ಶನಿವಾರ, ಜನವರಿ 25, 2020
28 °C

ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವರ್ಷದಲ್ಲಿ ಮಕ್ಕಳನ್ನು ರಂಜಿಸಲು ಡಿಸ್ನಿ ಪ್ರಿನ್ಸೆಸ್ ಅಕಾಡೆಮಿ ಜನವರಿ ಐದರಂದು ನಗರದಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಡಿಸ್ನಿ ಪ್ರಿನ್ಸೆಸ್ ಅಕಾಡೆಮಿಯ ಎರಡನೇ ಸಂಚಿಕೆ ಇದಾಗಿದ್ದು, ೩500ಕ್ಕೂ ಹೆಚ್ಚು ಹೆಣ್ಣುಮಕ್ಕಳು ನೃತ್ಯ ತರಬೇತಿ, ಕಿರೀಟ ತಯಾರಿ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇಶದ ಎಂಟು ನಗರಗಳಲ್ಲಿ ನಡೆಯುವ ಕಾರ್ಯಾಗಾರದಲ್ಲಿ ತಲಾ ಒಬ್ಬ ವಿಜೇತರನ್ನು ಆಯ್ಕೆ ಮಾಡಲಾಗುವುದು. ವಿಜೇತರು ಚಾನೆಲ್ ನಡೆಸುವ ನಿಗದಿತ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಅವಕಾಶವಿದೆ. ಇಷ್ಟೇ ಅಲ್ಲ, ಡಿಸ್ನಿಯ ಯಾವುದೇ ಉತ್ಪನ್ನಗಳ ಖರೀದಿ ಮೂಲಕವೂ ಈ ಕಾರ್ಯಾಗಾರಕ್ಕೆ ಪ್ರವೇಶ ಪಡೆಯಬಹುದು ಎಂದು ಡಿಸ್ನಿ ಯುಟಿವಿಯ ಪರವಾನಗಿ ಮತ್ತು ಚಿಲ್ಲರೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ರೋಶಿನಿ ಬಕ್ಷಿ ತಿಳಿಸಿದ್ದಾರೆ.ಡಿಸ್ನಿ ಸರಣಿಯ ಸಂಗ್ರಹಗಳು ಶಾಪರ್ಸ್ ಸ್ಟಾಪ್, ಬಿಗ್ ಬಜಾರ್, ಲೈಫ್‌ಸ್ಟೈಲ್, ರಿಲಯನ್ಸ್ ಫುಟ್‌ಪ್ರಿಂಟ್, ಲ್ಯಾಂಡ್‌ಮಾರ್ಕ್ ಮತ್ತು ಆನ್ಲೈನ್ ಪೋರ್ಟಲ್‌ಗಳಾದ ಫ್ಲಿಪ್‌ಕಾರ್ಟ್.ಕಾಂ (www.flipkart.com) ಮತ್ತು ಬೇಬಿಓಯ್.ಕಾಂ (www.babyoye.com) ಮುಂತಾದ ಕಡೆ ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಲಾಗಾನ್ ಆಗಿ: www.disney.in/dpa

ಪ್ರತಿಕ್ರಿಯಿಸಿ (+)