ಬೆಂಗಳೂರು: ಐಪಿಎಲ್ ಏಳನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಟಿಕೆಟ್ ಗಿಟ್ಟಿಸಲು ಗುರುವಾರ ಮಧ್ಯರಾತ್ರಿಯಿಂದಲೇ ಕ್ರಿಕೆಟ್ ಪ್ರೇಮಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್ ಬಳಿ ಮುಗಿಬಿದ್ದಿದ್ದರು.

ಭಾನುವಾರ ರಾತ್ರಿ 8 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಇಂದು (ಶುಕ್ರವಾರ) ಬೆಳಿಗ್ಗೆ 9 ಗಂಟೆಯಿಂದ ಟಿಕೆಟ್ ನೀಡಲಾಗುತ್ತದೆ. ಆದರೆ, ಗುರುವಾರ ರಾತ್ರಿಯೇ ಕ್ರೀಡಾಂಗಣದ ಹೊರಭಾಗದಲ್ಲಿ ಸಾಕಷ್ಟು ಅಭಿಮಾನಿಗಳು ಸಾಲಿನಲ್ಲಿ ನಿಂತಿದ್ದರು. ಅದರಲ್ಲೂ ಯುವತಿಯರ ದಂಡೇ ಹೆಚ್ಚಾಗಿತ್ತು.

ನಿಗದಿತ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಫೈನಲ್ ಮುಂಬೈಯಲ್ಲಿ ನಡೆಯಬೇಕಿತ್ತು. ಆದರೆ, ಕೊನೆಯಲ್ಲಿ ಈ ಮಹತ್ವದ ಅವಕಾಶ ಉದ್ಯಾನನಗರಿಯ ಪಾಲಾಗಿದೆ. ಆದ್ದರಿಂದ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಲೇಬೇಕೆಂದು ಹರಸಾಹಸ ಮಾಡುತ್ತಿದ್ದಾರೆ.

ಫೈನಲ್ ಪಂದ್ಯ ಉದ್ಯಾನನಗರಿಯಲ್ಲಿ ಆಯೋಜನೆಯಾಗಿರುವುದು ಇದೇ ಮೊದಲು. ಆದ್ದರಿಂದ ಈ ಪಂದ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಜೊತೆಗೆ, ಟಿಕೆಟ್ ಪಡೆಯಲು ಬೇರೆ ಬೇರೆ ಊರಿನಿಂದಲೂ ಅಭಿಮಾನಿಗಳು ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.