ಡಿಎನ್‌ಎ ಬೆರಳಚ್ಚು ಪರೀಕ್ಷೆಗೆ ಹಿನ್ನಡೆ

ಬುಧವಾರ, ಮೇ 22, 2019
32 °C

ಡಿಎನ್‌ಎ ಬೆರಳಚ್ಚು ಪರೀಕ್ಷೆಗೆ ಹಿನ್ನಡೆ

Published:
Updated:

ಹೈದರಾಬಾದ್: ತಂದೂರಿ ಕೊಲೆ ಪ್ರಕರಣ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಂತಹ ಪ್ರಕರಣಗಳ ತನಿಖೆಗೆ ನೆರವಾಗಿದ್ದ ಡಿಎನ್‌ಎ ಬೆರಳಚ್ಚು ವಿಧಾನವು ದುಬಾರಿ ವೆಚ್ಚದಿಂದಾಗಿ ಈಗ ಹಿನ್ನಡೆ ಅನುಭವಿಸುತ್ತಿದೆ.ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಪೊಲೀಸ್ ಇಲಾಖೆಯು ಪ್ರತಿ ಪರೀಕ್ಷೆಗೂ 5 ಸಾವಿರ ರೂಪಾಯಿ ವ್ಯಯಿಸಬೇಕಾಗುತ್ತದೆ. ಮೂಲ ಮಾದರಿಗೆ ಹೋಲಿಸಲು ಕನಿಷ್ಠ ಮೂರು ಬಾರಿಯಾದರೂ ಬೆರಳಚ್ಚು ಪರೀಕ್ಷೆ ಮಾಡಬೇಕಾಗಿರುವುದರಿಂದ ಪ್ರತಿ ಪ್ರಕರಣಕ್ಕೆ ಏನಿಲ್ಲವೆಂದರೂ 20 ಸಾವಿರ ರೂಪಾಯಿ ಖರ್ಚಾಗುತ್ತದೆ.`ಡಿಎನ್‌ಎ ಪರೀಕ್ಷೆಯಲ್ಲಿ ಬಳಸುವ ರಾಸಾಯನಿಕ ವಸ್ತು ದೇಶೀಯವಾಗಿ ಲಭ್ಯವಿರದ ಕಾರಣ ಆಮದು ಮಾಡಿಕೊಳ್ಳಲಾಗುತ್ತದೆ. ಹಾಗಾಗಿಯೇ ಬೆರಳಚ್ಚು ಮಾದರಿ ಪರೀಕ್ಷೆ ದುಬಾರಿಯಾಗುತ್ತದೆ. ಅದು ದೇಶೀಯವಾಗಿ ಲಭ್ಯವಾದಲ್ಲಿ ವೆಚ್ಚ ಕಡಿಮೆ ಆಗಲಿದೆ~ ಎಂದು ಡಿಎನ್‌ಎ ಬೆರಳಚ್ಚು ಹಾಗೂ ವಿಶ್ಲೇಷಣಾ ಕೇಂದ್ರದ (ಸಿಡಿಎಫ್‌ಡಿ) ನಿರ್ದೇಶಕ ಜೆ.ಗೌರಿಶಂಕರ್ ಹೇಳುತ್ತಾರೆ. ಡಿಎನ್‌ಎ ಬೆರಳಚ್ಚು ಪರೀಕ್ಷೆಯು ಅಲ್ಲಗಳೆಯಲಾಗದ ಪುರಾವೆ ಮೂಲಕ ಖಂಡಿತವಾಗಿಯೂ ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಆ ಮೂಲಕ ಅಪರಾಧ ನ್ಯಾಯಾಂಗ ವ್ಯವಸ್ಥೆ ಸುಧಾರಿಸುತ್ತದೆ ಎನ್ನುತ್ತಾರೆ ಅವರು.ಭುವನೇಶ್ವರದಲ್ಲಿರುವ ಜೀವವಿಜ್ಞಾನ ಸಂಸ್ಥೆಯಲ್ಲಿ ಡಿಎನ್‌ಎ ಪರೀಕ್ಷಾ ವ್ಯವಸ್ಥೆಗೆ ಇತ್ತೀಚೆಗೆ ಒಡಿಶಾ ಸರ್ಕಾರದ ಜತೆ ಸಿಡಿಎಫ್‌ಡಿಯು ಒಪ್ಪಂದಕ್ಕೆ ಸಹಿ ಹಾಕಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು, ಶವದ ಗುರುತು ಹಾಗೂ ನಾಪತ್ತೆಯಾದವರ ಗುರುತು ಪತ್ತೆಗೆ ಈ ಪ್ರಯೋಗಾಲಯವು ಸರ್ಕಾರಕ್ಕೆ ನೆರವು ನೀಡಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry