ಟೋಕನ್ ಮ್ಯಾನೇಜ್‌ಮೆಂಟ್ ಆರಂಭ

ಬುಧವಾರ, ಮೇ 22, 2019
34 °C

ಟೋಕನ್ ಮ್ಯಾನೇಜ್‌ಮೆಂಟ್ ಆರಂಭ

Published:
Updated:

ಶಿವಮೊಗ್ಗ: ರೈಲುನಿಲ್ದಾಣದಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಒತ್ತಡ ತಡೆಯುವುದಕ್ಕಾಗಿ ನಗರದಲ್ಲಿ ನಾಲ್ಕು ಕಡೆಗಳಲ್ಲಿ ಮುಂಗಡ ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಹಿರಿಯ ವಾಣಿಜ್ಯ ಅಧಿಕಾರಿ ಡಾ.ಅನೂಪ್ ದಯಾನಂದ್ ತಿಳಿಸಿದರು.ನಗರದ ರೈಲುನಿಲ್ದಾಣದಲ್ಲಿ ರೈಲು ಪ್ರಯಾಣದ ಕಾದಿರಿಸುವಿಕೆ ಹಾಗೂ ಟೆಕೆಟ್ ಖರೀದಿಸಲು ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗುರುವಾರ ಟೋಕನ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನಗರದ ಪೊಲೀಸ್‌ಚೌಕಿ, ಕೋಟೆ ಅಂಚೆ ಕಚೇರಿ, ನಂಜಪ್ಪ ಆಸ್ಪತ್ರೆ ಎದುರು ಹಾಗೂ ಹಳೆ ರೈಲುನಿಲ್ದಾಣದ ಎದುರು ಈ ಮುಂಗಡ ಕಾಯ್ದಿರಿಸುವಿಕೆ ಈಗಾಗಲೇ ಜಾರಿಯಲ್ಲಿದೆ ಎಂದರು.ರೈಲುನಿಲ್ದಾಣದಲ್ಲಿ ಟಿಕೆಟ್ ಪಡೆದುಕೊಳ್ಳಲು ಪ್ರಯಾಣಿಕರು ಪ್ರತಿ ಸಲವೂ ಕ್ಯೂನಲ್ಲಿ ನಿಂತು ವೃಥಾ ಕಾಯುವುದನ್ನು ತಪ್ಪಿಸಲು ಈ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.ಮೈಸೂರು ವಿಭಾಗದ `ಎ~ ಶ್ರೇಣಿ ರೈಲುನಿಲ್ದಾಣಗಳಾದ ಶಿವಮೊಗ್ಗ, ದಾವಣಗೆರೆ ರೈಲುನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ `ಬಿ~ ಶ್ರೇಣಿ ರೈಲುನಿಲ್ದಾಣಗಳಲ್ಲಿಯೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ಇದೆ ಎಂದರು.ಸಮಾರಂಭದಲ್ಲಿ ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗೀಯ ವ್ಯವಸ್ಥಾಪಕ ಡಿ.ಬಿ. ವರ್ಮಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry