ಬುಧವಾರ, ಜನವರಿ 29, 2020
27 °C

ಜ.18ರಿಂದ ಕದಂಬೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ (ಉ.ಕ.ಜಿಲ್ಲೆ): ರಾಜ್ಯದ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದಾದ ಕದಂಬೋತ್ಸವವು ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಬನವಾಸಿಯಲ್ಲಿ ಜ.18 ಹಾಗೂ 19ರಂದು ನಡೆಯಲಿದೆ.ಎರಡು ವರ್ಷಗಳ ನಂತರ ಈ ವರ್ಷ ಉತ್ಸವ ಆಚರಿಸಲು ಸರ್ಕಾರ ದಿನಾಂಕ ನಿಗದಿಪಡಿಸಿದೆ. ಜಿಲ್ಲೆಯ ಕಲಾವಿದರಿಗೆ ಪ್ರಾತಿನಿಧ್ಯ ನೀಡುವ ಜೊತೆಗೆ ಹೊರ ರಾಜ್ಯದ ಕಲಾವಿದರನ್ನೂ ಆಹ್ವಾನಿಸಲು ತೀರ್ಮಾನಿಸಲಾಗಿದೆ.ಶಾಸಕ ಶಿವರಾಮ ಹೆಬ್ಬಾರ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ದಿನಾಂಕ ಪ್ರಕಟಿಸಿದರು. ಕದಂಬೋತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು, ವಿಜೃಂಭಣೆಯಿಂದ ಆಚರಿಸ­ಲಾಗು­ವುದು ಎಂದರು.

ಪ್ರತಿಕ್ರಿಯಿಸಿ (+)