ಶುಕ್ರವಾರ, ಜನವರಿ 24, 2020
27 °C

ಟ್ಯೂಷನ್‌ ದಂಧೆ:ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ಬಡ ವಿದ್ಯಾರ್ಥಿಗಳನ್ನು ಶೋಷಿ­ಸುವ, ಶಾಲೆ ಕಾಲೇಜಿನಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಮನೆಪಾಠದ ಹೆಸರಿ­ನಲ್ಲಿ ಹಣ ಸುಲಿಯುವವರ ವಿರುದ್ಧ ನಿರ್ದಾ­ಕ್ಷಿಣ್ಯ­ವಾಗಿ ಕ್ರಮ ತೆಗೆದುಕೊಳ್ಳುವಂತೆ  ಅಧಿ­ಕಾರಿ­­ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದ್ದಾರೆ.

ಸರ್ಕಾರಿ, ಅನುದಾನಿತ ಶಾಲಾ, ಕಾಲೇಜು­ಗಳ ಬೋಧಕರು ಮನೆ ಪಾಠ ನಡೆಸುವುದು ಕಂಡು ಬಂದರೆ   ಅಮಾನತು­ಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಕುರಿತು ಶೀಘ್ರದಲ್ಲಿ ಪ್ರಾಂಶುಪಾಲರ, ಮುಖ್ಯ ಶಿಕ್ಷಕ ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)