ಲಂಡನ್ (ಎಎಫ್ಪಿ/ರಾಯಿಟರ್ಸ್): ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ನರಾದ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸ ಅವರು ಸೋಮವಾರ ಆರಂಭವಾಗಲಿರುವ 127ನೇ ವರ್ಷದ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಈ ಸಲವೂ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಜೂನ್ 24ರಿಂದ ಜುಲೈ 7ರ ವರೆಗೆ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದ್ದು, 17 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ನಡಾಲ್ ಮತ್ತೆ ಚಾಂಪಿಯನ್ ಆಗುವತ್ತ ಚಿತ್ತ ಹರಿಸಿದ್ದಾರೆ. ಸ್ವಿಟ್ಜರ್ಲೆಂಡ್ನ ಈ ಆಟಗಾರ ಏಳು ಸಲ ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 2012ರಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ಮಣಿಸಿ ನಡಾಲ್ ಪ್ರಶಸ್ತಿ ಜಯಿಸಿದ್ದರು. ಐದನೇ ಶ್ರೇಯಾಂಕ ಹೊಂದಿರುವ ನಡಾಲ್ ಸ್ನಾಯುಸೆಳೆತದ ನೋವಿನಿಂದ ಬಳಲಿದ್ದರು. ಈ ವರ್ಷದ ಫೆಬ್ರವರಿಯಿಂದ ಮತ್ತೆ ಆಡಲು ಶುರು ಮಾಡಿದ್ದರು.

`ಬೇರೆ ಗ್ರ್ಯಾನ್ ಸ್ಲಾಮ್ ಟೂರ್ನಿಗಳಿಗಿಂತ ವಿಂಬಲ್ಡನ್ ನನಗೆ ಅಚ್ಚು ಮೆಚ್ಚು. ಇಲ್ಲಿ ಆಡುವುದು ಖುಷಿಯ ವಿಚಾರ. ನಾನೀಗ ಪೂರ್ಣವಾಗಿ ಫಿಟ್ ಆಗಿದ್ದೇನೆ' ಎಂದು ನಡಾಲ್ ನುಡಿದರು.

ಸರ್ಬಿಯಾದ ನೊವಾಕ್ ಜೊಕೊವಿಚ್, ರೋಜರ್ ಫೆಡರರ್ ಹಾಗೂ ಮರ್ರೆ ಕೂಡಾ ಪುರುಷರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರರು ಎನಿಸಿದ್ದಾರೆ. ಇದೇ ವರ್ಷದಲ್ಲಿ ಆಸ್ಟ್ರೇಲಿಯಾ ಗ್ರ್ಯಾನ್ ಸ್ಲಾಮ್ ಟೂರ್ನಿಯ ಚಾಂಪಿಯನ್ ಆಗಿರುವ ನೊವಾಕ್ ಈ ವರ್ಷದಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಆಟಗಾರ 2011ರಲ್ಲಿ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರು. ಲಂಡನ್ ಒಲಿಂಪಿಕ್ಸ್ನ ಚಿನ್ನ ಜಯಿಸಿರುವ ಮರ್ರೆ ಸಹ ಸಿಂಗಲ್ಸ್ನಲ್ಲಿ ಪ್ರಬಲ ಸವಾಲು ಒಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

`ಆಸ್ಟ್ರೇಲಿಯಾ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದು ಸಾಮರ್ಥ್ಯ ಹೆಚ್ಚಿಸಿದೆ. ಆದರೆ, ವಿಂಬಲ್ಡನ್ನಲ್ಲಿ ಪ್ರತಿ ಹಂತದಲ್ಲೂ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ' ಎಂದು ನೊವಾಕ್ ನುಡಿದರು.

ಮಹಿಳಾ ವಿಭಾಗ: ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ ಅಮೆರಿಕದ ಸೆರೆನಾ ಅವರು ಅಗ್ನೆಸ್ಕಾ ರಾಡ್ವೆಸ್ಕಾ ಎದುರು ಗೆಲುವು ಪಡೆದು ಕಳೆದ ವರ್ಷ ಚಾಂಪಿಯನ್ ಆಗಿದ್ದರು. ಒಟ್ಟು 13 ಸಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ 26 ವರ್ಷದ ಸೆರನಾ ವಿಂಬಲ್ಡನ್ ಟೂರ್ನಿಯಲ್ಲಿ ಐದು ಸಲ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಸೆರೆನಾ, ವಿಕ್ಟೋರಿಯಾ ಅಜರೆಂಕಾ ಮತ್ತು ಮರಿಯಾ ಶರ್ಪೊವಾ ಅವರು ಈ ವಿಭಾಗದ ಪ್ರಮುಖ ಆಟಗಾರ್ತಿಯರು ಎನಿಸಿಕೊಂಡಿದ್ದಾರೆ.

ಭಾರತದ ಭರವಸೆ: ಆರು ಜನ ಭಾರತದ ಆಟಗಾರರು ಡಬಲ್ಸ್ನಲ್ಲಿ ಕಣದಲ್ಲಿದ್ದು, ಈ ವಿಭಾಗದಲ್ಲಿ ಭಾರತದ ಭರವಸೆ ಹೆಚ್ಚಿದೆ.
ನಾಲ್ಕನೇ ಶ್ರೇಯಾಂಕ ಹೊಂದಿರುವ ಲಿಯಾಂಡರ್ ಪೇಸ್ ಅವರು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆಗೂಡಿ ಆಡಲಿದ್ದಾರೆ. ಇತ್ತೀಚಿಗೆ ನಡೆದ ಎಜೋನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಈ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿತ್ತು.

ಯುವ ಆಟಗಾರರಾದ ದಿವಿಜ್ ಶರಣ್-ಪುರವ್ ರಾಜಾ ಜೋಡಿ ಅರ್ಹತಾ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದು ಸಕಾರಾತ್ಮಕ ಅಂಶ. ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಹಾಗೂ ಮಹೇಶ್ ಭೂಪತಿ ಭಾರತದ ಬಲ ಎನಿಸಿದ್ದಾರೆ. ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನಲ್ಲಿಯೇ ಭಾರತದ ಸೋಮದೇವ್ ದೇವವರ್ಮನ್ ಸೋಲು ಕಂಡು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

2012ರ ವಿಂಬಲ್ಡನ್ ಟೂರ್ನಿಯ ಚಾಂಪಿಯನ್ನರು
- ರೋಜರ್ ಫೆಡರರ್ (ಪುರುಷರ ಸಿಂಗಲ್ಸ್)
- ಸೆರೆನಾ ವಿಲಿಯಮ್ಸ (ಮಹಿಳೆಯರ ಸಿಂಗಲ್ಸ್)
- ಜೊನಾಥನ್ ಮರ್ರೆ-ಫ್ರೆಡರಿಕ್ ನೆಲ್ಸನ್ (ಪುರುಷರ ಡಬಲ್ಸ್)
- ಸೆರೆನಾ ಹಾಗೂ ವೀನಸ್ ವಿಲಿಯಮ್ಸ (ಮಹಿಳೆಯರ ಡಬಲ್ಸ್)
- ಮೈಕ್ ಬ್ರಯಾನ್-ಲೀಸಾ ರೈಮಂಡ್ (ಮಿಶ್ರ ಡಬಲ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.