ಮಂಗಳವಾರ, ಮಾರ್ಚ್ 2, 2021
23 °C

ಟಿಕೆಟ್‌ ನಿರಾಕರಣೆ: ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಕೆಟ್‌ ನಿರಾಕರಣೆ: ಸಮರ್ಥನೆ

ಲಿಂಗಸುಗೂರು: ಕೇಂದ್ರದ ಮಾಜಿ ಸಚಿವ ಜಾಫರ್‌ ಷರೀಫ್‌ ಅವರು ವಯೋವೃದ್ಧರಾಗಿದ್ದು ಮುಸ್ಲಿಂ ಸಮು­ದಾಯದಲ್ಲಿ ಇತರೆ ಯುವಕರಿಗೆ ಆದ್ಯತೆ ನೀಡಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲು ಹೈಕಮಾಂಡ್‌ ತೆಗೆದುಕೊಂಡಿ­ರುವ ಕ್ರಮ ಸ್ವಾಗತಾರ್ಹ ಎಂದು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿ­ಕೊಂಡರು.ಬುಧವಾರ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಸನ್ಮಾನ ಸ್ವೀಕರಿಸಿ , ಬಳಿಕ ಮಾತನಾಡಿ, ಕಾಂಗ್ರೆಸ್‌ ಯಾವುದೇ ಒಂದು ಧರ್ಮ, ಜಾತಿ ಪರ ಕೆಲಸ ಮಾಡಲ್ಲ. ರಾಷ್ಟ್ರದ ಧರ್ಮೀಯರ ಹಿತ ಕಾಪಾ­ಡುವ ಜೊತೆಗೆ ರಾಷ್ಟ್ರದ ಭದ್ರತೆಗೆ ತ್ಯಾಗ ಬಲಿದಾನ ಮಾಡುತ್ತ ಬಂದಿರುವುದು ಇತಿಹಾಸ. ಪ್ರತಿಯೊಂದು ಪಕ್ಷದಲ್ಲಿರು­ವಂತೆ ತಮ್ಮ ಪಕ್ಷದಲ್ಲೂ ಕೂಡ ಕೆಲ ಆಂತರಿಕ ಗೊಂದಲಗಳಿವೆ. ನಾವೆಲ್ಲ ಒಗ್ಗ­ಟ್ಟಾಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಭೂಪನಗೌಡ ಕರಡಕಲ್ಲ, ಮುನ್ವರ್‌ಖಾನ್‌. ಮುಖಂಡ­ರಾದ ಪರಶುರಾಮ ನಗನೂರು, ಲಾಲಅಹ್ಮದಸಾಬ, ಖಾದರಪಾಷ, ಅಹ್ಮದ ಚಾವೂಸ್‌, ಕುಮಾರಸ್ವಾಮಿ, ಮಲ್ಲಣ್ಣ ವಾರದ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.