ಭಾನುವಾರ, ಜನವರಿ 26, 2020
23 °C

ಡಿ.14ಕ್ಕೆ ಸಮನ್ವಯ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತು­ವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ನೇತೃತ್ವದಲ್ಲಿ ಇದೇ 14ರಂದು ಕೆಪಿಸಿಸಿ ಚುನಾವಣಾ ಸಮಿತಿ ಹಾಗೂ ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿಯ ಸಭೆ ನಡೆಯಲಿದೆ.ಈ ಮೊದಲು ಡಿಸೆಂಬರ್‌ 15ಕ್ಕೆ ಎರಡೂ ಸಭೆಗಳನ್ನು ನಿಗದಿ ಮಾಡ­ಲಾಗಿತ್ತು. ಆದರೆ, ಒಂದು ದಿನ ಮುಂಚಿ­ತ­ವಾಗಿ (ಡಿ.14) ದಿಗ್ವಿಜಯ್‌ ಸಿಂಗ್‌ ಅವರು ಬೆಂಗಳೂರಿಗೆ ಬರಲಿದ್ದು, ಎರಡೂ ಸಭೆಗಳು ಅದೇ ದಿನ ನಡೆಯ­ಲಿವೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ತಯಾರಿ ಕುರಿತು ಚುನಾವಣಾ ಸಮಿತಿಯ ಸಭೆ­ಯಲ್ಲಿ ಚರ್ಚೆ ನಡೆಯಲಿದೆ.ಕೆಪಿಸಿಸಿ ನಿಯೋಜಿಸಿದ್ದ ವೀಕ್ಷಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಭೇಟಿನೀಡಿ ಸಂಭವ­ನೀಯ ಅಭ್ಯರ್ಥಿಗಳ ಕುರಿತು ನೀಡಿ­ರುವ ವರದಿ, ಕೆಪಿಸಿಸಿ ಪದಾಧಿ­ಕಾ­ರಿಗಳು ನೀಡಿರುವ ಪಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು ಕಳುಹಿಸಿರುವ ವರ­ದಿ­ಗಳ ಕುರಿತು ಚರ್ಚೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.ಚುನಾವಣಾ ಸಮಿತಿ ಸಭೆ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಲಿದೆ. ದಿಗ್ವಿಜಯ್‌ ಸಿಂಗ್‌, ಮುಖ್ಯಮಂತ್ರಿ ಸಿದ್ದ­ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್, ಗೃಹ ಸಚಿವ ಕೆ.ಜೆ.­ಜಾರ್ಜ್, ಶಾಸಕ ಡಿ.ಕೆ.ಶಿವಕುಮಾರ್‌, ಎಐಸಿಸಿ ಕಾರ್ಯದರ್ಶಿ ಶಾಂತಾರಾಂ ನಾಯ್ಕ್ ಮತ್ತು ಚೆಲ್ಲಕುಮಾರ್‌ ಸಭೆ­ಯಲ್ಲಿ ಭಾಗವಹಿಸುವರು.ನಿಗಮ, ಮಂಡಳಿ­ಗಳಿಗೆ ನೇಮಕಾತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)