ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷಾ ಜ್ಞಾನ, ಸ್ಪೆಲ್ಲಿಂಗ್ ಬಗ್ಗೆ ಆಸಕ್ತಿ ಮತ್ತು ಕೌಶಲವನ್ನು ಹೆಚ್ಚಿಸುವ ಉದ್ದೇಶದಿಂದ ಎಕ್ಸ್ಪ್ರೋಸಿಟಿ ಸಂಸ್ಥೆಯು ‘ಸ್ಪೆಲ್ಲಿಂಗ್ ವಿಜ್ ಕಿಡ್’ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಿದೆ. ಎಂಬೆಸಿ ಗ್ರೂಪ್ ಪ್ರಾಯೋಜಿಸಿರುವ ಈ ಸ್ಪರ್ಧೆಯಲ್ಲಿ 13 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವಿರುತ್ತದೆ.

ಜಗತ್ತಿನಲ್ಲಿ ಬಹು ಬೇಡಿಕೆಯ ಸಂವಹನ ಮಾಧ್ಯಮವಾಗಿರುವ ಇಂಗ್ಲಿಷ್ನಲ್ಲಿ ಮಕ್ಕಳು ಹೆಚ್ಚು ಹಿಡಿತ ಸಾಧಿಸುವಂತೆ ಮಾಡುವುದು ನಮ್ಮೆಲ್ಲರ ಹೊಣೆ. ಈ ಸ್ಪರ್ಧೆಯ ಮೂಲಕ ಮಕ್ಕಳ ಇಂಗ್ಲಿಷ್ ಜ್ಞಾನಕ್ಕೆ ಸಾಣೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಕ್ಸ್ಪ್ರೋಸಿಟಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ಸಂಪಾದಕ ರಾಮ್ಜೀ ಚಂದ್ರನ್ ಹೇಳಿದ್ದಾರೆ.

ನಗರದ ಸುಮಾರು 250 ಶಾಲೆಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಶಾಲೆಗಳಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಪ್ರತಿ ಶಾಲೆಯಿಂದ ಐವರು ಸ್ಪರ್ಧಿಗಳನ್ನು ಕಳುಹಿಸಬಹುದು. ಆರಂಭಿಕ ಮುಕ್ತ ಸುತ್ತಿನಲ್ಲಿ ಸ್ಪೆಲ್ಲಿಂಗ್ ಕೌಶಲದ ಪರೀಕ್ಷೆ ಮಾಡಿ ಸ್ಪರ್ಧಾತ್ಮಕ ಸುತ್ತಿಗೆ 40 ವಿದ್ಯಾರ್ಥಿಗಳನ್ನು ಆರಿಸಿ ಅದರಲ್ಲಿ 10 ಮಂದಿಯನ್ನು ಸೆಮಿಫೈನಲ್ಗೆ ಆರಿಸಲಾಗುವುದು. ಅಂತಿಮ ಸುತ್ತಿನಲ್ಲಿ ಇಬ್ಬರು ವಿಜ್ಕಿಡ್ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಾರೆ.

ಪ್ರವೇಶ ಪಡೆಯಲಿಚ್ಚಿಸುವ ಶಾಲೆಗಳು ಫೇಸ್ಬುಕ್ ಪೇಜ್ facebook.com/BangaloreSpellingBee ಅಥವಾ ಅಧಿಕೃತ ವೆಬ್ಸೈಟ್ www.BangaloreSpellingBee.com ಸಂಪರ್ಕಿಸಬಹುದು. ಡಿ. ಎಂಟರಂದು ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.