬೆಚ್ಚಿಬೀಳಿಸಿದರು.

ಕನ್ನಡದ ಪ್ರಾದೇಶಿಕ, ಜಾನಪದ, ಪುರಾಣದ ಸೊಗಡನ್ನೆಲ್ಲ ಸೂರೆ ಮಾಡುವ ಉಮೇದಿನಲ್ಲಿ ಬರೆದರು. ಗಂಭೀರ ಕಾವ್ಯದ ಜೊತೆಗೆ ಜನರು ಹಾಡಿಕೊಳ್ಳುವಂಥ ಗೀತೆಗಳನ್ನು ಬರೆದರು, ಆಡುವಂಥ ನಾಟಕಗಳನ್ನೂ ಬರೆದರು. ತಮ್ಮ ಹಾಡುಗಳಿಗೆ ತಾವೇ ಸ್ವತಃ ಮಟ್ಟು ಹಾಕಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕನ್ನಡದ ಅಂಚುಗಳನ್ನು ವಿಸ್ತರಿಸುವ ಹೊಸಕನಸುಗಳನ್ನು ಬಿತ್ತಿದರು.

ಪ್ರಖರ ರಾಜಕೀಯ ಪ್ರಜ್ಞೆ ಹೊಂದಿದ ಕನ್ನಡದ ಬೆರಳೆಣಿಕೆ ಲೇಖಕರಲ್ಲಿ ಕಂಬಾರರೂ ಒಬ್ಬರು. ಕಮ್ಯುನಿಸಂ ಬಗ್ಗೆ ಶ್ರದ್ಧೆ ಹೊಂದಿದ್ದ ಅವರು, ನಂತರದಲ್ಲಿ ಕಮ್ಯುನಿಸಂ ಬಗ್ಗೆ ಭ್ರಮನಿರಸನ ಹೊಂದಿದರು. ಆ ಸಂದರ್ಭದಲ್ಲಿ ಬರೆದ `ಮರೆತೇನೆಂದರ ಮರೆಯಲಿ ಹ್ಯಾಂಗ~ ಎನ್ನುವ ಮಾವುತ್ಸೇ ತುಂಗನ ಕುರಿತ ಕವಿತೆ ಕನ್ನಡದ ಅತ್ಯುತ್ತಮ ರಾಜಕೀಯ ಕಥನಗಳಲ್ಲೊಂದು. ಶಾಸಕರಾಗಿ ವಿಧಾನ ಪರಿಷತ್ನಲ್ಲಿ ನಾಡುನುಡಿಯ ಪರವಾಗಿ ಸೊಲ್ಲೆತ್ತಿರುವ ಅವರು, `ಈಗಿನ ಸಂದರ್ಭದಲ್ಲಿ ಎಲ್ಲಿ ನಿಲ್ಲುತ್ತೇವೆ, ಯಾವುದರ ಪರವಾಗಿ, ವಿರೋಧವಾಗಿ, ಯಾವ ತಾತ್ವಿಕತೆಯ ಪರ, ವಿರೋಧವಾಗಿ ನಿಲ್ಲುತ್ತೇವೆ ಎಂಬ ನಿಲುವನ್ನು ತಳೆಯಬೇಕು. ಅದರ ಅನಿವಾರ್ಯತೆ ತುಂಬಾ ಇದೆ~ ಎನ್ನುವ ಅಡಿಗೆರೆ ಎಳೆದಂತಹ ನಿಲುವು ಹೊಂದಿರುವವರು.

ಈವರೆಗಿನ ಹೇಳತೇನ ಕೇಳ...

ಕಾವ್ಯ: ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಚಕೋರಿ, ಆಯ್ದ ಕವನಗಳು, ಬೆಳ್ಳಿಮೀನು, ಈವರೆಗಿನ ಹೇಳತೇನ ಕೇಳ (ಸಮಗ್ರ-1994), ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ?
ನಾಟಕ: ಬೆಂಬತ್ತಿದ ಕಣ್ಣು, ನಾರ್ಸಿಸಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಳೇಶ, ಸಂಗ್ಯಾಬಾಳ್ಯಾ ಅನಬೇಕೋ ನಾಡೊಳಗ, ಕಿಟ್ಟಿಯ ಕಥೆ, ಖರೋಖರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಸಿರಿ ಸಂಪಿಗೆ, ಹುಲಿಯ ನೆರಳು, ಬೆಪ್ಪು ತಕ್ಕಡಿ ಬೋಳೇಶಂಕರ, ಪುಷ್ಪರಾಶಿ, ತುಕ್ರನ ಕನಸು, ಮಹಾಮಾಯಿ, ಶಿವರಾತ್ರಿ.
ಕಾದಂಬರಿ: ಅಣ್ಣತಂಗಿ, ಕರಿಮಾಯಿ, ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ.

ಸಂಶೋಧನೆ: ಸಂಗ್ಯಾ ಬಾಳ್ಯಾ, ಬಣ್ಣೀಸಿ ಹಾಡವ್ವ ನನ್ನ ಬಳಗ, ಬಯಲಾಟ, ಮಾತಾಡೋ ಲಿಂಗವೇ, ನಮ್ಮ ಜಾನಪದ, ಬಂದಿದೆ ನನ್ನ ಜಡೆಯೊಳಗೆ, ಕನ್ನಡ ನಾಟಕ ಸಂಪುಟ, ಕನ್ನಡ ಜಾನಪದ ವಿಶ್ವಕೋಶ, ಲಕ್ಷಾಪತಿ ರಾಜನ ಕತೆ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನೆಲದ ಮರೆಯ ನಿದಾನ, ಬೃಹದ್ದೇಶಿ ಚಿಂತನೆ.

ಪಿಎಚ್.ಡಿ ಮಹಾಪ್ರಬಂಧ: ಉತ್ತರ ಕರ್ನಾಟಕದ ಜಾನಪದ ರಂಗಭೂಮಿ.

ಪ್ರಶಸ್ತಿ-ಪುರಸ್ಕಾರ: ರಾಜ್ಯ ನಾಟಕ ಅಕಾಡೆಮಿ ಬಹುಮಾನಗಳು, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು, ಕೇರಳದ ಆಶಾನ್ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ.

ಕವಿತೆ, ನಾಟಕಗಳ ಮೂಲಕ ಸಹೃದಯರ ನಡುವೆ ಪರಿಚಿತರಾಗಿದ್ದರೂ ಕಾದಂಬರಿ ಪ್ರಕಾರದಲ್ಲೂ ಕಂಬಾರರ ಪ್ರತಿಭಾವಿಲಾಸ ಮೆರೆದಿದೆ. ಜಾಗತೀಕರಣಕ್ಕೆ ಉತ್ತರವನ್ನು ಹುಡುಕುತ್ತಾ ಅವರು ರೂಪಿಸಿದ `ಶಿಖರ ಸೂರ್ಯ~ (ಗದ್ಯರೂಪಿ ಮಹಾಕಾವ್ಯ) ಕನ್ನಡದ ಮಹತ್ವಾಕಾಂಕ್ಷೆಯ ಕಾದಂಬರಿಗಳಲ್ಲೊಂದು. ಅವರ ಇತ್ತೀಚಿನ `ಶಿವರಾತ್ರಿ~ ನಾಟಕ ಬಸವ-ಬಿಜ್ಜಳರ ಹನ್ನೆರಡನೇ ಶತಮಾನವನ್ನು ಆಧುನಿಕ ಪ್ರಭೆಯಲ್ಲಿ ಮರಳಿ ವಿಶ್ಲೇಷಿಸುವ ಪ್ರಯತ್ನ.

ಕಂಬಾರರ ಬಹುಮುಖ
ಕಂಬಾರರನ್ನು ಚುಂಬಕದಂತೆ ಸೆಳೆದ ಮತ್ತೊಂದು ಸೃಜನಶೀಲ ಕ್ಷೇತ್ರ ಸಿನಿಮಾ. ದೃಶ್ಯಮಾಧ್ಯಮಕ್ಕಿರುವ ಜನರನ್ನು ನಂಬಿಸುವ ಶಕ್ತಿ ಹಾಗೂ ಸಿನಿಮಾಕ್ಷೇತ್ರ ಬಯಸುವ ವೃತ್ತಿಪರತೆ ಅವರನ್ನು ಆಕರ್ಷಿಸಿದೆ. `ಕಾಡುಕುದುರೆ~, `ಕರಿಮಾಯಿ~, `ಸಂಗೀತಾ~ ಅವರ ಸಿನಿಮಾ ಪ್ರೀತಿಯ ಫಲ. ಇವತ್ತಿಗೂ ಕಂಬಾರರಿಗೆ ಸಿನಿಮಾ ಬಗ್ಗೆ ವಿಪರೀತ ಒಲವು. ಅವಕಾಶ ಸಿಕ್ಕಲ್ಲಿ, ಆಧುನಿಕ ಪರಿಕರಗಳನ್ನು ಬಳಸಿಕೊಂಡು `ಕಾಡುಕುದುರೆ~ಯನ್ನು ಮತ್ತೆ ರೂಪಿಸಿಬಿಟ್ಟೇನು ಎನ್ನುವ ಹುಮ್ಮಸ್ಸು ಅವರದ್ದು.

ಕ್ರಿಕೆಟ್, ಟೆನಿಸ್ ಬಗ್ಗೆಯೂ ಕಂಬಾರರಿಗೆ ಆಸಕ್ತಿಯಿದೆ. `ಟೀವಿಯಲ್ಲಿ ಡಬ್ಲ್ಯುಡಬ್ಲ್ಯುಎಫ್ ನೋಡಿದಾಗ ನಮ್ಮೂರಿನ ಮಲ್ಲರು ನೆನಪಾಗ್ತಾರೆ~ ಎನ್ನುವಾಗ ಅವರ ಕಣ್ಣುಗಳಲ್ಲೊಂದು ಮಿಂಚಿನ ಕೋಲು ಸುಳಿದುಹೋಗುತ್ತದೆ.

ಕಚ್ಚೆಪಂಚೆಯುಟ್ಟು, ಪೇಟ ತೊಟ್ಟು, ಅಪರೂಪಕ್ಕೆ ಕೋಟುಧಾರಿಗಳಾಗುವ ಕಂಬಾರರು ರೂಪದಲ್ಲೂ ಬರವಣಿಗೆಯಲ್ಲೂ ಕನ್ನಡ ಜನಪದದ ಮೂರ್ತರೂಪದಂತೆ ಕಾಣಿಸುತ್ತಾರೆ. ಆದರೆ, ಅವರ ಅಪ್ಪಟ ದೇಸಿ ಹೃದಯದೊಳಗೆ ಆಧುನಿಕ ಕಂಪ್ಯೂಟರ್ಗೆ ಕೂಡ ಸ್ಥಾನವಿದೆ. ಕನ್ನಡಕ್ಕೊಂದು ಪರಿಪೂರ್ಣ ತಂತ್ರಾಂಶ ಸಾಧ್ಯವಾಗಬೇಕು, ಕನ್ನಡದ ಎಲ್ಲ ಸಾಧ್ಯತೆಗಳಿಗೆ ಕಂಪ್ಯೂಟರ್ ಅನ್ನು ಒಗ್ಗಿಸಬೇಕು ಎನ್ನುವ ಹಂಬಲ ಅವರದ್ದು.
ಗುರುವಿನ ಕನಸು

