ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಂದ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿ ತುಮಕೂರಿನ ದಂಪತಿ ತಮ್ಮ ಮಕ್ಕಳಿಗೆ ವಿಷ ಕುಡಿಸಿ ನಂತರ ತಾವೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ನಗರದ ಪೊಲೀಸ್ ಮಹಾನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದಿದೆ.

ತುಮಕೂರಿನ ಕೆ.ಆರ್.ಬ್ಲಾಕ್ ನಿವಾಸಿಗಳಾದ ಕೆ.ಮಹೇಶ್ (38), ಅವರ ಪತ್ನಿ ದಾಕ್ಷಾಯಿಣಿ (32), ಮಗಳು ವಿದ್ಯಾ (16) ಹಾಗೂ ಮಗ ಚಂದನ್ (11) ವಿಷ ಕುಡಿದು ಅಸ್ವಸ್ಥಗೊಂಡಿದ್ದು, ಅವರನ್ನು ನೃಪತುಂಗ ರಸ್ತೆಯಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿವೃತ್ತ ಎಸಿಪಿ ಸುಬ್ಬಣ್ಣ ಅವರು ತಮ್ಮ ಕುಟುಂಬಕ್ಕೆ ವಂಚಿಸಿದ್ದಾರೆ ಎಂದು ದೂರಿ ಬಗ್ಗೆ ಮಧ್ಯಾಹ್ನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದಾಕ್ಷಾಯಿಣಿ, `ಎಸಿಪಿ ಸುಬ್ಬಣ್ಣ, ಅಣ್ಣಂದಿರಾದ ಕಾಂತರಾಜು, ಸೋಮಶೇಖರ್ ಹಾಗೂ ತುಮಕೂರಿನ ಪೊಲೀಸರು ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ.

ಈಗ ಇಡೀ ಕುಟುಂಬವೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ತಂದಿದ್ದಾರೆ' ಎಂದು ಹೇಳಿದರು. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿ ದೂರು ಸಲ್ಲಿಸುವುದಾಗಿ ಪತಿ ಮಕ್ಕಳೊಂದಿಗೆ ಹೊರಟರು. ಆದರೆ, ದಂಪತಿ ಮಾರ್ಗ ಮಧ್ಯೆಯೇ ಮಕ್ಕಳಿಗೆ ವಿಷ ಕುಡಿಸಿ, ತಾವೂ ವಿಷ ಕುಡಿದಿದ್ದಾರೆ.

ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಬಂದು ಮಕ್ಕಳನ್ನು ಸ್ವಾಗತಕಾರರ ಕೊಠಡಿಯಲ್ಲಿ ಕೂರಿಸಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಹೋಗಿದ್ದಾರೆ. ಆದರೆ, ಮೆಟ್ಟಿಲು ಹತ್ತುವಾಗ ದಾಕ್ಷಾಯಿಣಿ ವಾಂತಿ ಮಾಡಿಕೊಂಡು ಕುಸಿದು ಬಿದ್ದಿದ್ದಾರೆ. ಬಳಿಕ ಸ್ವಾಗತಕಾರರ ಕೊಠಡಿಯಲ್ಲಿದ್ದ ವಿದ್ಯಾ ಕೂಡ ವಾಂತಿ ಮಾಡಿಕೊಂಡಿದ್ದಾಳೆ.

ಈ ವೇಳೆ ಸ್ಥಳದಲ್ಲಿದ್ದ ಹಲಸೂರು ಗೇಟ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಬಿ.ಆರ್. ಪಾಲಾಕ್ಷ ಹಾಗೂ ಕೆಎಸ್ಆರ್ಪಿ ಕಾನ್ಸ್ಟೆಬಲ್ ಕೆ.ನರಸಿಂಹಯ್ಯ ಅವರು ನಾಲ್ಕೂ ಮಂದಿಯನ್ನು ಸಮೀಪದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿದರು.

ಅಣ್ಣನ ಸ್ನೇಹಿತ ಸುಬ್ಬಣ್ಣ: ಮೊದಲು ತುಮಕೂರಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಸುಬ್ಬಣ್ಣ, ಅಣ್ಣ ಸೋಮಶೇಖರ್ ಅವರ ಸ್ನೇಹಿತರಾಗಿದ್ದರು. ಹೀಗಾಗಿ, ಈ ವಿವಾದದಲ್ಲಿ ಮಧ್ಯಪ್ರವೇಶ ಮಾಡಿ ಅಣ್ಣನ ಪರವಾಗಿ ವರ್ತಿಸುತ್ತಿದ್ದರು ಎಂದು ದಾಕ್ಷಾಯಿಣಿ ಪರ ವಕೀಲರು ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ಪಂತ್, `ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದಂಪತಿಯ ಹೇಳಿಕೆ ಪಡೆದು ಈ ಸಂಬಂಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹೇಳಿದರು.

ಪ್ರಕರಣದಲ್ಲಿ ಮಡಿವಾಳ ಉಪ ವಿಭಾಗದ ಎಸಿಪಿಯಾಗಿ ನಿವೃತ್ತಿ ಪಡೆದ ಸುಬ್ಬಣ್ಣ ಅವರ ಪಾತ್ರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಆಸ್ತಿ ಹಂಚಿಕೆ ಸಂಬಂಧ ದಾಕ್ಷಾಯಿಣಿ ಹಾಗೂ ಅವರ ಅಣ್ಣಂದಿರ ನಡುವೆ ವಿವಾದವಿದೆ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಸುಬ್ಬಣ್ಣ ಮಧ್ಯಪ್ರವೇಶ ಮಾಡಿ, ಸಂಧಾನ ಮಾಡಿಸಿದ್ದರು ಎಂಬುದು ಗೊತ್ತಾಗಿದೆ.

ಆದರೆ, ರಾಜಿ ನಂತರವೂ ತಕರಾರು ಮುಂದುವರಿದಿದ್ದು, ಈ ಸಂಬಂಧ ತುಮಕೂರಿನ ಠಾಣೆಗಳಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಸುಬ್ಬಣ್ಣ ಸೇರಿದಂತೆ ದಾಕ್ಷಾಯಿಣಿ ಅವರ ಅಣ್ಣಂದಿರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು' ಎಂದರು.

`ದಂಪತಿ ಹಾಗೂ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಸೇಂಟ್ ಮಾರ್ಥಾಸ್ನ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಆರ್.ಪ್ರವೀಣ್ ಹೇಳಿದರು.

16 ಪುಟಗಳ ವಿವರಣಾ ಪತ್ರ
ದಾಕ್ಷಾಯಿಣಿ ಆತ್ಮಹತ್ಯೆಗೆ ಯತ್ನಿಸುವ ಮುನ್ನ 16 ಪುಟಗಳ ಪತ್ರ ಬರೆದಿಟ್ಟಿದ್ದಾರೆ. ಅದರಲ್ಲಿ ಅಣ್ಣಂದಿರು ಹಾಗೂ ನಿವೃತ್ತ ಎಸಿಪಿ ಸುಬ್ಬಣ್ಣ ಅವರು ವಂಚಿಸಿದ ಬಗ್ಗೆ ವಿವರವಾಗಿ ಬರೆದಿದ್ದಾರೆ.

`ತುಮಕೂರಿನ ಅರಕೆರೆ ಬಳಿ ಸುಮಾರು ರೂ 20 ಕೋಟಿ ಬೆಲೆ ಬಾಳುವ ಪಿತ್ರಾರ್ಜಿತ ಆಸ್ತಿ ಇದೆ. ಆ ಆಸ್ತಿಯಲ್ಲಿ ಭಾಗ ಕೇಳಿದಾಗ ಅಣ್ಣಂದಿರು ಸಾರಾಸಗಟಾಗಿ ಆಸ್ತಿಯಲ್ಲಿ ಬಿಡಿಗಾಸು ಕೊಡುವುದಿಲ್ಲ ಎಂದು ಹೇಳಿದರು. ಆಗ ನಾನು ನ್ಯಾಯಾಲಯದ ಮೊರೆ ಹೋದೆ. ಈ ವೇಳೆ ಮಧ್ಯ ಪ್ರವೇಶಿದ ಎಸಿಪಿ ಸುಬ್ಬಣ್ಣ, ವಕೀಲರ ಶುಲ್ಕ ಜಾಸ್ತಿಯಿರುತ್ತದೆ. ನೀವು ನ್ಯಾಯಾಲಯದ ಹೊರಗೆಯೇ ರಾಜಿ ಮಾಡಿಕೊಳ್ಳಿ ಎಂದು ನಂಬಿಸಿ 2011 ರಲ್ಲಿ ಸಂಧಾನ ಮಾಡಿಸಿದ್ದರು' ಎಂದು ಪತ್ರದಲ್ಲಿ ಬರೆದಿದ್ದಾರೆ.

`ಬಳಿಕ ಮಾತುಕತೆಯಂತೆ ಸುಬ್ಬಣ್ಣ ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸದಿದ್ದಾಗ, ಪತಿ ನ್ಯಾಯಾಲಯದಲ್ಲಿ ಮತ್ತೊಂದು ಮೊಕದ್ದಮೆ ಹೂಡಿದ್ದರು. ಇದರಿಂದ ಕೋಪಗೊಂಡ ಅವರು, ಪತಿಯನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಸಿದ್ದರು. ಪ್ರಕರಣದ ವಿಚಾರಣೆಯ ದಿನವೇ ಪತಿಯನ್ನು ಅಪಹರಿಸಿ ತುಮಕೂರಿನ ವಸತಿ ಗೃಹವೊಂದರಲ್ಲಿ ಬಂಧಿಸಿಟ್ಟಿದ್ದರು. ಬಳಿಕ ಅಣ್ಣಂದಿರು ನನ್ನನ್ನು ಅಪಹರಿಸಿ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದರು' ಎಂದು ದಾಕ್ಷಾಯಿಣಿ ಪತ್ರದಲ್ಲಿ ತಿಳಿಸಿದ್ದಾರೆ.

`ತುಮಕೂರಿನ ಎಸ್ಪಿಗೆ ನಾಲ್ಕು ಬಾರಿ, ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಎರಡು ಬಾರಿ, ಡಿಜಿಪಿ ಮತ್ತು ನಗರ ಪೊಲೀಸ್ ಕಮಿಷನರ್ಗೆ ಐದು ಬಾರಿ, ಮಾನವ ಹಕ್ಕುಗಳ ಆಯೋಗಕ್ಕೆ ಮೂರು ಬಾರಿ ಹಾಗೂ ಈಶಾನ್ಯ ವಿಭಾಗದ ಡಿಸಿಪಿ ಹರ್ಷ ಅವರಿಗೆ ಮೂರು ಬಾರಿ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ' ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.