ಭಾನುವಾರ, ಮೇ 16, 2021
22 °C

ಡಾ.ಶಂಕರ್‌ಗೆ ರಾಷ್ಟ್ರೀಯ ಪುರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ತಾಲ್ಲೂಕಿನ ಕಲ್ಕುಳಿಯ ಡಾ.ಕೆ.ಎಂ.ಶಂಕರ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ರಾಷ್ಟ್ರೀಯ ಜೈವಿಕ  ತಾಂತ್ರಿಕತೆ 2013 ದೊರಕಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಇತ್ತೀಚೆಗೆ ನವದೆಹಲಿಯಲ್ಲಿ ಸ್ವೀಕರಿಸಿದರು.ತೆಕ್ಕೂರಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಡಾ.ಕೆ.ಎಂ.ಶಂಕರ್ ಪರಿಸರವಾದಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರ ಸಹೋದರರಾಗಿದ್ದು, ಪ್ರಸ್ತುತ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ.ಶಂಕರ್ ಪಡೆದಿರುವ ಈ ಪ್ರಶಸ್ತಿಯು ಪ್ರಮಾಣ ಪತ್ರ, ಫಲಕ ಹಾಗೂ 2 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು  ಹೊಂದಿದೆ.ಸೀಗಡಿ ಕೃಷಿಯಲ್ಲಿ ಮಾರಕವಾದ ಬಿಳಿಚುಕ್ಕೆ ವೈರಸ್ ರೋಗ ಸೇರಿದಂತೆ ನಾಲ್ಕು ಇತರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ದಿಂದ ಬರುವ ಮೀನು ರೋಗ ಪತ್ತೆಹಚ್ಚುವ ಸಾಧನವನ್ನು ಅಭಿವೃದ್ಧಿ ಪಡಿಸಿ ವಾಣಿಜ್ಯೀಕರಣಗೊಳಿಸಿದ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹೈಬ್ರಿಡೋಮ ತಾಂತ್ರಿಕತೆಯ ಮೊನೋಕ್ಲೋನಲ್ ಬಳಸಿ ರೈತರೇ ಶೀಘ್ರವಾಗಿ, ಸುಲಭವಾಗಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗ ಪತ್ತೆ ಹಚ್ಚುವ ಸಾಧನ ಇದಾಗಿದೆ.ಈ ಹಿಂದೆ 2008 ರಲ್ಲಿ ಡಾ. ಶಂಕರ್ ಅವರು ಜಲಕೃಷಿಯಲ್ಲಿ ಜೈವಿಕ ವಿಜ್ಞಾನದ ಭೋದನೆ ಮತ್ತು ಸಂಶೋಧನೆಯ ಅಳವಡಿಕೆಗೆ ಭಾರತರತ್ನ ಡಾ.ಸಿ. ಸುಬ್ರಮಣಿಯನ್ ಅತ್ಯುತ್ತಮ ಶಿಕ್ಷಣ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಸುಮಾರು 20 ವರ್ಷಗಳಿಂದ ಡಾ.ಶಂಕರ್ ಮತ್ತು ಅವರ ತಂಡ ಬಯೋಫಿಲ್ಡ್ ಲಸಿಕೆ ಮತ್ತು ಹೈಬ್ರಿಡೋಮ ತಾಂತ್ರಿಕತೆಯ ಜೈವಿಕ ತಂತ್ರಜ್ಞಾನದಲ್ಲಿ, ರಾಷ್ರ್ಟೀಯ ಮತ್ತು ಅಂತರ ರಾಷ್ಟ್ರೀಯ ಸಂಸ್ಥೆಗಳ ಅನುದಾನದೊಂದಿಗೆ ಸಂಶೋಧನೆ ನಡೆಸುತ್ತಿದ್ದಾರೆ. ಜೈವಿಕ ತಾಂತ್ರಿಕತೆ ಮತ್ತು 50ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನಾ ಪ್ರಬಂಧಗಳನ್ನು ಇವರು ಪ್ರಕಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.