ಗುರುವಾರ , ಜೂನ್ 24, 2021
25 °C

ಟೆನಿಸ್‌: ಕರ್ನಾಟಕದ ಪ್ರೀತಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕರ್ನಾಟಕದ ಪ್ರೀತಿ ಉಜ್ಜಿನಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ರ್‍ಯಾಂಕಿಂಗ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್‌್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಅಗ್ರ ಶ್ರೇಯಾಂಕ ಹೊಂದಿರುವ ಪ್ರೀತಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6–2, 7–6ರ ನೇರ ಸೆಟ್‌ಗಳಿಂದ ಮಹಾರಾಷ್ಟ್ರದ ಅನುಷ್ಕಾ ಸಾಟೆಗೆ ಆಘಾತ ನೀಡಿದರು.ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಸಂಸ್ಕೃತಿ ರಂಜನ್‌ 6–3, 6–3ರಲ್ಲಿ ಮಹಾರಾಷ್ಟ್ರದ ಆರ್ಯಾಲಿ ಚವಾಣ್‌ ಎದುರು ಜಯ ಪಡೆದರು. ಈ ಟೂರ್ನಿ  ₨ 1.5 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.