ಮಂಗಳವಾರ, ಮೇ 18, 2021
28 °C

ಡಾಬಾದಲ್ಲಿ ಕೆಲಸ: ಓಟದಲ್ಲಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ:  ದೇವನಹಳ್ಳಿಯಲ್ಲಿ ನೆಲೆಸಿರುವ ಚಂದ್ರಶೇಖರ್ ಎಲೆ ಮರೆ ಕಾಯಂತೆ ಇರುವ  ಕ್ರೀಡಾ ಪ್ರತಿಭೆ.ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕ್ರೆಡಾಕೂಟದ 200ಮೀ ಪ್ರಥಮ, 100ಮೀ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದ ಓಟಗಾರ ಚಂದ್ರಶೇಖರ್. 2009-10ನೇ ಸಾಲಿನಲ್ಲಿ ಹೊಸದುರ್ಗದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದರು. ಎರಡು ಬಾರಿ ಜಿಲ್ಲಾಮಟ್ಟದಲ್ಲಿ ವೈಯಕ್ತಿಕ ಚಾಂಪಿಯನ್ ಪಟ್ಟ ಸಹ ಪಡೆದಿದ್ದರು.ಈ ಪ್ರತಿಭಾನ್ವಿತ ವಿದ್ಯಾರ್ಥಿ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ಕ್ರೆಡಾ ಕೂಟ ಯುವ ಜನೋತ್ಸವ ಕ್ರೆಡಾಕೂಟದಲ್ಲಿ ತಾಲ್ಲೂಕು ಮಟ್ಟದಲ್ಲಿ 22, ಜಿಲ್ಲಾ ಮಟ್ಟದಲ್ಲಿ 19, ವಿಭಾಗೀಯ ಮಟ್ಟದಲ್ಲಿ 8 ಹಾಗೂ ರಾಜ್ಯಮಟ್ಟದಲ್ಲಿ 7 ಬಾರಿ 100 ಮತ್ತು 200ಮೀ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪ್ರಶಸ್ತಿ ಪಡೆದು ತಮ್ಮ ಕೊರಳಿಗೆ ಹಾಕಿಸಿಕೊಂಡಿದ್ದಾರೆ.ಪ್ರಸ್ತುತ 100ಮೀ 11ಸೆಕೆಂಡ್ ಹಾಗೂ 200ಮೀ 22 ಸೆಕೆಂಡ್ ವೈಯಕ್ತಿಕ ದಾಖಲೆ ಹೊಂದಿರುವ ಚಂದ್ರಶೇಖರ್, 14ವರ್ಷದಿಂದ 20ವರ್ಷ ವಯೋಮಾನದಲ್ಲಿ ವಿವಿಧ ಹಂತದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಾಧನೆಗೆ ಆರ್ಥಿಕ ತೊಂದರೆಯಿದೆ.ಅವರಿಗೆ ಸಹಾಯ ಮಾಡಲು ಇಚ್ಛಿಸುವವರು ಮೊಬೈಲ್ 9035557227  ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.