ಶುಕ್ರವಾರ, ಆಗಸ್ಟ್ 7, 2020
23 °C

ಟರ್ಫ್ ಕ್ಲಬ್‌ಗೆ ಕಿಂಗ್‌ಫಿಶರ್ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟರ್ಫ್ ಕ್ಲಬ್‌ಗೆ ಕಿಂಗ್‌ಫಿಶರ್ ಟ್ರೋಫಿ

ಟಕ್ ಟಕ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಇದು ಫ್ಯಾಷನ್ ಶೋ ಇರಬೇಕು ಅನಿಸಿತ್ತು. ಆದರೆ ಹತ್ತಿರ ಹೋದಾಗ ಅಲ್ಲಿ ಕಂಡಿದ್ದು ರೇಸ್‌ಗೆ ಸಜ್ಜಾಗಿ ನಿಂತಿದ್ದ ಕುದುರೆಗಳು. ಯಾವುದೇ ಮಾಡೆಲ್‌ಗೂ ಕಡಿಮೆಯಿಲ್ಲ ಎಂಬಂತೆ ಕುದುರೆಗಳು ಹೆಜ್ಜೆ ಇಡುತ್ತಾ ಬಂದವು.

ಅದು ರೇಸ್‌ಕೋರ್ಸ್ ರಸ್ತೆಯ ಟರ್ಫ್ ಕ್ಲಬ್‌ನಲ್ಲಿ  ಕಿಂಗ್‌ಫಿಶರ್ ಡರ್ಬಿ ರೇಸ್‌ಗೆ ನಗರ ಸಜ್ಜಾಗುತ್ತಿದ್ದ ಕ್ಷಣ. ಜುಲೈ 15ರಂದು ಆರಂಭಗೊಳ್ಳಲಿರುವ ಈ ಪಂದ್ಯದ ಟ್ರೋಫಿಯನ್ನು ಬಾಲಿವುಡ್ ನಟಿ ಶಾಜಾನ್ ಪದಂಸೀ ಕಿಂಗ್‌ಫಿಶರ್ ಪರವಾಗಿ ಬೆಂಗಳೂರು ಟರ್ಫ್ ಕ್ಲಬ್‌ಗೆ ಹಸ್ತಾಂತರಿಸುವ ಮೂಲಕ ಪ್ರಾರಂಭಿಸಿದರು.

ಯುನೈಟೆಡ್ ಬ್ರಿವರೀಸ್ ಲಿಮಿಟೆಡ್‌ನ ಮಾರ್ಕೆಟಿಂಗ್‌ನ ಉಪಾಧ್ಯಕ್ಷ ಸಮರ್ ಸಿಂಗ್ ಶೆಖಾವತ್, `ಈ ಕಿಂಗ್‌ಫಿಶರ್ ಟ್ರೋಫಿ ಪ್ರತಿಷ್ಠೆ, ಉತ್ಸಾಹ ಮತ್ತು ಗೌರವದ ಸಂಕೇತ, ಈ ಬಾರಿ ಕಿಂಗ್‌ಫಿಶರ್ ಡರ್ಬಿಗೆ 25 ವರ್ಷ ತುಂಬಿದ ಕಾರಣ ರೇಸ್ ಇನ್ನೂ ಉತ್ಸಾಹದಾಯಕವಾಗಲಿದೆ. ಭಾರೀ ಜನ ಸೇರುವ ನಿರೀಕ್ಷೆಯಿದೆ~ ಎಂದರು.

`ನನಗೆ ರೇಸ್ ನೋಡುವುದೆಂದರೆ ತುಂಬಾನೇ ಇಷ್ಟ, ಒಂದು ರೀತಿ ಮಜವಿರುತ್ತದೆ~ ಎಂದು ಮಾತು ಶುರುವಿಟ್ಟುಕೊಂಡ ಶಾಜಾನ್ ಪದಂಸೀ ಅವರಿಗೆ ಬೆಂಗಳೂರು ಎಂದರೆ ತುಂಬಾ ಇಷ್ಟವಂತೆ. `ನಟಿ ಆದವಳಿಗೆ ಆತ್ಮವಿಶ್ವಾಸವಿರಬೇಕು, ಆಗ ಮಾತ್ರ ಯಾವುದೇ ಪಾತ್ರ ಬಂದರೂ ನಿಭಾಯಿಸಲು ಸಾಧ್ಯ~ ಎಂದು ಹೇಳುತ್ತಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ತುಂಬಾ ಇಷ್ಟದ ನಟರು ಎಂದು ಕಣ್ಣರಳಿಸಿ ಮಾತನಾಡುವ ಈ ಬೆಡಗಿಗೆ ದಕ್ಷಿಣ ಭಾರತದ ಆಹಾರ ಎಂದರೆ ಪ್ರೀತಿ.

ಕಿಂಗ್ ಆಫ್ ಆಲ್ ಡರ್ಬೀಸ್ ಎಂದೇ ಕರೆಯಲಾಗುವ ಈ ಕಿಂಗ್‌ಫಿಶರ್ ಡರ್ಬಿ, ಶ್ರೀಮಂತ ಕ್ರೀಡೆ ಎನಿಸಿಕೊಂಡಿದೆ. ಕುದುರೆ ರೇಸ್ ಮೇಲೆ ಸಾವಿರಾರು ಗಟ್ಟಲೆ ಹಣ ಸುರಿದು ಅದರ ಓಟವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವ ಜನ ನಗರದಲ್ಲಿ ಇದ್ದಾರೆ. ಇದೇ ಜುಲೈ 15ರಂದು ಡರ್ಬಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.