ಟೆನಿಸ್: ದಿವಿಜ್ ಶುಭಾರಂಭ
ನ್ಯೂಪೋರ್ಟ್, ಅಮೆರಿಕ (ಪಿಟಿಐ): ಉತ್ತಮ ಪ್ರದರ್ಶನ ತೋರಿದ ಭಾರತದ ದಿವಿಜ್ ಶರಣ್ ಇಲ್ಲಿ ನಡೆಯುತ್ತಿರುವ ಎಟಿಪಿ ಹಾಲ್ ಆಫ್ ಫೇಮ್ ಟೆನಿಸ್ ಚಾಂಪಿಯನ್ಷಿಪ್ನ ಪುರುಷರ ಡಬಲ್ಸ್ನಲ್ಲಿ ಶುಭಾರಂಭ ಮಾಡಿದ್ದಾರೆ. ಕ್ರೊವೇಷಿಯಾದ ಇವೊ ಕಾರ್ಲೊವಿಕ್ ಅವರ ಜೊತೆಗೂಡಿ ಆಡಿದ ಅವರು ಎರಡನೇ ಸುತ್ತಿಗೆ ಮುನ್ನಡೆದರು.
ಇತ್ತೀಚೆಗೆ ವಿಂಬಲ್ಡನ್ನಲ್ಲಿ ಆಡುವ ಮೂಲಕ ಗ್ರ್ಯಾನ್ ಸ್ಲಾಮ್ಗೆ ಪದಾರ್ಪಣೆ ಮಾಡಿದ್ದ ದಿವಿಜ್ ಅವರು ಕಾರ್ಲೊವಿಕ್ ಜೊತೆ ಸೇರಿ 4-6, 7-6, 11-9ರಲ್ಲಿ ಉಕ್ರೇನ್ನ ಇಲ್ಯಾ ಮಾರ್ಚೆಂಕೊ ಹಾಗೂ ಡೇನ್ಸ್ ಮೊಲ್ಚಾನೊವ್ ವಿರುದ್ಧ ಗೆದ್ದರು.
ಆದರೆ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನಲ್ಲಿ ಪ್ರಕಾಶ್ ಅಮೃತರಾಜ್ 2-6, 1-6ರಲ್ಲಿ ಆಸ್ಟ್ರೇಲಿಯಾದ ಲೇಟನ್ ಹೆವಿಟ್ ಕೈಯಲ್ಲಿ ಸೋತರು. ಎಂಟರ ಘಟ್ಟದಲ್ಲಿ ದಿವಿಜ್ ಹಾಗೂ ಕಾರ್ಲೊವಿಕ್ ಜೋಡಿ ಕೆನಡಾದ ಆದಿಲ್ ಶಮಸ್ದಿನ್ ಹಾಗೂ ಆಸ್ಟ್ರೇಲಿಯಾದ ಜಾನ್ ಪ್ಯಾಟ್ರಿಕ್ ಸ್ಮಿತ್ ವಿರುದ್ಧ ಆಡಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.