ನ್ಯೂಯಾರ್ಕ್ (ಪಿಟಿಐ): `ಅಮೆರಿಕದ ಅಧ್ಯಕ್ಷರು ಯಾರೊಂದಿಗೂ ಬೆರೆಯುವುದಿಲ್ಲ, ವಿಶ್ವದ ನಾಯಕರೊಂದಿಗೆ ಸ್ನೇಹ ಬೆಳೆಸುವುದಿಲ್ಲ~ ಎಂಬ ಟೀಕೆಗೆ ಎದಿರೇಟು ನೀಡಿರುವ ಬರಾಕ್ ಒಬಾಮ, ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ತಮ್ಮ ಸ್ನೇಹವಲಯದ ಗಣ್ಯರ ಪಟ್ಟಿಯಲ್ಲಿ ಬರುತ್ತಾರೆ ಎಂದಿದ್ದಾರೆ.

`ವಿಶ್ವದ ನಾಯಕರೊಂದಿಗೆ ಸ್ನೇಹ ಹಾಗೂ ವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಇದು ಪರಿಣಾಮಕಾರಿ ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಿದೆ~ ಎಂದು `ಟೈಮ್ಸ~ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಒಬಾಮ ಹೇಳಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್, ಟರ್ಕಿ ಪ್ರಧಾನಿ ರೆಸೆಪ್ ಟಯಿಪ್ ಎರ್ಡೋಗನ್ ಹಾಗೂ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರೊಂದಿಗೂ ತಾವು ನಿಕಟ ಸಂಬಂಧ ಹೊಂದಿರುವುದಾಗಿ ಒಬಾಮ ಹೇಳಿದ್ದಾರೆ.

`ನೀವು ಬೇಕಾದರೆ ಈ ನಾಯಕರನ್ನೆಲ್ಲ ಕೇಳಿ ನೋಡಿದರೆ ಗೊತ್ತಾಗುತ್ತದೆ. ಅಮೆರಿಕದ ಅಧ್ಯಕ್ಷರಲ್ಲಿ ನಾವು ತುಂಬ ನಂಬಿಕೆ ಹಾಗೂ ವಿಶ್ವಾಸ ಇಟ್ಟಿದ್ದೇವೆ ಎಂಬ ಉತ್ತರ ಅವರಿಂದ ಬರುತ್ತದೆ~ ಎಂದು ಒಬಾಮ ಹೇಳಿದ್ದಾರೆ.

`ನಾನು ವಾಷಿಂಗ್ಟನ್ ಪಾರ್ಟಿಗಳಿಗೆಲ್ಲ ಹೋಗುವುದಿಲ್ಲ. ಹಾಗಾಗಿಯೇ ಯಾರೊಂದಿಗೂ ಬೆರೆಯುವುದಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಬಿಡುವಾದಾಗ ಕುಟುಂಬದ ಜತೆ ಕಳೆಯುವುದು ನನ್ನ ಆದ್ಯತೆ. ನನಗೆ 13 ಹಾಗೂ 10 ವರ್ಷದ ಪುತ್ರಿಯರಿದ್ದಾರೆ.

ಇವರಿಬ್ಬರೊಂದಿಗೆ ಕಾಲ ಕಳೆಯಲು ನಾನು ಹಾಗೂ ನನ್ನ ಪತ್ನಿ ಮಿಶೆಲ್ ಇಷ್ಟಪಡುತ್ತೇವೆ. ಹಾಗಾಗಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಿರಳ. ಮಕ್ಕಳಿಗೆ ಒಳ್ಳೆಯ ತಂದೆ-ತಾಯಿ ಆಗಿರುವುದೂ ಅಷ್ಟೇ ಮುಖ್ಯವಲ್ಲವೇ?~ ಎನ್ನುವುದು ಒಬಾಮ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.