ಕೃಷಿ ಕ್ಷೇತ್ರದಲ್ಲಿ ಅಗ್ರಮಾನ್ಯ ಸಂಶೋಧಕರಾಗಿ ಹೆಸರು ಮಾಡಿರುವ ಡಾ. ಎಸ್.ಅಯ್ಯಪ್ಪನ್ ಬಹು ಎತ್ತರಕ್ಕೆ ಬೆಳೆದರೂ ನಿಂತ ನೆಲವನ್ನು ಎಂದಿಗೂ ಮರೆಯದ ಸಾಧಕ. ಸದಾ ಮಣ್ಣಿನೊಡನೆ ಅವರ ಸಹವಾಸ. ಕಟ್ಟಿದ ಟೈ ತೆಗೆದಿಟ್ಟು, ನೇಗಿಲು ಹಿಡಿದು ಉಳುಮೆ ಮಾಡುವಷ್ಟು ಅವರಿಗೆ ಕೃಷಿ ಮೇಲೆ ಪ್ರೀತಿ. ನೀರಿಗಿಳಿದರೆ ಮೀನಿನ ಹೆಜ್ಜೆಯನ್ನೂ ಎಣಿಸಬಲ್ಲ ನಿಷ್ಣಾತ. ಹೌದಲ್ಲವೆ ಮತ್ತೆ, ಅವರು ಮತ್ಸ್ಯ ಕೃಷಿಯಲ್ಲಿಯೇ ಸ್ನಾತಕೋತ್ತರ ಪದವೀಧರ. ಸಿಹಿನೀರಿನಲ್ಲಿ ವಿವಿಧ ಮೀನು ಸಾಕುವ ವಿಧಾನವನ್ನು ಹೇಳಿಕೊಡಬಲ್ಲ ಜಾಣ!

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಯ್ಯಪ್ಪನ್, ಆ ಹುದ್ದೆಗೆ ಏರಿದ ಮೊದಲ ಕನ್ನಡಿಗರು. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿ ಸದಸ್ಯರಾಗಿರುವ ಅವರು, (ಈ ಸಮಿತಿಗೆ ಮತ್ತೊಬ್ಬ ಹೆಮ್ಮೆಯ ಕನ್ನಡಿಗ ಪ್ರೊ. ಸಿಎನ್ಆರ್ ರಾವ್ ಅಧ್ಯಕ್ಷರು) ದೇಶದ ಅಭಿವೃದ್ಧಿ ಮೇಟಿ ವಿದ್ಯೆಯಿಂದಲೇ ಸಾಧ್ಯ ಎಂದು ಬಲವಾಗಿ ನಂಬಿದವರು. ವಿಜ್ಞಾನದ ಎಲ್ಲ ಶಾಖೆಗಳಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂಬುದನ್ನು ಕೃಷಿ ವಿಜ್ಞಾನದ ಮೂಲಕ ಸಾರಿದವರು.

ಮೈಸೂರು ಜಿಲ್ಲೆಯ ಅಲಕೆರೆ ಎಂಬ ಗ್ರಾಮದಲ್ಲಿ ಜನಿಸಿದ ಅಯ್ಯಪ್ಪನ್, ಆಗಿನ ಕಾಲದ ಗ್ರಾಮಾಂತರ ಭಾಗದ ಮಕ್ಕಳಂತೆ ಜಮೀನನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡವರು. ರಾಸುಗಳನ್ನು ಹಿಡಿದು ಓಡಾಡಿದವರು. ನೇಗಿಲು ಹಿಡಿದು ದುಡಿದವರು. ಕೆರೆಯ ನೀರಿನಲ್ಲಿ ಈಜುವ ಥರಾವರಿ ಮೀನುಗಳನ್ನು ಕಂಡು ಮೂಗಿನ ಮೇಲೆ ಬೆರಳು ಇಟ್ಟವರು.

ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದಿದ ಅವರು, ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಬಿಎಫ್ಸಿ ಮಾಡಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಎಂಎಫ್ಸಿ ಪದವಿ ಪೂರೈಸಿದರು. ಮುಂಬೈನ ಕೇಂದ್ರೀಯ ಮೀನುಗಾರಿಕಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ, ಭುವನೇಶ್ವರದ ಕೇಂದ್ರೀಯ ಸಿಹಿನೀರು ಮೀನು ಸಾಕಾಣಿಕೆ ಕೇಂದ್ರ ಹಾಗೂ ಬಾರಕ್ಪುರದ ಕೇಂದ್ರೀಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಮೀನುಗಳ ಅಭಿವೃದ್ಧಿ ಹಾಗೂ ಸಾಕಾಣಿಕೆ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆ ನೀಡಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾ ನಿರ್ದೇಶಕರಾಗುವ ಮುನ್ನ ಅದೇ ಸಂಸ್ಥೆಯ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವವೂ ಅವರಿಗಿದೆ.

ಪ್ರಬಂಧ ಮಂಡನೆಯಲ್ಲಿ ಮುಂಚೂಣಿಯಲ್ಲಿರುವ ಕೃಷಿ ವಿಜ್ಞಾನಿಗಳು ನಿಜಕ್ಕೂ ರೈತರ ನೆರವಿಗೆ ಬರುವಂತಹ ಯಾವುದಾದರೂ ತಂತ್ರಜ್ಞಾನ ತಂದಿದ್ದಾರೆಯೇ? ಅವರ ಸಂಶೋಧನೆಯ ಲಾಭ ಕೃಷಿ ಸಂಕುಲಕ್ಕೆ ತಟ್ಟಿದೆಯೇ? ಡಾ. ಅಯ್ಯಪ್ಪನ್ ಅವರ ಮುಂದೆ ಈ ಪ್ರಶ್ನೆ ಇಟ್ಟಾಗ ಅವರ ಬಳಿ ಉತ್ತರ ಸಿದ್ಧವಾಗಿಯೇ ಇತ್ತು.

‘ನನ್ನ ಮೂರು ದಶಕಗಳ ಸಂಶೋಧನಾ ಚಟುವಟಿಕೆಗಳಲ್ಲಿ ಇಂತಹ ಪ್ರಶ್ನೆ ಲೆಕ್ಕವಿಲ್ಲದಷ್ಟು ಬಾರಿ ಎದುರಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಆಹಾರ ಧಾನ್ಯಕ್ಕಾಗಿ ನಾವು ಪರದೇಶಗಳನ್ನು ಅವಲಂಬಿಸಿದ್ದೆವು. ಈಗ ನಮ್ಮ ದೇಶಕ್ಕೆ ಬೇಕಾದಷ್ಟು ಧಾನ್ಯ ಬೆಳೆದುಕೊಂಡು ವಿದೇಶಕ್ಕೂ ರಫ್ತು ಮಾಡುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎನ್ನುವುದನ್ನು ಎಲ್ಲರೂ ಆಲೋಚಿಸಬೇಕು’ ಎಂದು ಹೇಳುತ್ತಾರೆ.

‘ದೇಶದಲ್ಲಿ ಕಳೆದ ವರ್ಷ 25.9 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆಯಾಗಿದೆ. 89 ಲಕ್ಷ ಟನ್ ಮೀನು ಉತ್ಪಾದನೆಯಾಗಿದೆ. ಒಂದು ಕೋಟಿ ಟನ್ ಅಕ್ಕಿ ಮತ್ತು ಎರಡು ಕೋಟಿ ಟನ್ ಸಕ್ಕರೆಯನ್ನು ರಫ್ತು ಮಾಡಿದ್ದೇವೆ. ಇದು ‘ಇಂದ್ರಧನುಷ್ ಕ್ರಾಂತಿ’. 1950ರಲ್ಲಿ ಇದ್ದ ಕೃಷಿ ಭೂಮಿಗೆ ಹೋಲಿಸಿದರೆ ಈಗ ಉಳಿದಿರುವ ಕೃಷಿ ಭೂಮಿ ಕಡಿಮೆಯೇ. ದೇಶದಲ್ಲಿ ಈಗ ಉಳಿದಿರುವುದು 1.42 ಕೋಟಿ ಹೆಕ್ಟೇರ್ ಕೃಷಿ ಪ್ರದೇಶ ಮಾತ್ರ. ಹಾಗಿದ್ದೂ ಕೃಷಿ ಉತ್ಪನ್ನ ಹೇಗೆ ಹೆಚ್ಚಾಯಿತು ಎಂಬ ಪ್ರಶ್ನೆ ಹಾಕಿಕೊಂಡರೆ ಸಿಗುವ ಉತ್ತರದಲ್ಲಿಯೇ ನಮ್ಮ ಶ್ರಮದ ಗುಟ್ಟು ಅಡಗಿದೆ’ ಎಂದು ವಿವರಿಸುತ್ತಾರೆ.

