ಜೊಹಾನ್ಸ್ಬರ್ಗ್ : ದಕ್ಷಿಣ ಆಪ್ರಿಕಾ ವೇಗಿಗಳೆದುರು ಭಾರತದ ಬ್ಯಾಟ್ಸ್ಮನ್ಗಳ ದೌರ್ಬಲ್ಯ ಟೆಸ್ಟ್ ಸರಣಿಯಲ್ಲೂ ಮುಂದುವರಿದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ತಂಡ ಬ್ಯಾಟಿಂಗ್ ನಡೆಸುತ್ತಿದ್ದು, ಆರಂಭಿಕ ಆಟಗಾರರು ಪೆವಿಲಿಯನ್ ಸೇರಿದ್ದಾರೆ.

ವೇಗಿಗಳಿಗೆ ನೆರವು ನೀಡುವ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನಾಯಕ ದೋನಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ (6) ಮತ್ತು ಶಿಖರ್ ಧವನ್ (13) ಜೋಡಿ ಬಂದಷ್ಟೇ ವೇಗವಾಗಿ ಹಿಂದಿರುಗಿದ್ದಾರೆ.

ಭಾರತದ ಬ್ಯಾಟ್ಸ್ಮನ್ಗಳಿಗೆ ಈ ಪಿಚ್ ದೊಡ್ಡ ಸವಾಲು ಎಂದಿದ್ದ ದಕ್ಷಿಣ ಆಫ್ರಿಕಾ ವೇಗಿ ಡೇನ್ ಸ್ಟೇನ್, ಧವನ್ ವಿಕೆಟ್ ಪಡೆದು ಅದನ್ನು ಸಾಬೀತುಪಡಿಸಿದ್ದಾರೆ. ಇನ್ನೊಂದು ಬದಿಯಲ್ಲಿ ಅಷ್ಟೇ ಉತ್ತಮವಾಗಿ ಬೌಲಿಂಗ್ ನಡೆಸುತ್ತಿರುವ ಮಾರ್ನ್ ಮಾರ್ಕೆಲ್ ಮುರಳಿಗೆ ಪೆವಿಲಿಯಲ್ ದಾರಿ ತೋರಿಸಿದ್ದಾರೆ.

ಪಂದ್ಯದ ಕ್ಷಣ ಕ್ಷಣದ ಮಾಹಿತಿಗಾಗಿ http://www.prajavani.net/cricket

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.