ಭಾನುವಾರ, ಮೇ 9, 2021
18 °C

ಡಾನ್ ಬಾಸ್ಕೊ ಶಾಲೆಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬೈಯ ಡಾನ್ ಬಾಸ್ಕೊ ಪ್ರೌಢಶಾಲಾ ತಂಡ ಬಿಡಿಎಫ್‌ಎ ಹಾಗೂ ಪ್ರೊಕಾಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4-2 ಗೋಲುಗಳಿಂದ ಗೋವಾದ ಬ್ರಿಟ್ಟೊ ಪ್ರೌಢಶಾಲಾ ತಂಡವನ್ನು ಮಣಿಸಿತು.



ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ  ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಮಾರ್ಕ್ ಡಿಸೋಜಾ 29ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಇದೇ ಆಟಗಾರ 30 ಹಾಗೂ 45ನೇ ನಿಮಿಷದಲ್ಲಿ ಮತ್ತೆರೆಡು ಗೋಲುಗಳನ್ನು ತಂದಿತ್ತರು. ವಿಕ್ರಾಂತ್ ಬೆಲ್ವಾಕರ್ 34ನೇ ನಿಮಿಷದಲ್ಲಿ ಗೋಲು ಗಳಿಸಿದರು.



ಬೆಂಗಳೂರಿನ ಸೇಂಟ್ ಅಲೋಶಿಯಸ್ ಶಾಲೆ 3-0ಗೋಲುಗಳಿಂದ ಕೇರಳದ ಎಂಎಸ್‌ಪಿ ಎಚ್‌ಎಸ್‌ಎಸ್ ತಂಡದ ಮೇಲೆ ಜಯಿಸಿದರೆ, ದೆಹಲಿಯ ಸಿಆರ್‌ಪಿಎಫ್ ಶಾಲೆ 0-2ಗೋಲುಗಳಿಂದ ಕೋಲ್ಕತ್ತದ ಪಂಧು ಎಸ್‌ಬಿಎಸ್ ಪ್ರೌಢಶಾಲೆಯ ಎದುರು ಸೋಲು ಕಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.