ಶನಿವಾರ, ಏಪ್ರಿಲ್ 10, 2021
29 °C

ಟಿಟಿ: ಅಮಾನ್, ಅನಿಂದಿತಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಸೆಂಟ್ರಲ್ ರೈಲ್ವೆಯ ಬಿ. ಅಮಾನ್ ಹಾಗೂ ಆಗ್ನೇಯ ರೈಲ್ವೆಯ ಅನಿಂದಿತಾ ಚಕ್ರವರ್ತಿ ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸೆಂಟ್ರಲ್ ರೈಲ್ವೆಯ ಅಮಾನ್ 11-6, 13-11, 11-7,  13-11ರಿಂದ ಆಗ್ನೇಯ ರೈಲ್ವೆಯ ಸೌಮ್ಯಜಿತ್ ಸರ್ಕಾರ್ ಅವರನ್ನು ಮಣಿಸಿದರು.ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ 35 ವರ್ಷದ ಅನುಭವಿ ಆಟಗಾರ್ತಿ, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ಬಾರಿ ಫೈನಲ್ ತಲುಪಿದ್ದ ಅನಿಂದಿತಾ ಚಕ್ರವರ್ತಿ 11-7, 6-11, 11-8, 11-13, 15-13, 3-11, 14-12ರಿಂದ ಮೆಟ್ರೊ ರೈಲ್ವೆಯ ಶ್ರೇಯಾ ಘೋಷ್ ವಿರುದ್ಧ ಜಯ ಸಾಧಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.