‘ಹೊಸ ತಳಿಗಳ ಅಭಿವೃದ್ಧಿ, ಸುಲಭ ತಂತ್ರಜ್ಞಾನದ ಪೂರೈಕೆ, ಬೆಳೆಗೆ ಬೇಕಾದ ಪೋಷಕಾಂಶಗಳ ಮಾಹಿತಿ ಎಲ್ಲವನ್ನೂ ರೈತರಿಗೆ ಒದಗಿಸಿದ ಪರಿಣಾಮವೇ ದೇಶದ ಕೃಷಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ‘ಹಿಮಾಲಯದ ತುದಿಯಿಂದ ಕಡಲ ತಡಿಯ ಕನ್ಯಾಕುಮಾರಿವರೆಗೆ ದೇಶದಲ್ಲಿ 127 ವಿಧದ ಹವಾಗುಣದ ಕೃಷಿ ವಲಯಗಳಿವೆ. ಒಂದೊಂದು ವಲಯದ್ದೂ ವಿಭಿನ್ನವಾದ ಸಮಸ್ಯೆ. ಯಾವುದೇ ಒಂದು ಸಂಶೋಧನೆಯನ್ನು ದೇಶಕ್ಕೆ ಇಡಿಯಾಗಿ ಅನ್ವಯಿಸಲು ಸಾಧ್ಯವಿಲ್ಲ. ಒಂದು ಭಾಗಕ್ಕೆ ಅನ್ವಯ ಆಗುವಂತಹ ಯಾವುದೋ ಶೋಧವನ್ನು ಮತ್ತೊಂದು ಭಾಗದಲ್ಲಿ ಪ್ರಯೋಗಕ್ಕೆ ಒಡ್ಡಿ, ಅದು ನಿರರ್ಥಕ ಎನ್ನುವುದರಲ್ಲಿ ಅರ್ಥವಿಲ್ಲ’ ಎಂದು ಟೀಕೆಗಳಿಗೆ ಉತ್ತರಿಸುತ್ತಾರೆ.

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನಲ್ಲಿ ಈಗ ಅಯ್ಯಪ್ಪನ್ ಅವರ ಮುತುವರ್ಜಿಯಿಂದ ಬೆಟ್ಟ, ಕರಾವಳಿ, ಬಯಲುಸೀಮೆ, ಒಣಭೂಮಿ ಹಾಗೂ ನೀರಾವರಿ ಪ್ರದೇಶಕ್ಕೆ ಅನ್ವಯ ಆಗುವಂತೆ ಪ್ರತ್ಯೇಕ ಕೃಷಿ ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗುತ್ತಿದೆ. ಬರವನ್ನೂ ಮೆಟ್ಟಿ ನಿಲ್ಲುವಂತಹ ತಳಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಪರಿಷತ್ತು ಹಸಿರು ಕ್ರಾಂತಿಗೆ ಬದಲಾಗಿ ಸುಸ್ಥಿರ ಕೃಷಿಯತ್ತ ಗಮನಹರಿಸಿದೆ. ಸಮಗ್ರ ಕೃಷಿಯನ್ನು ಸಹ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತಳಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ. ಫಾರ್ಮರ್್ಸ ಫಸ್ಟ್ ಮತ್ತು ಸ್ಟೂಡೆಂಟ್ಸ್ ರೆಡಿ ಎನ್ನುವಂತಹ ಯೋಜನೆಗಳನ್ನೂ ಅನುಷ್ಠಾನಕ್ಕೆ ತರಲಾಗಿದೆ ಎನ್ನುತ್ತಾರೆ.