ಕೆ.ಎಸ್.ನರಸಿಂಹಸ್ವಾಮಿ, ಪು.ತಿ.ನರಸಿಂಹಾಚಾರ್, ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಜ್ಞಾನಪೀಠದಿಂದ ವಂಚಿತರಾದ ದೊಡ್ಡ ಲೇಖಕರ ಪಡೆಯೇ ಕನ್ನಡದಲ್ಲಿದೆ. ಅವರಲ್ಲಿ ಗೋಪಾಲಕೃಷ್ಣ ಅಡಿಗರೂ ಒಬ್ಬರು. ಕಂಬಾರರಿಗೆ ಅಡಿಗರ ಕುರಿತು ಗುರುಭಾವನೆ. `ನನಗೆ ಅವರು ಬಹಳಷ್ಟು ಕಲಿಸಿದರು. ಅವರೊಬ್ಬ ದೊಡ್ಡ ಸಂತ. ಅಡಿಗರ `ಮೋಹನ ಮುರಲಿ~ ಕನ್ನಡದ ಬೆಸ್ಟ್ ಲಿರಿಕ್. ಅಲ್ಲಮಪ್ರಭು, ಯೇಟ್ಸ್ ಕೂಡ ದೊಡ್ಡ ಕವಿಗಳು. ಕವಿಗೆ ಇರಬೇಕಾದ ಶಿಸ್ತು ಹಾಗೂ ಕಾವ್ಯಕ್ಕೆ ಬೇಕಾದ ಆತ್ಮಾರ್ಪಣೆಗಳನ್ನು ನಾನು ಅಡಿಗರಿಂದ ಕಲಿತೆ. ತಪಸ್ಸು ಅಂದರೆ ಅದೇ ಇರಬೇಕು~. ಇದು ಸಂದರ್ಶನವೊಂದರಲ್ಲಿ ಕಂಬಾರರು ಹೇಳಿರುವ ಮಾತು. ಅಡಿಗರಿಗೆ ಬಾರದ ಜ್ಞಾನಪೀಠ ಈಗ ಕಂಬಾರರಿಗೆ ದೊರೆತಿದೆ. ಗುರುವಿನ ಹಂಬಲ ಶಿಷ್ಯನ ಮೂಲಕ ನನಸಾಗಿದೆ.

ಎಪ್ಪತ್ತೈದರ ಹೊಸ್ತಿಲಲ್ಲಿರುವ ಕಂಬಾರರು ಈಗಲೂ ಮಾತಿಗೆ ನಿಂತರೆ ದಣಿವರಿಯದವರು. ಹೊಸ ಬರಹಗಾರರನ್ನು ಕಂಡರೆ ಅವರಿಗೆ ಯೌವನ ಮರುಕಳಿಸಿದಷ್ಟು ಉತ್ಸಾಹ. ಒಂದು ಒಳ್ಳೆಯ ಕವಿತೆ, ಕಥೆ, ಲೇಖನ ಓದಿದಾಗ ಫೋನು ಮಾಡಿ ಬೆನ್ನುತಟ್ಟುವ ಸಹೃದಯತೆ ಅವರದ್ದು. ಕೆಲವು ಹಿರಿಯರೊಂದಿಗೆ ಮಾತನಾಡಿದಾಗ ಮನಸ್ಸು ತುಂಬಿಬರುತ್ತದೆ. ಕೈಕುಲುಕಿದಾಗ ಬೆಚ್ಚನೆ ಅನುಭವವಾಗುತ್ತದೆ. ಅಂಥ ಅನುಭೂತಿ ಕಂಬಾರರ ಜೊತೆಗೂ ಆಗುತ್ತದೆ.

ಈಚೆಗೆ ಕಾವ್ಯದ ಬಗ್ಗೆ ಮಾತನಾಡುವಾಗ `ನನಗೀಗ ವಯಸ್ಸಾಯ್ತು. ಕಾವ್ಯದ ರಿದಂ ಹೋಗ್ತಿದೆ ಅನ್ನಿಸ್ತದೆ. ಹಾಡು ಬರೀಲಿಕ್ಕೆ ಆಗ್ತಿಲ್ಲ ಅನ್ನಿಸ್ತದೆ~ ಎಂದು ಕಂಬಾರರು ಹೇಳಿದ್ದರು. ಅದರ ಬೆನ್ನಿಗೇ ಕವಿತೆಗಳೇ ಗುಚ್ಛವನ್ನೇ ಬರೆದು ಮಗುವಿನಂತೆ ಸಂಭ್ರಮಪಟ್ಟಿದ್ದರು. ಈಗ ಜ್ಞಾನಪೀಠದ ಸಂಭ್ರಮ. ಅದು ಕನ್ನಡದ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.