ದೇಶದ ವಿವಿಧ ಭಾಗಗಳಿಗೆ ಸರಿಹೊಂದುವಂತಹ 200 ಕೃಷಿ ವಿಧಾನಗಳ ಮಾದರಿ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ದೇಶದ ತುಂಬಾ ಅವುಗಳನ್ನು ಪರಿಚಯಿಸಲಾಗುತ್ತಿದೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಕೃಷಿ ಮಾಡುವುದು ಕಷ್ಟ ಎನ್ನುವುದು ಪರಿಷತ್ತಿನ ಅರಿವಿಗೂ ಬಂದಮೇಲೆ ಅಲ್ಲಿ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಸಾಧನೆ ಪಟ್ಟಿಗಳ ಮೇಲೆ ಕಣ್ಣು ಹಾಯಿಸುತ್ತಾ ಹೋದಂತೆ, ಇಷ್ಟೆಲ್ಲ ಮಾಡಿದ ಮೇಲೂ ರೈತರ ಆತ್ಮಹತ್ಯೆಗಳು ಘಟಿಸಲು ಕಾರಣವೇನು ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಯನ್ನು ಅಯ್ಯಪ್ಪನ್ ಅವರ ಮುಂದಿಟ್ಟಾಗ, ‘ಹೌದು, ರೈತರ ಆತ್ಮಹತ್ಯೆಗಳಿಗೆ ಇನ್ನೂ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಕೃಷಿ ವೆಚ್ಚ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕಡಿಮೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ಅಗ್ಗದ ವೆಚ್ಚದಲ್ಲಿ ಕೃಷಿ ಮಾಡುವ ತಂತ್ರಜ್ಞಾನವನ್ನೂ ನಾವು ಶೋಧಿಸುತ್ತಿದ್ದೇವೆ. ಕೃಷಿ ಮೇಲೆ ಆಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗೆಗೆ ವಿಶ್ಲೇಷಣೆ ಮಾಡುತ್ತಿದ್ದೇವೆ’ ಎಂದು ಉತ್ತರಿಸುತ್ತಾರೆ.

ಮಣ್ಣು, ಸಸ್ಯ, ಪ್ರಾಣಿ, ಮನುಷ್ಯ.. ಇವುಗಳು ಒಂದಕ್ಕೊಂದು ಪೂರಕ ಸಂಬಂಧ ಹೊಂದಿವೆ. ಅವುಗಳ ಈ ಸಂಬಂಧದ ಆರೋಗ್ಯ ಕಾಪಾಡುವುದು ಅಗತ್ಯವಾಗಿದೆ ಎಂದೆನ್ನುವ ಅವರು, ವಾತಾವರಣದ ವಿಕೋಪಗಳನ್ನು ತಡೆದುಕೊಳ್ಳಬಲ್ಲ ಆಹಾರ ಧಾನ್ಯಗಳ ತಳಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಹೇಳುತ್ತಾರೆ. ಕೃಷಿ ಕಾರ್ಮಿಕರ ಕೊರತೆ ಹೆಚ್ಚಿದ್ದು, ಈ ಸಮಸ್ಯೆ ನೀಗಿಸುವಂತಹ ಯಾಂತ್ರೀಕರಣ ವ್ಯವಸ್ಥೆ ಆಗಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.

‘ಟೊಮಾಟೊ ತಳಿಯೊಂದನ್ನು ಶೋಧಿಸಲಾಗಿದ್ದು, ಪ್ರತಿ ಹೆಕ್ಟೇರ್ಗೆ 90 ಟನ್ ಉತ್ಪನ್ನ ಸಿಗುತ್ತಿದೆ’ ಎನ್ನುತ್ತಾರೆ. ‘ಕೃಷಿ ಸಂಶೋಧನಾ ಪರಿಷತ್ತಿಗೆ ಕೊಟ್ಟ ಪ್ರತಿ 1ರೂಪಾಯಿಗೆ 13.50 ರೂಪಾಯಿಯಷ್ಟು ಪ್ರತಿಫಲ ನೀಡಲಾಗಿದೆ’ ಎಂದು ಹೇಳುತ್ತಾರೆ.
-ಪ್ರವೀಣ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.